ಲಖನೌ:ಬಾಬ್ರಿ ಮಸೀದಿಯನ್ನು 1992ರಲ್ಲಿ ಧ್ವಂಸ ಮಾಡಿದ್ದು ಇಡೀ ದೇಶದಲ್ಲಿ ಅದೆಷ್ಟು ದೊಡ್ಡ ಸಂಚಲನ, ವಿವಾದ ಮೂಡಿಸಿತ್ತು ಎಂಬುದು ಇತಿಹಾಸ. ಈಗ, ಅದೇ ಜಾಗದಲ್ಲಿ ರಾಮಮಂದಿರವೂ ನಿರ್ಮಾಣವಾಗುತ್ತದೆ…ಹಾಗೇ ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಸ್ಥಾನದಲ್ಲಿದ್ದ ಮುಖಂಡರಿಗೆ ಇಂದು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಯನ್ನೂ ನೀಡಿದೆ.
ಈ ಮಧ್ಯೆ ಶಿಯಾ ವಕ್ಫ್​ ಬೋರ್ಡ್​​ನ ಮಾಜಿ ಅಧ್ಯಕ್ಷ ವಾಸಿಂ ರಿಝ್ವಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರವೊಂದು ಕುತೂಹಲ ಮೂಡಿಸಿದೆ.  ಪೂಜಾ ಸ್ಥಳಗಳ ಕಾಯ್ದೆ- 1991ನ್ನು ರದ್ದುಗೊಳಿಸಿ, ಮೊಘಲ್​ ಕಾಲದಲ್ಲಿ ದೇವಸ್ಥಾನಗಳನ್ನು ಒಡೆದು ನಿರ್ಮಿಸಲಾದ ಎಲ್ಲ ಮಸೀದಿಗಳನ್ನೂ ಈಗ ಒಡೆದು, ಅಲ್ಲಿ ದೇವಾಲಯಗಳನ್ನು ಕಟ್ಟಿ ಎಂದು ವಾಸಿಂ ರಿಝ್ವಿ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ:ಬಾಬ್ರಿ ಮಸೀದಿ ತೀರ್ಪು ನೀಡಿದ ನ್ಯಾಯಾಧೀಶ ಯಾದವ್​ ಕುರಿತ ಕುತೂಹಲದ ಮಾಹಿತಿಯಿದು…
1991ರಲ್ಲಿ ಕಾಂಗ್ರೆಸ್​ ಸರ್ಕಾರ ಮುಸ್ಲಿಮರನ್ನು ಓಲೈಸಲು ಈ ಕಾಯ್ದೆಯನ್ನು ತಂದಿದೆ. ಅದನ್ನೀಗ ರದ್ದು ಮಾಡಿ. ಮೊಘಲ್​ ಕಾಲದಲ್ಲಿ ಹಲವು ದೇವಾಲಯಗಳನ್ನು ಒಡೆದು ಮಸೀದಿಗಳನ್ನು ಕಟ್ಟಲಾಗಿದೆ. ಈಗ ಆ ಮಸೀದಿಗಳನ್ನು ಧ್ವಂಸ ಮಾಡಿ, ಹಿಂದುಗಳ ದೇವಾಲಯವನ್ನು ಪುನಃ ನಿರ್ಮಾಣ ಮಾಡಿ ಎಂದು ಒತ್ತಾಯಿಸಿದ್ದಾರೆ.ಪತ್ರ ಬರೆದ ನಂತರ ವಿಡಿಯೋ ಮೆಸೇಜ್​ವೊಂದನ್ನು ಬಿಡುಗಡೆ ಮಾಡಿರುವ ರಿಝ್ವಿ, ತಾವು ಪ್ರಧಾನಿಗೆ ಪತ್ರ ಬರೆದಿರುವುದನ್ನು ಒಪ್ಪಿಕೊಂಡಿದ್ದಾರೆ. 1991ರ ಪೂಜಾಸ್ಥಳಗಳ ಕಾಯ್ದೆಯಿಂದ ಹಲವು ಕಾನೂನು ಬಾಹಿರವಾಗಿ ನಿರ್ಮಿಸಲಾದ ಮಸೀದಿಗಳಿಗೆ ರಕ್ಷಣೆ ಸಿಕ್ಕಂತಾಗಿದೆ ಎಂದೂ ಅವರು ಹೇಳಿದ್ದಾರೆ.ಇದನ್ನೂ ಓದಿ:ಬಾಬ್ರಿ ಮಸೀದಿ ತೀರ್ಪು: ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಮುಸ್ಲಿಂ ಸಂಘದ ತಯಾರಿ
ಹಿಂದಿಯಲ್ಲಿ ಪತ್ರ ಬರೆದಿರುವ ರಿಝ್ವಿ, ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆ. ಮೊಘಲ್​ ಚರ್ಕವರ್ತಿಗಳು ಹಿಂದುಗಳಿಗೆ ಮಾಡಿದ ಶೋಷಣೆಯನ್ನು ನಾವು ಈಗ ಸರಿಪಡಿಸಲು ಸಾಧ್ಯವಿಲ್ಲ. ಆದರೆ ಅವರ ಧಾರ್ಮಿಕ ಸ್ಥಳಗಳನ್ನು ಹಿಂದಿರುಗಿಸುವ ಮೂಲಕ ಹಿಂದುಗಳಿಗೆ ನ್ಯಾಯ ನೀಡಬಹುದು ಎಂದೂ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.ಅಯೋಧ್ಯೆ ರಾಮಜನ್ಮಭೂಮಿ, ಮಥುರಾದ ಕೃಷ್ಣಜನ್ಮಭೂಮಿ, ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ಸೇರಿ ಇನ್ನೂ ಅನೇಕ ದೇಗುಲಗಳನ್ನು ಹೆಸರಿಸಿರುವ ಅವರು, ಇವೆಲ್ಲವೂ ಮೊಘಲರ ದಬ್ಬಾಳಿಕೆಗೆ ಒಳಪಟ್ಟ ಹಿಂದುಗಳ ಧಾರ್ಮಿಕ ಸ್ಥಳಗಳು ಎಂದು ತಿಳಿಸಿದ್ದಾರೆ.
(ಪೂಜಾಸ್ಥಳಗಳ ಕಾಯ್ದೆ-1991-ಈ ಕಾಯ್ದೆಯ ಅನ್ವಯ ದೇವಸ್ಥಾನ, ಮಸೀದಿ, ಚರ್ಚ್​​ಗಳನ್ನು ಪರಿವರ್ತಿಸುವುದನ್ನು ನಿಷೇಧಿಸಲಾಗಿದೆ. ಒಂದು ಧರ್ಮಕ್ಕೆ ಸೇರಿದ ಪ್ರಾರ್ಥನಾ, ಧಾರ್ಮಿಕ ಸ್ಥಳವನ್ನು ಇನ್ನೊಂದು ಧರ್ಮ ಕಬಳಿಸುವಂತಿಲ್ಲ. 1947ರಲ್ಲಿ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಯಾವ ನಿಯಮವಿತ್ತೋ ಅದೇ ಪಾಲನೆಯಾಗಬೇಕು ಎಂಬುದು ಕಾಯ್ದೆಯಲ್ಲಿ ಒಳಗೊಂಡ ಅಂಶ)
ಪೂರ್ವಯೋಜನೆ ಇಲ್ಲದೇ ಐದು ಗಂಟೆಗಳಲ್ಲಿ ಮಸೀದಿ ಕೆಡವಲು ಸಾಧ್ಯವೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
