ಹೈದರಾಬಾದ್:ಜಗತ್ತಿನ ಅತಿ ದೊಡ್ಡ ಚಿನ್ನದ ನಾಣ್ಯ ಎಂದು ಹೇಳಲಾಗುವ ‘12 ಕೆಜಿ ಸ್ವರ್ಣ ನಾಣ್ಯ’ ಹುಡುಕುವ ಪ್ರಯತ್ನವನ್ನು ನಾಲ್ಕು ದಶಕಗಳ ಹಿಂದೆ ಕೈ ಬಿಡಲಾಗಿತ್ತು. ಕಳೆದು ಹೋಗಿದೆಯೆನ್ನಲಾದ ಆ ನಾಣ್ಯದ ಹುಡುಕಾಟವನ್ನು ಮತ್ತೆ ಆರಂಭಿಸಲು ಸರ್ಕಾರ ಮುಂದಾಗಿದೆ. ಈ ಅಮೂಲ್ಯ ಕಲಾಕೃತಿಯನ್ನು ಪತ್ತೆ ಹಚ್ಚಲು ಕೇಂದ್ರ ಸರ್ಕಾರ ಪ್ರಯತ್ನಗಳನ್ನು ಆರಂಭಿಸಿದೆ. ಹೈದರಾಬಾದ್​ನ 8ನೇ ನಿಜಾಮ ಮುಕರ›ಂ ಝಾ ಈ ನಾಣ್ಯವನ್ನು ಕೊನೆಯ ಬಾರಿ ಹೊಂದಿದ್ದ ವ್ಯಕ್ತಿ. ಸ್ವಿಸ್ ಬ್ಯಾಂಕ್​ನಲ್ಲಿ ಅದನ್ನು ಹರಾಜು ಹಾಕಲು ಝಾ ಪ್ರಯತ್ನಿಸಿದ್ದ ಎಂದು ಹೇಳಲಾಗಿದೆ. ಆದರೆ ಅದನ್ನು ಪತ್ತೆ ಮಾಡುವಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ವಿಫಲವಾಗಿತ್ತು.
ಜಹಾಂಗೀರ್ ಟಂಕಿಸಿದ್ದ ನಾಣ್ಯ:ಮುಕರ›ಂ ಝಾನ ತಾತ ಹಾಗೂ ಹೈದರಾಬಾದ್​ನ ಕೊನೆಯ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್​ನಿಂದ ಈ ನಾಣ್ಯ ಝಾಗೆ ಹಸ್ತಾಂತರವಾಗಿತ್ತು. ಸಾಮ್ರಾಟ ಜಹಾಂಗೀರ್ ಈ ಬೃಹತ್ ನಾಣ್ಯವನ್ನು ಟಂಕಿಸಿದ್ದು ಕೊನೆಯ ನಿಜಾಮನ ಕೈಗೆ ಸೇರಿತ್ತು. ‘ಅದೀಗ ಅಮೂಲ್ಯ ವಸ್ತುವಾಗಿದ್ದು ಹೈದರಾಬಾದ್​ನ ಹೆಮ್ಮೆಯಾಗಿದೆ’ ಎನ್ನುತ್ತಾರೆ ಖ್ಯಾತ ಇತಿಹಾಸಕಾರ್ತಿ ಸಲ್ಮಾ ಅಹಮದ್ ಫರೂಕಿ. ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಎಚ್.ಕೆ. ಶೇರ್ವಾನಿ ಸೆಂಟರ್ ಫಾರ್ ಡೆಕ್ಕನ್ ಸ್ಟಡೀಸ್​ನಲ್ಲಿ ಪ್ರಾಧ್ಯಾಪಕಿಯಾಗಿರುವ ಸಲ್ಮಾ, ಈ ನಾಣ್ಯ ಹಾಗೂ ಅದು ಪಾರಂಪರಿಕವಾಗಿ ಹಸ್ತಾಂತರವಾದ ಬಗ್ಗೆ ಸಂಶೋಧನೆ ನಡೆಸಿದ್ದಾರೆ.
1987ರಲ್ಲಿ ಸುಳಿವು:ಇದೀಗ 35 ವರ್ಷಗಳ ನಂತರ ಈ ನಾಣ್ಯದ ಪತ್ತೆಗೆ ಮತ್ತೆ ಕಾರ್ಯಾಚರಣೆ ಆರಂಭವಾಗಿದೆ. 1987ರಲ್ಲಿ ಯುರೋಪ್​ನಲ್ಲಿದ್ದ ಭಾರತೀಯ ಅಧಿಕಾರಿಗಳು 11,935.8 ಗ್ರಾಂ ತೂಕದ ಚಿನ್ನದ ನಾಣ್ಯವು ಹರಾಜಾಗುವ ಬಗ್ಗೆ ತಿಳಿದು ಮಾಹಿತಿ ನೀಡಿದಾಗ ಸಿಬಿಐ ಎಚ್ಚರಗೊಂಡು ಅದನ್ನು ಪತ್ತೆ ಹಚ್ಚಲು ವಿಚಾರಣೆ ಆರಂಭಿಸಿತ್ತು. ಬಹಳಷ್ಟು ಮಾಹಿತಿಯೂ ಲಭ್ಯವಾಗಿತ್ತು ಎಂದು ಫರೂಕಿ ಹೇಳಿದ್ದಾರೆ. ಸಿಬಿಐ ಅಧಿಕಾರಿಗಳು ಇತಿಹಾಸಕಾರರ ಪಾತ್ರವನ್ನು ನಿರ್ವಹಿಸಿ ನಾಣ್ಯದ ಇತಿಹಾಸವನ್ನು ಮರುಸೃಷ್ಟಿಸಿದ್ದರು. ಆದರೆ, ತನಿಖೆಯಲ್ಲಿ ಭಾಗವಹಿಸಿದ್ದ ಬಹಳಷ್ಟು ಸಿಬಿಐ ಅಧಿಕಾರಿಗಳು ನಿವೃತ್ತಿ ಹೊಂದಿದ್ದರಿಂದ ಅದನ್ನು ಕೈ ಬಿಡಲಾಗಿತ್ತು. ಹರಾಜಿಗೆ ಬಂದಿದ್ದ ಅತಿ ದೊಡ್ಡ ಚಿನ್ನದ ನಾಣ್ಯದ ಗತಿ ಏನಾಯಿತೆಂಬುದು ನಂತರ ಗೊತ್ತೇ ಆಗಲಿಲ್ಲ ಎಂದು ಸಲ್ಮಾ ಹೇಳಿದ್ದಾರೆ.
ಟೆಸ್ಟ್​ ಡ್ರೈವ್ ವೇಳೆ ಮೂರನೇ ಮಹಡಿಯಿಂದ ಬಿದ್ದ ಕಾರು; ಇಬ್ಬರು ಸ್ಥಳದಲ್ಲೇ ಸಾವು..
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + 4 =
Remember me
