ನವದೆಹಲಿ:ಜಗತ್ತಿನಾದ್ಯಂತ ಇನ್ನೂ ಸಂಪೂರ್ಣವಾಗಿ ಸದ್ದಡಗದ ಕರೊನಾ ಕುರಿತು ಇದೀಗ ಆತಂಕಕಾರಿ ಮಾಹಿತಿಯೊಂದು ಹೊರಹೊಮ್ಮಿದೆ. ಅದರಲ್ಲೂ ಕರೊನಾದ ಮೂಲ ಎನ್ನಲಾದ ಚೀನಾದ ವುಹಾನ್​ನಲ್ಲಿ ಪ್ರಯೋಗಾಲಯದ ವಿಜ್ಞಾನಿಯಿಂದಲೇ ಇಂಥದ್ದೊಂದು ಮಾಹಿತಿ ಬಹಿರಂಗಗೊಂಡಿದೆ.
ಚೀನಾದ ವುಹಾನ್​ನಲ್ಲಿನ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ್ದ ಯುಎಸ್ ಮೂಲದ ವಿಜ್ಞಾನಿ ಆ್ಯಂಡ್ಯೂ ಹಫ್, ಕರೊನಾ ವೈರಸ್ ಮಾನವನಿರ್ಮಿತ ಹಾಗೂ ಅದು ವುಹಾನ್​ ಇನ್​ಸ್ಟಿಟ್ಯೂಟ್​ ಆಫ್ ವೈರಾಲಜಿ (ಡಬ್ಲ್ಯುಐವಿ) ಕೇಂದ್ರದಿಂದಲೇ ಹೊರಹೊಮ್ಮಿದ್ದು ಎಂದು ಹೇಳಿದ್ದಾರೆ. ‘ದ ಟ್ರುಥ್ ಎಬೌಟ್ ವುಹಾನ್’ ಎಂಬ ಅವರ ಇತ್ತೀಚಿನ ಪುಸ್ತಕದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾಗಿ ನ್ಯೂಯಾರ್ಕ್​ ಪೋಸ್ಟ್​ ವರದಿ ಮಾಡಿದೆ. ಚೀನಾದಲ್ಲಿನ ಕರೊನಾ ವೈರಸ್​ಗೆ ಯುಎಸ್ ಸರ್ಕಾರ ಫಂಡ್ ಮಾಡಿತ್ತು.
ಸಾಂಕ್ರಾಮಿಕ ರೋಗಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕ್​ನ ನಾನ್ ​ಫ್ರಾಫಿಟ್​ ಸಂಸ್ಥೆಯಾದ ಇಕೋ ಹೆಲ್ತ್ ಅಲಯನ್ಸ್​ ಮಾಜಿ ಉಪಾಧ್ಯಕ್ಷ ಆ್ಯಂಡ್ಯೂ ಹಫ್ ಈ ಮಾಹಿತಿ ಹೊರಗೆಡಹಿದ್ದಾರೆ. ಚೀನಾದಲ್ಲಿ ನಡೆದ ಸಂಶೋಧನೆ ವೇಳೆ ಸೂಕ್ತ ಸುರಕ್ಷತೆ ವಹಿಸದ್ದರಿಂದ ವುಹಾನ್ ಲ್ಯಾಬ್​ನಿಂದ ವೈರಸ್ ಲೀಕ್ ಆಗಿತ್ತು ಎಂದು ಅವರು ತಿಳಿಸಿದ್ದಾರೆ.
ಚೀನಾ ಸರ್ಕಾರಕ್ಕೆ ಮೊದಲ ದಿನದಿಂದಲೂ ಈ ಬಗ್ಗೆ ಗೊತ್ತಿತ್ತು. ಚೀನಾಗೆ ಅಪಾಯಕಾರಿ ಬಯೋಟೆಕ್ನಾಲಜಿ ಕೊಟ್ಟಿದ್ದೇ ಯುಎಸ್​ ಸರ್ಕಾರ. ಅವರಿಗೆ ನಾವು ಜೈವಿಕ ಅಸ್ತ್ರ ತಂತ್ರಜ್ಞಾನ ಕೊಟ್ಟಿದ್ದೆವು, ಅಂದು ನಡೆದಿದ್ದನ್ನು ನೋಡಿ ನಾವೇ ಭಯಗೊಂಡಿದ್ದೆವು ಎಂಬುದಾಗಿ ಆ್ಯಂಡ್ರೂ ಹಫ್ ದ ಸನ್​ಗೆ ಹೇಳಿದ್ದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಖ್ಯಾತ ಗಾಯಕನ ಆಸ್ತಿಯೇ ಒತ್ತುವರಿ; ಭೂಮಾಫಿಯಾಗೆ ಕೈಜೋಡಿಸಿದ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ!?

ದೇಶದಲ್ಲಿ ಟ್ರೆಂಡಿಂಗ್​ನಲ್ಲಿದೆ ‘ಹಾರ್ಟ್ ಅಟ್ಯಾಕ್’; ಅದರ ಬಗ್ಗೆಯೇ ಮಾತಾಡುತ್ತಿದ್ದಾರೆ ಹಲವರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
