ತಿರುವನಂತಪುರ: ಲಾಕ್​ಡೌನ್​ ನಡುವೆಯೂ ಶಿಕ್ಷಕಿ ಸರ್ಕಾರಿ ವಾಹನದಲ್ಲಿ ಕರ್ನಾಟಕದ ಮೂಲಕ ದೆಹಲಿಗೆ ಪ್ರಯಾಣ ಮಾಡುವ ವೇಳೆ ವಯನಾಡಿನ ಮಥಂಗಾದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಶಿಕ್ಷಕಿ ಏ. 21 ರಂದು ಪ್ರಯಾಣ ಆರಂಭಿಸಿ ಕರ್ನಾಟಕದ ಮೂಲಕ  ದೆಹಲಿಗೆ ತೆರಳಲು ಮುಂದಾಗಿದ್ದರು.  ಮಹಿಳೆ ಕೇರಳದಲ್ಲಿ ಅಂದಾಜು 465 ಕಿ.ಮೀ ದೂರ ಸಂಚರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸಲು ಯಾರಿಗೂ ಅನುಮತಿ ನೀಡಿಲ್ಲ. ಆದರೆ ಶಿಕ್ಷಕಿ ಸರ್ಕಾರಿ ವಾಹನದ ಮೂಲಕ ಕೇರಳ ಗಡಿವರೆಗೆ ತೆರಳಿ ಅಲ್ಲಿಂದ ದೆಹಲಿಗೆ ಹೋಗಲು ನಿರ್ಧರಿಸಿದ್ದರು. ಹೀಗಾಗಿ ಇವರು ಸರ್ಕಾರಿ ವಾಹನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ತಿರುವನಂತಪುರದ ಪಾಟೋಮ್​ನ ಕೇಂದ್ರೀಯ ಶಾಲೆಯ ಶಿಕ್ಷಕಿ ಅಬಕಾರಿ ಇಲಾಖೆಯ ವಾಹನದಲ್ಲಿ ತಾಮರಸರಿಯಿಂದ ವೈಯ್​ನಾಡಿನ ಕಲ್ಪೆಟ್ಟಾಗೆ ಬಂದಿದ್ದಾರೆ. ಅಲ್ಲಿಂದ ಕರ್ನಾಟಕಕ್ಕೆ ಪ್ರವೇಶ ಮಾಡಲು ಮುಂದಾಗಿದ್ದರು ಎನ್ನುವ ಮಾಹಿತಿ ಇದೆ.
ಮಹಿಳೆ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಮಹಿಳೆ ಅನುಮತಿ ಇಲ್ಲದೆ 465 ಕಿ.ಮೀ. ದೂರ ಪ್ರಯಾಣಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಸರ್ಕಾರ ಲಾಕ್​ಡೌನ್​ ಅನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದೆ. ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳು ಕೂಡ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ತೆರಳದಂತೆ ಸೂಚನೆ ನೀಡಿದೆ. (ಏಜೆನ್ಸೀಸ್​)
ಲಾಕ್​ಡೌನ್​ನಿಂದಾಗಿ ದಕ್ಷಿಣ ಭಾರತದಲ್ಲೇಕೆ ಶುಭ್ರವಾಗಿಲ್ಲ ವಾಯಮಂಡಲ? ನಾಸಾ ಅಧ್ಯಯನ ಹೇಳೋದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + ten =
Remember me
