ನವದೆಹಲಿ:ಆರ್ಥಿಕ ದುರ್ಬಲ ವರ್ಗಗಳ ಮಕ್ಕಳನ್ನು ಶಿಕ್ಷಣ ಹಕ್ಕಿನ ಕಾನೂನು (ಆರ್​ಟಿಇ) ಅನ್ವಯ ಶಾಲೆಗಳಿಗೆ ದಾಖಲಾತಿ ಮಾಡಿಕೊಳ್ಳದೆ (ವಿನಾಯಿತಿಯ ಲಾಭಪಡೆದು) ದೇಶದಾದ್ಯಂತ ಅಲ್ಪಸಂಖ್ಯಾತ ಮಾನ್ಯತೆಯ ಶಾಲೆಗಳು ವಾರ್ಷಿಕ ಸಾವಿರಾರು ಕೋಟಿ ರೂಪಾಯಿಯನ್ನು ಉಳಿಸುತ್ತಿವೆ.ಈ ಪೈಕಿ ಕ್ರೖೆಸ್ತ ಸಂಘ-ಸಂಸ್ಥೆಗಳ 12,904 ಶಾಲೆಗಳಿದ್ದು, ಉಳಿಸುವ ಹಣದ ವಾರ್ಷಿಕ ಮೊತ್ತ ಸುಮಾರು 2,500 ಕೋಟಿ ರೂಪಾಯಿ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್​ಸಿಪಿಸಿಆರ್) ಅಂದಾಜು ಮಾಡಿದೆ. ಈ ಅಂದಾಜನ್ನು ಮುಂದಿಟ್ಟುಕೊಂಡು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಕೂಡ ಆರ್​ಟಿಇ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಆಯೋಗ ಚಿಂತನೆ ನಡೆಸಿದೆ.
ಕಡ್ಡಾಯ:ಎಲ್ಲ ಅನುದಾನರಹಿತ ಶಾಲೆಗಳು ಪ್ರಾಥಮಿಕ ಹಂತದಲ್ಲ ಬಡ ಮಕ್ಕಳಿಗೆ ಪ್ರವೇಶ ನೀಡಬೇಕೆಂದು ಆರ್​ಟಿಇ ಕಡ್ಡಾಯಗೊಳಿಸಿದೆ. ಆದರೆ ಅಲ್ಪಸಂಖ್ಯಾತ ಮಾನ್ಯತೆಯನ್ನು ಮುಂದಿಟ್ಟುಕೊಂಡು ಕ್ರೖೆಸ್ತ ಶಾಲೆಗಳು ದುರ್ಬಲ ವರ್ಗಗಳ ಮಕ್ಕಳನ್ನು ದಾಖಲು ಮಾಡಿಕೊಳ್ಳುವುದರಿಂದ ನುಣುಚಿಕೊಳ್ಳುತ್ತಿವೆ.
ವೆಚ್ಚದ ಅಧ್ಯಯನ:2017-18ರಲ್ಲಿ ಭಾರತದ ಪ್ರತಿ ಕುಟುಂಬ ಶಿಕ್ಷಣಕ್ಕೆ ವೆಚ್ಚ ಮಾಡುವ ಹಣವನ್ನು ಆಯೋಗ ಲೆಕ್ಕ ಹಾಕಿದೆ. ಅದರ ವರದಿಯಂತೆ, ಖಾಸಗಿ ಅನುದಾನರಹಿತ ಸಂಸ್ಥೆಗಳಲ್ಲಿ ಸಾಮಾನ್ಯ ಶಿಕ್ಷಣ ಪಡೆಯುವ ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ ಸರಾಸರಿ 18,267 ರೂಪಾಯಿ ವೆಚ್ಚವಾಗುತ್ತದೆ. 12,904 ಕ್ರೖೆಸ್ತ ಅಲ್ಪಸಂಖ್ಯಾತ ಶಾಲೆಗಳಲ್ಲಿ 54,86,884 ಮಕ್ಕಳು ಕಲಿಯುತ್ತಿದ್ದಾರೆ. ಅಂದರೆ ಈ ಶಾಲೆಗಳು 10,022.89 ಕೋಟಿ ರೂಪಾಯಿ ಸಂಪಾದಿಸುತ್ತವೆ. ಶೇಕಡ 25 ಸೀಟ್​ಗಳನ್ನು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಬೇಕೆಂಬ ಆರ್​ಟಿಇ ನಿಯಮದಿಂದ ವಿನಾಯಿತಿ ಇರುವುದರಿಂದ ಶೇಕಡ 25ರಷ್ಟು ಮಕ್ಕಳ ವೆಚ್ಚಕ್ಕೆ ಸಮಾನವಾದ ಹಣವನ್ನು ಅವು ಉಳಿತಾಯ ಮಾಡುತ್ತವೆ. ಅದು 2,505 ಕೋಟಿ ರೂ. ಆಗುತ್ತದೆ ಎನ್ನುವುದು ಆಯೋಗದ ಲೆಕ್ಕಾಚಾರ.
ಭಾರತದಲ್ಲಿ ಪ್ರತಿನಿತ್ಯ 1,157 ಮಹಿಳೆಯರು ನಾಪತ್ತೆ!; ದೇಶದಲ್ಲಿ ಹೆಚ್ಚಾಗಿದೆ ಸ್ತ್ರೀಯರ ಮಿಸ್ಸಿಂಗ್​ ಕೇಸ್​..

ಮತ್ತೆ ಎದುರಾಯ್ತು ಹಬ್ಬಗಳಿಗೂ ನಿರ್ಬಂಧ; ಮನೆ-ದೇವಸ್ಥಾನಗಳ ಒಳಗಷ್ಟೇ ಹಬ್ಬ ಆಚರಿಸಿ ಎಂದು ಆದೇಶಿಸಿದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
