ನವದೆಹಲಿ:ಐದು ಅಥವಾ ಹತ್ತು ರೂಪಾಯಿ ನಾಣ್ಯಗಳು ಸಾಮಾನ್ಯವಾಗಿ ಎಲ್ಲರ ಬಳಿಯೂ ಇದ್ದೇ ಇರುತ್ತದೆ. ಆದರೆ ಇದೇ ನಾಣ್ಯ ನಿಮ್ಮನ್ನು ಲಕ್ಷಾಧಿಪತಿ ಅದರಲ್ಲಿಯೂ 10 ಲಕ್ಷ ರೂಪಾಯಿ ಗಳಿಸಲು ಸಹಾಯ ಮಾಡುತ್ತದೆ ಎಂದರೆ ನಂಬುವಿರಾ? ನಂಬಲೇಬೇಕು.ಹಾಗಿದ್ದರೆ ಇದೇನಪ್ಪಾ ನಾಣ್ಯ ಎಂದುಕೊಂಡಿರಾ? ಅದೇ ವೈಷ್ಣೋದೇವಿ ಚಿತ್ರವಿರುವ ನಾಣ್ಯ. ಮಾತಾ ವೈಷ್ಣೋದೇವಿ ಚಿತ್ರವಿರುವ ಹಳೆಯ ನಾಣ್ಯ ನಿಮ್ಮ ಬಳಿ ಇದ್ದರೆ ಅದನ್ನು ನೀವು ನೀಡಿದರೆ ನಿಮಗೆ ಸಿಗಲಿದೆ 10 ಲಕ್ಷ ರೂಪಾಯಿ. ಐದು ಮತ್ತು 10 ರೂಪಾಯಿಗಳ ಕೆಲವು ನಾಣ್ಯಗಳಲ್ಲಿ ಈ ಚಿತ್ರವಿರುತ್ತದೆ.ಇಂಥದ್ದೊಂದು ಆಫರ್‌ ನೀಡಿರುವುದು ಇಂಡಿಯಾಮಾರ್ಟ್‌. ಇದರ ವೆಬ್‌ಸೈಟ್‌ಗೆ (Indiamart.com) ಹೋದರೆ ಇದರ ಸಂಪೂರ್ಣ ವಿವರಣೆ ಸಿಗಲಿದೆ. ವೈಷ್ಣೋದೇವಿ ಚಿತ್ರವಿರುವ ನಾಣ್ಯವನ್ನು ಕೆಲವರು ಇದ್ದರೂ ಕೊಡುವುದಿಲ್ಲ, ಇದಕ್ಕೆ ಕಾರಣ, ಅದು ನಮ್ಮ ಬಳಿ ಇದ್ದರೆ ಅದೃಷ್ಟ ಖುಲಾಯಿಸುತ್ತದೆ ಎಂಬ ನಂಬಿಕೆಯಿಂದ. ಆದರೆ ಇದನ್ನು ಕೊಟ್ಟರೆ 10 ಲಕ್ಷ ರೂಪಾಯಿ ನೀಡುವುದಾಗಿ ಇದೀಗ ವರದಿಗಳು ಬಂದಿವೆ.ಈ ಎರಡೂ ನಾಣ್ಯಗಳನ್ನು ಸರ್ಕಾರ 2002 ರಲ್ಲಿ ಬಿಡುಗಡೆ ಮಾಡಿದ್ದು, ಕೆಲವರ ಬಳಿ ಇದು ಇದ್ದರೂ ಗಮನಕ್ಕೆ ಬಂದಿರುವುದಿಲ್ಲ.ಹಾಗಿದ್ದರೆ 10 ಲಕ್ಷ ರೂ. ಪಡೆಯುವುದು ಹೇಗೆ ಎಂದು ಇಲ್ಲಿದೆ ನೋಡಿ ವಿವರ:Indiamart.com ನಲ್ಲಿ ಈ ನಾಣ್ಯಗಳಿಗಾಗಿ ಹಲವಾರು ಬಿಡ್‌ಗಳನ್ನು ಆಹ್ವಾನಿಸಲಾಗುತ್ತಿದೆ. ಈ ವೆಬ್‌ಸೈಟ್‌ಗೆ ಹೋದರೆ ಮಾರಾಟಗಾರರಾಗಿ ನೋಂದಾಯಿಸಲು ನಿಮ್ಮನ್ನು ಕೇಳಲಾಗುತ್ತದೆ. ನಂತರ ನೀವು ನಿಮ್ಮ ಬಳಿ ಇರುವ ನಾಣ್ಯದ ಫೋಟೋವನ್ನು ಅಪ್‌ಲೋಡ್ ಮಾಡಬೇಕು. ನಂತರ ಜನರು ನಾಣ್ಯಗಳ ಮೇಲೆ ಬಿಡ್ ಮಾಡುತ್ತಾರೆ. ಯಾರು ಹೆಚ್ಚು ಹಣವನ್ನು ನೀಡುತ್ತಾರೆಯೋ ನಾಣ್ಯವನ್ನು ಅವರಿಗೆ ಮಾರಾಟ ಮಾಡಬಹುದಾಗಿದೆ.ಇದರ ಜತೆಗೆ ಬ್ರಿಟಿಷ್ ಕಾಲದ ನೋಟುಗಳು ಇದ್ದರೆ, ಅದಕ್ಕೆ ಇನ್ನೂ ಅಧಿಕ ಹಣ ನೀಡಲಾಗುತ್ತದೆ. ಅಶೋಕ ಚಕ್ರವನ್ನು ನೋಟ್‌ಗಳಲ್ಲಿ ಮುದ್ರಿಸಲಾಗುತ್ತಿತ್ತು. ಈಗ ಇಂಥ ನೋಟ್‌ಗಳು ಇರದಿದ್ದರೂ ಯಾರಿಗೆ ಗೊತ್ತು ನಿಮ್ಮ ತಾತ- ಮುತ್ತಾತರು ಎಲ್ಲಿಯಾದರೂ ಇಟ್ಟು, ನೀವು ಅದರ ಬಗ್ಗೆ ಅಲಕ್ಷ್ಯ ಮಾಡಿದ್ದರೆ ಈಗ ಅದೃಷ್ಟ ಖುಲಾಯಿಸಬಹುದು ನೋಡಿ. ಆನ್‌ಲೈನ್‌ನಲ್ಲಿಯೇ ಇವುಗಳನ್ನು ಮಾರಾಟ ಮಾಡಬಹುದು.
ಪಕ್ಕದ್ಮನೆಗೆ ಆಂಟಿಯೊಬ್ಬಳು ಬಂದ ಮೇಲೆ ಇವ್ರ ಸ್ವಭಾವನೇ ಒಂಥರಾ ಆಗಿದೆ- ಸರಿದಾರಿಗೆ ತರೋದು ಹೇಗೆ ಮೇಡಂ?
ಅತಿ ಹೆಚ್ಚು ಮಕ್ಕಳನ್ನು ಹುಟ್ಟಿಸಿ: ಒಂದು ಲಕ್ಷ ರೂಪಾಯಿ ಬಹುಮಾನ ಗೆಲ್ಲಿ- ವಿವಾದ ಸೃಷ್ಟಿಸಿದ ಸಚಿವ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:one × 5 =
Remember me
