ನವದೆಹಲಿ:ದೇಶಾದ್ಯಂತ ಕರೊನಾ ಮಣಿಸಲು ಲಾಕ್​ಡೌನ್​ ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಮಹಿಳಾ ಖಾತೆದಾರರಿಗೆ ಎರಡನೇ ಹಂತದ 500 ರೂಪಾಯಿ ಮೇ 4ರಿಂದ ಹಂತಹಂತವಾಗಿ ಜಮೆಯಾಗಲಿದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ 3 ತಿಂಗಳು ತಲಾ 500 ರೂಪಾಯಿ ಜಮಾ ಮಾಡುವುದಾಗಿ ಮಾರ್ಚಿ 26ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು. ಅದರಂತೆ ಮಹಿಳಾ ಖಾತೆದಾರರಿಗೆ ಈಗಾಗಲೇ ಏಪ್ರಿಲ್​ ತಿಂಗಳ 500 ರೂ. ವರ್ಗಾವಣೆಯಾಗಿದೆ. ಮೇ ತಿಂಗಳ ಹಣ ಸೋಮವಾರದಿಂದ ಬಿಡುಗಡೆಯಾಗಲಿದ್ದು, ಬ್ಯಾಂಕ್​ ಮತ್ತು ಎಟಿಎಂಗಳಲ್ಲಿ ಜನದಟ್ಟಣೆ ತಪ್ಪಿಸಲು ಮೇ 11ರವರೆಗೆ ಹಂತಹಂತವಾಗಿ ಗ್ರಾಹಕರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಖಾತೆದಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಹಣ ಪಡೆಯಬಹುದು ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ದೇಬಸಿಶ್ ಪಾಂಡ ಶನಿವಾರ ಟ್ವೀಟ್​ ಮಾಡಿದ್ದಾರೆ.
ಯಾರಿಗೆ, ಯಾವಾಗ ಹಣ ಬರುತ್ತೆ?:ವೇಳಾಪಟ್ಟಿ ಪ್ರಕಾರ, ಪಿಎಂಜೆಡಿವೈ ಅಡಿಯಲ್ಲಿ ಮಹಿಳಾ ಖಾತೆದಾರರ ಬ್ಯಾಂಕ್​ ಖಾತೆ ಸಂಖ್ಯೆ ಕೊನೆಯಲ್ಲಿ 0 ಮತ್ತು 1 ಆಗಿದ್ದರೆ ಮೇ 4ರಂದು, ಹಾಗೇ ಕೊನೆಯ ಅಂಕಿ 2 ಅಥವಾ 3 ಇದ್ದಲ್ಲಿ ಮೇ 5 ರಂದು, 4 ಅಥವಾ 5 ಸಂಖ್ಯೆಯೊಂದಿಗೆ ಕೊನೆಗೊಳ್ಳುವ ಖಾತೆಗಳಿಗೆ ಮೇ 6ಕ್ಕೆ ಹಣ ಜಮೆ ಆಗಲಿದೆ. ಇನ್ನು 6 ಅಥವಾ 7 ರೊಂದಿಗೆ ಕೊನೆಗೊಳ್ಳುವ ಖಾತೆಗಳಿಗೆ ಮೇ 8ರಂದು, 8 ಅಥವಾ 9 ಸಂಖ್ಯೆಯೊಂದಿಗೆ ಕೊನೆಗೊಳ್ಳುವ ಖಾತೆಗಳಿಗೆ ಮೇ 11ಕ್ಕೆ ತಲಾ 500 ರೂ. ಬರಲಿದೆ ಎಂದು ದೇಬಸಿಶ್​ ಪಾಂಡ ತಿಳಿಸಿದ್ದಾರೆ.
ಹಣ ಜಮೆಯಾದ ದಿನವೇ ಫಲಾನುಭವಿಗಳು ಹಣ ಪಡೆಯಲು ಬ್ಯಾಂಕ್​, ಎಟಿಎಂಗಳ ಬಳಿ ಮುಗಿಬೀಳಬಾರದು. ತುತಾರ್ಗಿ ಹಣ ಬೇಕಿದ್ದವರೂ ಕರೊನಾ ಮುಂಜಾಗ್ರತೆ ಮರೆಯುವಂತಿಲ್ಲ. ಮೇ 11ರ ನಂತರ ಎಲ್ಲ ಫಲಾನುಭವಿಗಳೂ ಹಣ ಪಡೆಯಲು ಅವಕಾಶವಿದೆ ಎಂದು ಅವರು ವಿವರಿಸಿದ್ದಾರೆ.(ಏಜೆನ್ಸೀಸ್)
ದುಬೈ ಮಾಲ್​ ಮತ್ತೆ ಆರಂಭ, ವಿಶ್ವದ ಅತ್ಯಂತ ದೊಡ್ಡ ಮಾಲ್​ ಸ್ಥಗಿತಗೊಂಡಿದ್ದಾದರೂ ಏಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 1 =
Remember me
