ನವದೆಹಲಿ:ಜಪಾನ್​ನ ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು ಮತ್ತು ನಿಗಾಟಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಿಮಾಲಯದಲ್ಲಿ ಪ್ರಾಚೀನ ಸಮುದ್ರದ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ.
ಸರಿಸುಮಾರು 600 ದಶಲಕ್ಷ ವರ್ಷಗಳ ಹಿಂದಿನ ಖನಿಜ ನಿಕ್ಷೇಪಗಳಲ್ಲಿ ಸಿಕ್ಕಿಬಿದ್ದ ನೀರಿನ ಹನಿಗಳನ್ನು ತಂಡವು ಕಂಡುಹಿಡಿದಿದ್ದು ಈ ಸಂಧೋಧನೆ, ಭೂಮಿಯಲ್ಲಿ ಹಿಂದೆ ನಡೆದ ಮಹತ್ವದ ಆಮ್ಲಜನಕೀಕರಣ ಹಾಗೂ ಜೀವದ ಅಭಿವೃದ್ಧಿಯ ಘಟನೆಯ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ.
ಈ ಅಧ್ಯಯನ, ಪ್ರಿಯಾಂಬ್ರಿಯನ್ ರಿಸರ್ಚ್​ನಲ್ಲಿ ಪ್ರಕಟಿಸಲಾಗಿದೆ. ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಕಾರ್ಬೊನೇಟ್​ಗಳಿಂದ ಸಮೃದ್ಧವಾಗಿರುವ ಈ ಖನಿಜ ನಿಕ್ಷೇಪಗಳು “ಪ್ಯಾಲಿಯೊ ಸಾಗರ”ದ ಕಾಲಕ್ಕೆದ ಪಳೆಯುಳಿಕೆಗಳಿಗೆ ಹೋಲುತ್ತವೆ ಎಂದು ಬಹಿರಂಗಪಡಿಸುತ್ತದೆ. ಈ ಕುರಿತಾಗಿ ಸೆಂಟರ್ ಫಾರ್ ಅರ್ಥ್ ಸೈನ್ಸಸ್ ( CEaS ), IISc ಮತ್ತು ಅಧ್ಯಯನದ ಪ್ರಮುಖ ಲೇಖಕ ಪಿಎಚ್​ಡಿ ಪ್ರಕಾಶ್ ಚಂದ್ರ ಆರ್ಯ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಅಗತ್ಯಕ್ಕೆ ಅನುಸಾರವಾಗಿ ವಿಜ್ಞಾನಿಗಳು ಲಭಿಸುತ್ತಿಲ್ಲ
700 ರಿಂದ 500 ದಶಲಕ್ಷ ವರ್ಷಗಳ ಹಿಂದೆ, ಭೂಮಿಯು ಹಿಮದ ಉಂಡೆಯ ರೀತಿ ಇದ್ದು ದೀರ್ಘಕಾಲದ ಹಿಮಯುಗಕ್ಕೆ ಒಳಗಾಯಿತು ಎಂದು ವಿಜ್ಞಾನಿಗಳು ಸಿದ್ಧಾಂತ ವ್ಯಕ್ತಪಡಿಸಿದ್ದಾರೆ.
ಇದರ ನಂತರ ಎರಡನೇ ಗ್ರೇಟ್ ಆಕ್ಸಿಜನೀಕರಣ ಘಟನೆ ನಡೆದಿದ್ದು, ಈ ಸಂದರ್ಭ ವಾತಾವರಣದಲ್ಲಿ ಆದ ಆಮ್ಲಜನಕ ಮಟ್ಟದ ಹೆಚ್ಚಳ ಸಂಕೀರ್ಣ ಜೀವ ರೂಪಗಳ ವಿಕಾಸಕ್ಕೆ ಕಾರಣವಾಯಿತು. ಆದಾಗ್ಯೂ, ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಪಳೆಯುಳಿಕೆಗಳ ಕೊರತೆ ಹಾಗೂ ಪ್ರಾಚೀನ ಸಾಗರಗಳ ಕಣ್ಮರೆಯಿಂದಾಗಿ ಈ ಘಟನೆಗಳ ನಡುವಿನ ಸಂಪರ್ಕವು ಅಸ್ಪಷ್ಟವಾಗಿ ಉಳಿದಿದೆ.
ಇದೀಗ ಹಿಮಾಲಯದ ಮೇಲೆ ಪ್ರಾಚೀನ ಸಾಗರದ ಅವಶೇಷಗಳು ಸಿಕ್ಕಿರುವುದು ಭೂಮಿಯಲ್ಲಿ ಜೀವ ಹೇಗೆ ಅಭಿವೃದ್ಧಿ ಆಗಿದೆ ಎನ್ನುವ ಮಾಹಿತಿಯ ಕುರಿತಾಗಿ ಇನ್ನಷ್ಟು ಸಂಶೋಧನೆಗೆ ಅವಕಾಶ ಲಭಿಸಲಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
