ವಾಷಿಂಗ್ಟನ್:ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಸದಸ್ಯ ರಾಷ್ಟ್ರದಿಂದ ಅಮೆರಿಕ ಹಿಂದಕ್ಕೆ ಸರಿದಿದೆ. ಕರೊನಾ ವೈರಸ್​ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾವನ್ನು ಬೆಂಬಲಿಸುತ್ತಿದೆ ಎನ್ನುವ ಆರೋಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಅಮೆರಿಕ ಔಪಚಾರಿಕವಾಗಿ ಹೊರ ನಡೆದಿದೆ.
ಕರೊನಾ ವೈರಸ್​ಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಪರವಾಗಿ ಪಕ್ಷಪಾತ ಮಾಡುತ್ತಿದೆ ಎನ್ನುವುದು ಟ್ರಂಪ್‌ ಆರೋಪವಾಗಿತ್ತು. ಅಷ್ಟೇ ಅಲ್ಲದೇ, ವಿಶ್ವವ್ಯಾಪಿಯಾಗಿ ಈ ವೈರಸ್‌ ಹರಡಲು ವಿಶ್ವ ಆರೋಗ್ಯ ಸಂಸ್ಥೆಯೇ ಕಾರಣ, ಮನುಷ್ಯರಿಂದ ಮನುಷ್ಯರಿಗೆ ಈ ವೈರಸ್‌ ಹರಡುತ್ತದೆ ಎನ್ನುವುದನ್ನು ಮೊದಲೇ ಕಂಡುಹಿಡಿದಿದ್ದರೆ, ಇಷ್ಟೊಂದು ಭೀಕರ ಸ್ವರೂಪದಲ್ಲಿ ವೈರಸ್‌ ಹರಡುತ್ತಿರಲಿಲ್ಲ ಎಂದು ಮೊದಲಿನಿಂದಲೂ ಟ್ರಂಪ್‌ ವಾದ ಮಾಡುತ್ತಲೇ ಬಂದಿದ್ದರು.
ಇದನ್ನೂ ಓದಿ:ಕಾನ್ಪುರ ಪೊಲೀಸರ​ ಹತ್ಯೆ ಪ್ರಕರಣ: ಆರೋಪಿ​ ವಿಕಾಸ್​ ದುಬೆ ಆಪ್ತ ಅಮರ್​ ದುಬೆ ಎನ್​ಕೌಂಟರ್​ನಲ್ಲಿ ಫಿನಿಶ್​
ಇದರ ಬೆನ್ನಲ್ಲೇ, ಟ್ರಂಪ್ ಸರ್ಕಾರವು ಆರೋಗ್ಯ ಸಂಸ್ಥೆಯಿಂದ ತನ್ನ ಸದಸ್ಯತ್ವವನ್ನು ಹಿಂದಕ್ಕೆ ಪಡೆಯಲು ಸಂಬಂಧಿಸಿದ ಪತ್ರವನ್ನು ಕಳುಹಿಸಿದೆ. ಈ ಹಿನ್ನೆಲೆಯಲ್ಲಿ 2021ರ ಜುಲೈ 6ರವರೆಗೆ ಅಮೆರಿಕ ಡಬ್ಲ್ಯುಎಚ್‌ಓನ ಸದಸ್ಯ ರಾಷ್ಟ್ರವಾಗಿರುವುದಿಲ್ಲ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್​ಗೆ ಕರೆ ಮಾಡಿ ಅಮೆರಿಕ ವಿಚಾರ ತಿಳಿಸಿದೆ ಎನ್ನಲಾಗಿದೆ.
ಮಲೇರಿಯಾ, ದಡಾರ, ಮಾನಸಿಕ ಆರೋಗ್ಯ ಸೇರಿ ಎಲ್ಲಾ ಜಾಗತಿಕ ರೋಗಗಳ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಹೋರಾಟ ನಡೆಸುತ್ತದೆ. ಇದಕ್ಕೆ ಅತಿ ಹೆಚ್ಚು ಧನಸಹಾಯ ಮಾಡುವ ದೇಶ ಅಮೆರಿಕವೇ ಆಗಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದ ಈ ನಿರ್ಧಾರದಿಂದ ಆರೋಗ್ಯ ಸಂಸ್ಥೆಗೆ ಭಾರಿ ಆಘಾತವಾಗಿದೆ.
ತಾವು ಸಂಸ್ಥೆಯಿಂದ ಹೊರಕ್ಕೆ ಉಳಿಯುವುದಾಗಿ ಏಪ್ರಿಲ್‌ನಲ್ಲಿಯೇ ಟ್ರಂಪ್‌ ಘೋಷಿಸಿದ್ದರು. ಈಗ ಹಿಂದಕ್ಕೆ ಸರಿದಿರುವ ಹಿನ್ನೆಲೆಯಲ್ಲಿ ಅನುದಾನದ ಹಣವನ್ನು ಕೂಡ ತಕ್ಷಣದಿಂದ ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ. 2,993 ಕೋಟಿ ರೂಪಾಯಿ ಧನಸಹಾಯವನ್ನು ಟ್ರಂಪ್‌ ನಿಲ್ಲಿಸಿದ್ದಾರೆ. ನವೆಂಬರ್ ತಿಂಗಳಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್​ ಪ್ರತಿಸ್ಪರ್ಧಿ ಜೋ ಬಿಡನ್​ ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ನಡೆಯಬಾರದು ಎಂದಿದ್ದಾರೆ.
ಅಮೆರಿಕದ ಸೆನೆಟರ್ ರಾಬರ್ಟ್ ಮೆನೆಂಡೆಜ್ ಅವರು ಡಬ್ಲ್ಯುಎಚ್‌ಒನಿಂದ ಬೇರ್ಪಟ್ಟ ಬಗ್ಗೆ ಅಮೆರಿಕದಿಂದ ಮಾಹಿತಿ ಬಂದಿದೆ ಎಂದು ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಟ್ರಂಪ್ ಸರ್ಕಾರದ ನಿರ್ಧಾರ ಅಮೆರಿಕವನ್ನು ಅನಾರೋಗ್ಯ ಮತ್ತು ಒಂಟಿಯಾಗಿ ಮಾಡುತ್ತದೆ ಎಂದವರು ಬರೆದಿದ್ದಾರೆ.
ಕರೊನಾ ಹತ್ತಿಕ್ಕಲು ಕನ್ನಡಿಗರಿಂದಲೇ ತಯಾರಾಯ್ತು ಆರು ಉಪಕರಣ- ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
