ನವದೆಹಲಿ :ಕರೊನಾ ಲಸಿಕೆಯ ಕೊರತೆ ತಲೆದೋರಿರುವಾಗ ಹೊಸದಾಗಿ ನೂರಾರು ಲಸಿಕಾ ಕೇಂದ್ರಗಳಿಗೆ ಚಾಲನೆ ನೀಡಿರುವ ದೆಹಲಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ದೆಹಲಿ ಹೈಕೋರ್ಟ್​ ಬೇಸರ ವ್ಯಕ್ತಪಡಿಸಿದೆ. ಜನರಿಗೆ ಎರಡೂ ಡೋಸ್​ಗಳನ್ನು ನೀಡಬಹುದು ಎಂಬ ಖಾತ್ರಿ ಇಲ್ಲದೆ ಎಷ್ಟೊಂದು ಲಸಿಕಾ ಕೇಂದ್ರಗಳನ್ನು ಸಂಭ್ರಮಾಡಂಬರಗಳಿಂದ ತೆರೆಯುವ ಅಗತ್ಯವೇನಿತ್ತು ಎಂದು ಕಟುವಾಗಿ ಪ್ರಶ್ನಿಸಿದೆ.
ಕೋವಾಕ್ಸಿನ್​ನ ಮೊದಲನೇ ಡೋಸ್​ ಪಡೆದಿರುವ ಲಕ್ಷಾಂತರ ಜನರಿಗೆ 6 ವಾರಗಳು ಇನ್​ಕ್ಯುಬೇಷನ್ ಪಿರಿಯಡ್​ ಮುಗಿಯುವುದರೊಳಗೆ ಎರಡನೇ ಡೋಸ್ ನೀಡಬೇಕಾಗಿದೆ. ಆದರೆ ದೆಹಲಿಯಲ್ಲಿ ಕೋವಾಕ್ಸಿನ್ ಕೊರತೆಯಿದ್ದು, ಎರಡನೇ ಡೋಸ್​ ಸಕಾಲಿಕವಾಗಿ ಸಿಗುವುದೇ ಎಂಬ ಅನುಮಾನವಿದೆ ಎಂದು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮತ್ತೊಂದು ಅರ್ಜಿಯಲ್ಲಿ ಕೋವಿಶೀಲ್ಡ್​ ಎರಡನೇ ಡೋಸ್​ಗೂ ಕೊರತೆ ಇದೆ ಎಂದು ದೂರಲಾಗಿದೆ.
ಇದನ್ನೂ ಓದಿ:ಚೋಕ್ಸಿಯನ್ನು ಕರೆತರಲು ಡೊಮಿನಿಕಾದಲ್ಲಿ ಸಿಬಿಐ ತಂಡ ಸನ್ನದ್ಧ
ಇಂದು ಈ ಅರ್ಜಿಗಳ ವಿಚಾರಣೆಯ ವೇಳೆ, “ಎರಡನೇ ಡೋಸ್​ಅನ್ನೂ ಒದಗಿಸಬಲ್ಲೆವೆಂಬ ಭರವಸೆ ಇಲ್ಲದ ಮೇಲೆ ನೀವು ಲಸಿಕಾ ಕೇಂದ್ರಗಳನ್ನು ಯಾಕೆ ಆರಂಭಿಸಿದಿರಿ ? ಆ ಕೆಲಸವನ್ನು ನಿಲ್ಲಿಸಬೇಕಿತ್ತು. ಎರಡನೇ ಡೋಸ್​ ಸಿಗುವುದಿಲ್ಲ ಎಂದಾಗ ಮಹಾರಾಷ್ಟ್ರ (ಲಸಿಕಾ ಕೇಂದ್ರಗಳನ್ನು ತೆರೆಯುವುದನ್ನು) ನಿಲ್ಲಿಸಿತ್ತು” ಎಂದು ಕೋರ್ಟ್​ ಹೇಳಿತು. “ಎಲ್ಲೆಡೆ ಸಂಭ್ರಮ ಮತ್ತು ಆಡಂಬರದಿಂದ ಎಷ್ಟೊಂದು ಲಸಿಕಾ ಕೇಂದ್ರಗಳನ್ನು ನೀವು ತೆರೆದುಬಿಟ್ಟಿದ್ದೀರಿ. ಈಗ ಎರಡನೇ ಡೋಸ್​ಗೆ ಸ್ಟಾಕ್ ಯಾವಾಗ ಲಭ್ಯವಾಗುತ್ತದೆ ಎಂದು ಗೊತ್ತಿಲ್ಲ ಎಂದು ಹೇಳುತ್ತಿದ್ದೀರಿ” ಎಂದು ಅಸಮಾಧಾನ ವ್ಯಕ್ತಪಡಿಸಿತು.
ದೆಹಲಿಯಲ್ಲಿ ಈವರೆಗೆ 54 ಲಕ್ಷ ಜನರಿಗೆ ಕರೊನಾ ಲಸಿಕೆ ನೀಡಲಾಗಿದೆ. ಇವರಲ್ಲಿ 12.24 ಜನರಿಗೆ ಮಾತ್ರ ಎರಡೂ ಡೋಸ್​ಗಳನ್ನು ನೀಡಲಾಗಿದೆ. ಒಂಭತ್ತು ದಿನಗಳಿಂದ ದೆಹಲಿಯಲ್ಲಿ 18-44 ವರ್ಷ ವಯೋಮಾನದವರಿಗೆ ಲಸಿಕಾ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ. ಹಾಲಿ ದೆಹಲಿಯಲ್ಲಿ 4,43,750 ಡೋಸ್​ ಲಸಿಕೆಗಳು ಲಭ್ಯವಿದ್ದು, ಇದರಲ್ಲಿ 3,96,000 ಕೋವಿಶೀಲ್ಡ್​​ ಡೋಸ್​ಗಳಾಗಿದ್ದು, 47,310 ಕೋವಾಕ್ಸಿನ್ ಡೋಸ್​ಗಳಾಗಿವೆ. ದೆಹಲಿಯ ಲಸಿಕಾಕರಣದ ವೇಗದಲ್ಲಿ ಇನ್ನು 19 ದಿನಗಳಲ್ಲಿ ಈ ಡೋಸ್​ಗಳು ಮುಗಿಯಲಿವೆ ಎನ್ನಲಾಗಿದೆ.(ಏಜೆನ್ಸೀಸ್)
VIDEO | ಕರೊನಾ ರೋಗಿ ಸತ್ತಿದ್ದಕ್ಕೆ ವೈದ್ಯನನ್ನು ಹಿಗ್ಗಾಮುಗ್ಗಾ ಥಳಿಸಿದರು! ಹಲ್ಲೆ ಮಾಡಿದ 24 ಜನರು ಜೈಲಿಗೆ

ಹೆಂಡತಿ ವಿರುದ್ಧ ಕೌಟುಂಬಿಕ ಹಿಂಸಾಚಾರ ಕಾನೂನು ಇಲ್ಲದ್ದು ದುರದೃಷ್ಟ : ಮದ್ರಾಸ್​ ಹೈಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 1 =
Remember me
