ನವದೆಹಲಿ:ಕೋವಿಡ್ 19 ಎರಡನೇ ಅಲೆಗೆ ಭಾರತದಲ್ಲಿ 34 ವೈದ್ಯರು ಮೃತಪಟ್ಟಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಶಿಯೇಷನ್ ತಿಳಿಸಿದೆ. ಮಾರ್ಚ್ ಕೊನೆ ವಾರದಲ್ಲಿ ಎರಡನೆ ಅಲೆ ಭಾರತದಲ್ಲಿ ಆರಂಭವಾಯಿತು. ಮೊದಲ ಅಲೆಗಿಂತ ಎರಡನೇ ಅಲೆ ಮಾರಕವಾಗಿದೆ ಎಂದು ಐಎಂಎ ಅಭಿಪ್ರಾಯಪಟ್ಟಿದೆ.
ವಿಶೇಷವೆಂದರೆ ಮೃತಪಟ್ಟ 34 ವೈದ್ಯರಲ್ಲಿ ಒಬ್ಬರು 28 ವರ್ಷದವರು ಹಾಗೂ ಇಬ್ಬರು 34 ವರ್ಷದ ಯುವ ವೈದ್ಯರಾಗಿದ್ದಾರೆ ಎಂದು ಐಎಂಎ ತಿಳಿಸಿದೆ. ಉಳಿದ ಬಹುತೇಕರು 50 ರಿಂದ 70 ವರ್ಷದವರಾಗಿದ್ದಾರೆ. ಇದರಲ್ಲಿ ಬಿಹಾರ, ಮಹಾರಾಷ್ಟ್ರದ ತಲಾ ಐವರು ಹಾಗೂ ದೆಹಲಿ ಮತ್ತು ಉತ್ತರ ಪ್ರದೇಶದ ತಲಾ ನಾಲ್ವರು ವೈದ್ಯರು ಮೃತಪಟ್ಟಿದ್ದಾರೆ.
ಕೋವಿಡ್ ಮೊದಲ ಅಲೆಯಲ್ಲಿ ದಾಖಲೆಗಳ ಪ್ರಕಾರ ಭಾರತದಲ್ಲಿ 730 ವೈದ್ಯರು ಮೃತಪಟ್ಟಿದ್ದರು.
ಕೋವಿಡ್​ನಿಂದಾಗಿ ಅತಿ ಹೆಚ್ಚು ಸಂಕಷ್ಟದಲ್ಲಿರುವವರು ವೈದ್ಯರು ಹಾಗೂ ನರ್ಸ್​ಗಳು. ಹೀಗಾಗಿ ಮೊದಲ ಹಂತದಲ್ಲೇ ಮುಂಚೂಣಿ ಕೋವಿಡ್ ವಾರಿಯರ್​ ಆಗಿರುವ ಇವರಿಗೆ ಲಸಿಕೆ ದೊರೆಯುವಂತೆ ಮಾಡಲಾಯಿತು. ಈಗಾಗಲೇ ಶೇ 80 ರಷ್ಟು ಲಸಿಕಾಕರಣ ಮುಗಿದಿದೆ ಎಂದು ಐಎಂಎ ಹಿರಿಯ ಸದಸ್ಯ ರವಿ ವಾಂಖಡೆಕರ್ ಹೇಳಿದ್ದಾರೆ. ಅಲ್ಲದೇ ವೈದ್ಯರು ಕೋವಿಡ್​ನಿಂದ ಮೃತಪಟ್ಟರೆ ಹೆಚ್ಚಿನ ಪರಿಹಾರ ಧನವನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕರೊನಾ ಭಯದಿಂದ ಅಮ್ಮನನ್ನು ಅಕ್ಕನ ಮನೆ ಎದುರು ಮಲಗಿಸಿ ಬಂದ; ಹೆತ್ತವಳನ್ನು ರಸ್ತೆಯಲ್ಲೇ ಮಲಗಿಸಿದ ಮಗಳು!

ದೇಶದಲ್ಲಿ ಮುಂದಿನ ತಿಂಗಳು ಕರೊನಾದ ಪರಿಸ್ಥಿತಿ ಬಗ್ಗೆ ಬೆಚ್ಚಿಬೀಳಿಸುವ ವರದಿ ನೀಡಿದ ಐಐಟಿ ತಜ್ಞರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 11 =
Remember me
