ನವದೆಹಲಿ:ಕೇಂದ್ರ ಸರ್ಕಾರ ಅನ್​ಲಾಕ್​ 3.0 ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸದ್ಯಕ್ಕೆ ಆಗಸ್ಟ್​ 13ರ ವರೆಗೆ ಶಾಲಾ- ಕಾಲೇಜು ಆರಂಭಕ್ಕೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಇದರ ಹೊರತಾಗಿಯೂ ಹಲವು ರಾಜ್ಯಗಳು ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಚಿಂತನೆ ನಡೆಸಿವೆ. ಏಕೆಂದರೆ, ಸೆ.30ರೊಳಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್​ಗಳ ಅಂತಿಮ ಸೆಮಿಸ್ಟರ್​ ಅಥವಾ ವರ್ಷದ ಪರೀಕ್ಷೆ ಮುಗಿಸಬೇಕಾದ ಸವಾಲು ಕೂಡ ಎದುರಿಗಿದೆ.
ಇದನ್ನೂ ಓದಿ;ಆಗಸ್ಟ್​ನಲ್ಲಿ ಕರ್ನಾಟಕ ಶಿಕ್ಷಣ ನೀತಿ ಅಂತಿಮ: ಸಚಿವ ಸುರೇಶ್​ಕುಮಾರ್ ಮಾಹಿತಿ; ಸಮಿತಿ ರಚನೆ
ಆಂಧ್ರಪ್ರದೇಶದಲ್ಲಿ ಸೆಪ್ಟಂಬರ್​ 5ರಂದು ಶಾಲಾ-ಕಾಲೇಜುಗಳು ಆರಂಭವಾಗಲಿವೆ ಎಂದು ಈಗಾಗಲೇ ಶಿಕ್ಷೀನ ಸಚಿವ ಆದಿಮುಲಪು ಸುರೇಶ್​ ಘೋಷಿಸಿದ್ದಾರೆ. ಇದೀಗ ಈ ಸಾಲಿಗೆ ಅಸ್ಸಾಂ ಕೂಡ ಸೇರಿಕೊಂಡಿದೆ.
ಸೆಪ್ಟಂಬರ್​ 1ರಂದು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಅಸ್ಸಾಂ ಯೋಜನೆ ರೂಪಿಸಿದೆ. ಆಧರೆ, ಅಂತಿಮ ನಿರ್ಧಾರ ಕೇಂದ್ರದ ಮಾರ್ಗಸೂಚಿಗಳನ್ನೇ ಆಧರಿಸಿರಲಿದೆ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಶಿಕ್ಷಣ ಸಚಿವ ಹಿಮಾಂತಾ ಬಿಸ್ವ ಸರ್ಮಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ;ಹೆಚ್ಚಾಗಲಿದೆ ಕರೆ ದರ, ಡೇಟಾ ಶುಲ್ಕ; ಬಳಕೆ ಹೆಚ್ಚಾದರೂ ನಷ್ಟದಲ್ಲಿವೆಯಂತೆ ಕಂಪನಿಗಳು…!
ಆಂಧ್ರದಲ್ಲಿ ಕಳೆದ 3 ದಿನಗಳಿಂದ 30 ಸಾವಿರಕ್ಕೂ ಅಧಿಕ ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಅಲ್ಲಿಯೂ ಶಿಕ್ಷಣ ಸಂಸ್ಥೆಗಳ ಆರಂಭದ ಬಗ್ಗೆ ಮತ್ತೆ ಅನಿಶ್ಚಿತತೆ ಎದುರಾಗಿದೆ.
ದೇಶದಲ್ಲೇ ತಯಾರಾಗಲಿವೆ 11 ಲಕ್ಷ ಕೋಟಿ ರೂ. ಮೌಲ್ಯದ ಸ್ಮಾರ್ಟ್​ಫೋನ್​ಗಳು; ಸ್ವಾವಲಂಬಿ ಭಾರತಕ್ಕೆ ಬಂತು ಬಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 6 =
Remember me
