ನವದೆಹಲಿ:ಮನುಷ್ಯನ ಜನನಕ್ಕೆ ವೀರ್ಯಾಣುಗಳು ಮುಖ್ಯ ಪಾತ್ರವಹಿಸುತ್ತವೆ. ಪುರುಷ ಮತ್ತು ಮಹಿಳೆಯ ಮಿಲನವಿಲ್ಲದೆ ಭ್ರೂಣವನ್ನು ಸೃಷ್ಟಿಸಿ, ಇನ್ನು ಮುಂದೆ ಅವರ ಅಗತ್ಯವಿಲ್ಲದೆ ಮಕ್ಕಳು ಹುಟ್ಟಬಹುದು ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಜೀವಂತ ಕೋಶವಿಲ್ಲದೆ ಮಾನವ ಕೃತಕ ಭ್ರೂಣವನ್ನು ರಚಿಸುವ ಮೂಲಕವಾಗಿ ಇಸ್ರೇಲ್​ನ ವಿಜ್ಞಾನಿಗಳು ಪವಾಡ ಮಾಡಿದ್ದಾರೆ.
ಇಸ್ರೇಲಿನ ವೈಜ್​ಮಾನ್ ಇನ್​ಸ್ಟಿಟ್ಯೂಟ್​ನ ವಿಜ್ಞಾನಿಗಳ ತಂಡವು ಅಂಡಾಣು ಮತ್ತು ವಿರ್ಯಾಣುವಿನ ಸಹಾಯವಿಲ್ಲದೇ ಭ್ರೂಣ ಮಾದರಿಯೊಂದನ್ನು ತಯಾರಿಸಿದೆ. ಇದು ವಿಜ್ಞಾನ ಲೋಕದಲ್ಲಿ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡಲಿದೆ. ವಿಜ್ಞಾನಿಗಳ ತಂಡ ತಯಾರಿಸಿರುವ ಈ ಮಾದರಿಯನ್ನು 14 ದಿನಗಳ ಇರಿಸಲಾಗಿತ್ತು. ಇದು ಮಾನವ ಭ್ರೂಣವನ್ನು ಹೋಲುತ್ತದೆ. ಭ್ರೂಣವನ್ನು ಪ್ರಾಯೋಗಲಯದಲ್ಲಿ ಬೆಳೆಸಿದ ಕಾಂಡ ಕೋಶಗಳಿಂದ(stell cells) ಸೃಷ್ಠಿಸಲಾಗಿದ್ದು, ಹಾರ್ಮೋನ್ ಕೂಡಾ ಬಿಡುಗಡೆ ಮಾಡುತ್ತಿವೆಯಂತೆ. ಅಂದ ಹಾಗೆ ಈ ಭ್ರೂಣ ಮಾದರಿಯನ್ನುಅಭಿವೃದ್ಧಿ ಪಡಿಸಲು ವಿಜ್ಞಾನಿಗಳು ವೀರ್ಯ, ಅಂಡಾಣು ಅಥವಾ ಗರ್ಭಾಶಯವನ್ನು ಬಳಸಿಲ್ಲ ಎಂಬುದು ವಿಶೇಷವಾಗಿದೆ.
ಈ ಭ್ರೂಣದ ಮಾದರಿಯು ಜರಾಯು, ಹಳದಿ ಚೀಲ, ಕೊರಿಯಾನಿಕ್ ಚೀಲ ಮತ್ತು ಇತರ ಬಾಹ್ಯ ಅಂಗಾಂಶಗಳನ್ನು ಒಳಗೊಂಡು ವಿಶಿಷ್ಟವಾಗಿರುವ  ರಚನೆಗಳು, ವಿಭಾಗಗಳನ್ನು ಹೊಂದಿದೆ. ಈ ಮಾದರಿಯ ಕ್ರಿಯಾತ್ಮಕ ಮತ್ತು ಅಗತ್ಯ ಬೆಳವಣಿಗೆಯನ್ನು ಖಚಿತಪಡಿಸುತ್ತದೆ ಎಂದು ವಿಜ್ಞಾನಿಗಳ ತಂಡವು ಹೇಳಿದೆ.
ಪ್ರಯೋಗಾಲಯದಲ್ಲಿ ಅಭಿವೃದ್ಧಿ ಪಡಿಸಿದ ಸ್ಟೆಲ್ ಸೆಲ್‌ಗಳನ್ನು ಬಳಸಿಕೊಂಡು ಮಾನವ ಭ್ರೂಣದ ಮಾದರಿ ರಚಿಸಿದ್ದೇವೆ. ಅಷ್ಟೆ ಅಲ್ಲ, ಇದು ಗರ್ಭಾವಸ್ಥೆಯ ಪರೀಕ್ಷೆಯನ್ನು ಧನಾತ್ಮಕವಾಗಿ ಪರಿವರ್ತಿಸುವ ಹಾರ್ಮೋನನ್ನೂ ಬಿಡುಗಡೆ ಮಾಡಿತು. ಈ ಅಧ್ಯಯನವು ಮನುಷ್ಯ ಜೀವನದ ಆರಂಭಿಕ ಕ್ಷಣಗಳನ್ನು ಅರ್ಥಮಾಡಿಕೊಳ್ಳುವ ನೈತಿಕ ಮಾರ್ಗವನ್ನು ನೀಡುತ್ತದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.
ಈ ಭ್ರೂಣ ಮಾದರಿಯ ಕುರಿತಾದ ಅಧ್ಯಯನ ಲೇಖನ ಈಗಾಗಲೇ ಖಾಸಗಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದು ಗರ್ಭಪಾತ, ಗರ್ಭಧಾರಣೆಯ ವೈಫಲ್ಯ ಸೇರಿದಂದೆ ಹಲವು ಆಯಾಮಗಳನ್ನು ವೈದ್ಯಕೀಯ ದೃಷ್ಟಿಯಲ್ಲಿ ಅದ್ಯಯನ ನಡೆಸಲು ಪೂರಕವಾಗಲಿದೆ.
ಮದ್ಯದ ಅಮಲಿನಲ್ಲಿ ಕತ್ತು ಕೊಯ್ದುಕೊಂಡು ಪ್ರಾಣ ಬಿಟ್ಟ ದಾವಣಗೆರೆ ವ್ಯಕ್ತಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eleven =
Remember me
