ಕಾನ್ಪುರ:ಮನೆಯಲ್ಲಿ ತಾಯಿ ಬೈದಿದ್ದಕ್ಕೆ 9 ವರ್ಷದ ಮಗು ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.ಇದನ್ನೂ ಓದಿ:ಮುತ್ತು ತಂದ ಆಪತ್ತು: ಪತಿಯ ನಾಲಿಗೆಯನ್ನೇ ಕಚ್ಚಿ ಗಾಯಗೊಳಿಸಿದ ಹೆಂಡತಿಮೃತ ಬಾಲಕನನ್ನು ವಿವೇಕ್ ಕುಮಾರ್ ಎಂದು ಗುರುತಿಸಲಾಗಿದ್ದು, 3ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಶಾಲೆಯಿಂದ ಬಂದ ಬಳಿಕ ತಾಯಿಯು ವಿವೇಕ್ ಮತ್ತು ಆತನ ಸಹೋದರ ಹಿಮಾಂಶುವಿಗೆ ಊಟ ಮಾಡವಂತೆ ಹೇಳಿದ್ದಳು. ಆಗ ಹಿಮಾಂಶು ಊಟ ಮಾಡಲು ಶುರು ಮಾಡಿದ್ದು, ವಿವೇಕ್​ ಊಟವನ್ನು ಮಾಡದೇ ಸೈಕಲ್​ ತೆಗೆದುಕೊಂಡು ಆಟವಾಡಲು ತೆರಳಿದ್ದ.ಆಗ ತಾಯಿಯು ಆತನಿಗೆ ಬೈದು ಊಟ ಮಾಡುವಂತೆ ಬುದ್ಧಿವಾದ ಹೇಳಿದ್ದಾಳೆ. ಇದರಿಂದ ಕೋಪಗೊಂಡಿದ್ದ ಬಾಲಕ ರಾತ್ರಿಯ ಊಟವನ್ನು ಮಾಡದೇ ಹಾಗೇ ಮಲಗಿದ್ದ. ಮರುದಿನ ಬೆಳಿಗ್ಗೆ ಶಾಲೆಗ ತೆರೆಳಿದ್ದ ಬಾಲಕ ಶೌಚಾಲಯಕ್ಕೆ ಹೋಗಿ ಟೈನಿಂದ ನೇಣು ಬಿಗಿದುಕೊಂಡು ಪ್ರಾಣ ತ್ಯಜಿಸಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಮೃತನ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
