ನವದೆಹಲಿ:ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ತನ್ನ ಆಶ್ರಮದಲ್ಲಿ ಮಹಿಳೆಯರೊಂದಿಗೆ ಚೆಲ್ಲಾಟವಾಡುವಾಗ ಸಿಕ್ಕಿಬಿದ್ದು, ದೇಶ ಬಿಟ್ಟು ಓಡಿಹೋಗಿದ್ದಾನೆ. ನಿತ್ಯಾನಂದನ ಬಗ್ಗೆ ಈಗಾಗಲೇ ಹಲವು ವಿಷಯಗಳು ಜನರಿಗೆ ತಿಳಿದಿದೆ. ಇದೀಗ ಮಹಿಳೆಯೊಬ್ಬರು ನಿತ್ಯಾನಂದನ ಹಲವು ರಹಸ್ಯಗಳನ್ನು ಬಹಿರಂಗಪಡಿಸಿರುವ ವಿಡಿಯೋ ಮತ್ತೆ ವೈರಲ್​ ಆಗಿದೆ.
ವಿವಾದಗಳ ಕೇಂದ್ರಬಿಂದು ಎನಿಸಿರುವ ನಿತ್ಯಾನಂದ, ಅತ್ಯಾಚಾರ ಸೇರಿ ಹಲವು ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾನೆ. ಕಾನೂನು ಕುಣಿಕೆ ಬಿಗಿಯಾಗಿ, ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಲು ಸಜ್ಜಾಗುತ್ತಿದ್ದಂತೆ ನಿತ್ಯಾನಂದ ಕರ್ನಾಟಕ ಬಿಟ್ಟಿದ್ದ. 2019ರಲ್ಲಿ ಭಾರತದಿಂದ ಪಲಾಯನ ಮಾಡಿದ್ದಾನೆ. ಅಲ್ಲಿಂದ ಇಲ್ಲಿಯವರೆಗೂ ನಿತ್ಯಾನಂದ ಎಲ್ಲಿದ್ದಾನೆ ಎಂಬುದು ಗೊತ್ತಾಗಿಲ್ಲ. ಕೈಲಾಸ ಎಂಬ ದೇಶವನ್ನು ಹುಟ್ಟು ಹಾಕಿದ್ದೇನೆ ಎಂದು ಹೇಳುವ ನಿತ್ಯಾನಂದ ಪ್ರತ್ಯೇಕ ಧ್ವಜ ಹಾಗೂ ಪಾಸ್​ಪೋರ್ಟ್ ನೀಡಿ ಸಂಚಲನ ಮೂಡಿಸಿದ್ದ. ಜಾಹೀರಾತು ನೀಡಿ ಕೈಲಾಸದಲ್ಲಿ ನೆಲೆಸಲು ಬಯಸುವವರು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಘೋಷಿಸಿದ್ದ. ಆತನ ಕಡೆಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಕೈಲಾಸ ದೇಶವನ್ನು ಅಮೆರಿಕ ಮತ್ತು ವಿಶ್ವಸಂಸ್ಥೆ ಗುರುತಿಸಿದೆ ಎಂದು ವೆಬ್ ಸೈಟ್​ನಲ್ಲಿ ಫೋಟೋಗಳನ್ನು ಹಾಕಿದ್ದರು.
ಕೈಲಾಸದ ಸ್ಥಳ ಬಹಿರಂಗಇದೀಗ ನಿತ್ಯಾನಂದ ಕೈಲಾಸ ಎಲ್ಲಿದೆ ಎಂಬುದನ್ನು ತಿಳಿಸುವುದಾಗಿ ಹೇಳಿದ್ದಾನೆ. ಜುಲೈ 21ರಂದು ಕೈಲಾಸದ ಸ್ಥಳವನ್ನು ಪ್ರಕಟಿಸುವುದಾಗಿ ನಿತ್ಯಾನಂದ ಪ್ರಕಟಿಸಿದ್ದಾನೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿರುವ ಪೋಸ್ಟ್‌ನಲ್ಲಿ ಹೀಗೆ ಹೇಳಲಾಗಿದೆ. ಇದರ ಬೆನ್ನಲ್ಲೇ ನಿತ್ಯಾನಂದನ ಮಾಜಿ ಶಿಷ್ಯೆ ಸಾರಾ ಲ್ಯಾಂಡ್ರಿ, ನಿತ್ಯನ ಕರ್ಮಕಾಂಡಗಳನ್ನು ಬಯಲಿಗೆಳೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಸಾರಾ ಲ್ಯಾಂಡ್ರಿ ಪ್ರಸ್ತುತ ಕೆನಡಾದಲ್ಲಿ ನೆಲೆಸಿದ್ದಾಳೆ. ಆಕೆ 2009ರಲ್ಲಿ ನಿತ್ಯಾನಂದನ ಬಿಡದಿ ಆಶ್ರಮಕ್ಕೆ ಸೇರಿದ್ದಳು. ಸನಾತನ ಧರ್ಮವನ್ನು ಆಚರಿಸಲು, ಯೋಗ ಮತ್ತು ಧ್ಯಾನವನ್ನು ಕಲಿಯುವ ಉದ್ದೇಶದಿಂದ ಅಲ್ಲಿಗೆ ಸೇರಿಕೊಂಡೆ ಎಂದು ಹೇಳಿದ್ದಳು. ವಿಸ್ತೃತವಾಗಿ ಅಧ್ಯಯನ ಮಾಡಿದ ಬಳಿಕ ಮೈಕ್ರೋಸಾಫ್ಟ್​ಗೆ ತೆರಳಿ ತರಬೇತಿ ನೀಡುವುದಾಗಿ ತೆರಳಿದಳು.
ಹಿಂದೊಮ್ಮೆ ತನ್ನ ಯೂಟ್ಯೂಬ್​ ಚಾನೆಲ್​ ಮೂಲಕ ನಿತ್ಯಾನಂದನ ಆಶ್ರಮದ ಕರ್ಮಕಾಂಡಗಳನ್ನು ಬಯಲಿಗೆ ಎಳೆದಿದ್ದಳು. ಧಾರ್ಮಿಕ ಪಾಠ ಹೇಳಲು ಸಂಸ್ಥೆಯನ್ನು ನಡೆಸದೆ, ಆಶ್ರಮವನ್ನು ಮಾಫಿಯಾದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಳು. ನಾನು 24 ರಿಂದ 33 ವರ್ಷಗಳವರೆಗೆ ಅಲ್ಲಿಯೇ ಇದ್ದೆ. ಒಂಬತ್ತು ವರ್ಷಗಳ ಕಾಲ ನಿತ್ಯಾನಂದನ ಸೂಚನೆಯಂತೆ ತನ್ನ ಜೀವನ ಸಾಗಿತು. ಒಮ್ಮೆ ನನ್ನನ್ನು ತಿರುವನಂತಪುರಂನಲ್ಲಿರುವ ನಿತ್ಯಾನಂದ ಆಶ್ರಮಕ್ಕೆ ಕಳುಹಿಸಲಾಯಿತು. ಆ ಆಶ್ರಮದಲ್ಲಿ ಅನೇಕ ಮಕ್ಕಳು ಉಳಿದು ಓದುತ್ತಿದ್ದರು. ಚಂದ್ರ ಮಂತ್ರದೊಂದಿಗೆ ತಮ್ಮನ್ನು ತಾವು ಜೋಡಿಸಿಕೊಳ್ಳುವುದು, ಮೂರನೇ ಕಣ್ಣು ತೆರೆಯುವ ತರಬೇತಿ, ಒಬ್ಬರ ದೇಹದಲ್ಲಿನ ಕಾಯಿಲೆಗಳನ್ನು ಕಂಡುಹಿಡಿಯುವುದು ಮುಂತಾದ ತರಬೇತಿಗಳನ್ನು ಅವರಿಗೆ ನೀಡಲಾಯಿತು. ಅಲ್ಲದೆ, ಮಕ್ಕಳಿಗೆ ಫೇಸ್​ಬುಕ್, ಇನ್​ಸ್ಟಾಗ್ರಾಂ, ಟ್ವಿಟರ್ ಇತ್ಯಾದಿಗಳಲ್ಲಿ ಅಕೌಂಟ್​ಗಳನ್ನು ತೆರೆದು, ಅದರಲ್ಲಿ ಕ್ರಿಯಾಶೀಲರಾಗುವಂತೆ ಮಾಡುವ ಕೆಲಸವನ್ನು ನನಗೆ ನೀಡಲಾಯಿತು. ಅದಕ್ಕಾಗಿ ಆ ಹುಡುಗರಿಂದ ದಿನವೂ ಪಾಠ ಮಾಡಬೇಕಿತ್ತು. ಹಾಗಾಗಿ ಅವರು ನನಗೆ ಹತ್ತಿರವಾಗಲು ಪ್ರಾರಂಭಿಸಿದರು.
ಒಂದು ರಾತ್ರಿ ನಾನು ನನ್ನ ಕೋಣೆಯಲ್ಲಿದ್ದಾಗ ಇಬ್ಬರು ಹುಡುಗರು ನನ್ನನ್ನು ಭೇಟಿಯಾಗಲು ಬಂದರು. ಅವರು ನನ್ನನ್ನು ನೋಡಿ ಅಳಲು ಪ್ರಾರಂಭಿಸಿದರು. ಅವರೇ ನನಗೆ ನಿತ್ಯಾನಂದ ಮಾಡುತ್ತಿರುವುದೆಲ್ಲ ಸುಳ್ಳು, ಆಶ್ರಮದಲ್ಲಿರುವವರು ನಮಗೆ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದಾರೆ, ಶೌಚಾಲಯಕ್ಕೂ ಹೋಗಲು ಬಿಡುತ್ತಿಲ್ಲ, ನಮ್ಮನ್ನು ಜೈಲಿನಲ್ಲಿಟ್ಟಿದ್ದಾರೆ. ಕೊಠಡಿ ತುಂಬ ಕಬ್ಬಿಣದ ಸರಳುಗಳಿವೆ ಎಂದು ಹೇಳಿದರು. ಅವರು ಹೇಳಿದ್ದನ್ನು ಕೇಳಿ ನಾನು ಬೆಚ್ಚಿಬಿದ್ದೆ. ಬಳಿಕ ಈ ಕುರಿತು ನಿತ್ಯಾನಂದ ಆಶ್ರಮದ ಹಿರಿಯ ಅಧಿಕಾರಿಗಳಾದ ನಿತ್ಯಾನಂದ, ರಂಜಿತಾ ಹಾಗೂ ತಿರುವನಂತಪುರ ಆಶ್ರಮದ ಮುಖ್ಯಸ್ಥರೊಂದಿಗೆ ಮಾತನಾಡಿದ್ದೆ. ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ನನಗೂ ನಿತ್ಯಾನಂದರಿಂದ ಬ್ರೈನ್ ವಾಶ್ ಆಗಿತ್ತು. ಅವನ ನಿಜ ಮುಖ ತಿಳಿದ ನಂತರ ಅಲ್ಲಿಂದ ಹೊರಟು ಕೆನಡಾಕ್ಕೆ ಬಂದೆ. ಆಶ್ರಮದಲ್ಲಿ ಮಕ್ಕಳ ಹತ್ಯೆ ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದು ತನಗೆ ತಿಳಿದಿದ್ದು, ತಪ್ಪು ಕೆಲಸಗಳಿಗೆ ಪ್ರೇರೇಪಿಸುತ್ತಿದ್ದಾರೆ ಎಂದು ಸಾರಾ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ನಿತ್ಯಾನಂದನ ಕೈಲಾಸ ದೇಶದ ಬಗ್ಗೆಯೂ ಸಾರಾ ಮಾತನಾಡಿದ್ದು, ಕೈಲಾಸಂ ಎಂಬುದು ಸುಳ್ಳು ಕಥೆ ಮತ್ತು ಅದು ಸುಳ್ಳು ದೇಶ. ಇದೆಲ್ಲ ನಿತ್ಯಾನಂದ ಸೃಷ್ಟಿಸಿದ ಫ್ಯಾಂಟಸಿ ಎಂದಿದ್ದಾರೆ. ಆತ ಹಲವಾರು ಜೀವಗಳನ್ನು ಹಾಳು ಮಾಡಿದ್ದಕ್ಕಾಗಿ ಆತನಿಗೆ ಭಾರತ ಕಠಿಣ ಶಿಕ್ಷೆ ನೀಡುವಂತೆ ಸಾರಾ ಮನವಿ ಮಾಡಿಕೊಂಡಿದ್ದಾರೆ.(ಏಜೆನ್ಸೀಸ್​)

ಕೈಲಾಸ ಸ್ಥಳ ಬಹಿರಂಗಪಡಿಸಲು ಮುಂದಾದ ನಿತ್ಯಾನಂದ!

ರಾಷ್ಟ್ರಧ್ವಜಕ್ಕೆ ಅಗೌರವ; ವಿವಾದದಲ್ಲಿ ಸಿಲುಕಿದ ರೋಹಿತ್ ಶರ್ಮಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × two =
Remember me
