ಕೊಲೊಂಬೊ:ಕರೊನಾ ವಿರುದ್ಧ ಹೋರಾಟದಲ್ಲಿ ಶ್ರೀಲಂಕಾಗೆ ಸಹಾಯಾರ್ಥವಾಗಿ 5 ಲಕ್ಷ ಕೋವಿಶೀಲ್ಡ್ ಲಸಿಕೆಗಳ ಡೋಸ್​ಗಳು ಇಂದು ಭಾರತದಿಂದ ಲಂಕಾಗೆ ಆಗಮಿಸಿವೆ ಎಂದು ಶ್ರೀಲಂಕಾದಲ್ಲಿನ ಭಾರತದ ಹೈಕಮಿಷನ್ ಟ್ವೀಟ್ ಮಾಡಿದೆ. ಈ ಲಸಿಕೆಗಳನ್ನು ನಾಳೆಯಿಂದ ವಿವಿಧ ಪ್ರದೇಶಗಳಿಗೆ ವಿತರಿಸಲಾಗುವುದು ಎನ್ನಲಾಗಿದೆ.
ಹೀಗೆ ಲಸಿಕೆಯನ್ನು ಅಂತರಾಷ್ಟ್ರೀಯ ಸಹಕಾರ ಒಪ್ಪಂದವಾದ ಕೋವಾಕ್ಸ್ ಕಾರ್ಯಕ್ರಮದ ಅಡಿ ಪಡೆಯಲಾಗಿದೆ. ಶ್ರೀಲಂಕಾ ಸರ್ಕಾರದ ಆರೋಗ್ಯ ಸಚಿವರಾದ ಚನ್ನ ಜಯಸುಮನ ಕೋವಿಶೀಲ್ಡ್​ ಲಸಿಕೆಯ 5 ಲಕ್ಷ ಡೋಸ್​ಗಳು ತಲುಪಿರುವ ಬಗ್ಗೆ ಗುರುವಾರ ಮಾಹಿತಿ ನೀಡಿದ್ದಾರೆ. ಶ್ರೀಲಂಕಾದ ಸ್ಟೇಟ್ ಫಾರ್ಮಸಿಟಿಕಲ್ಸ್ ಕಾರ್ಪೊರೇಷನ್ ಮತ್ತು ಭಾರತದ ಸೀರಮ್ ಇನ್ಸ್​ಟಿಟ್ಯೂಟ್ ನಡುವೆ ಆಗಿರುವ ಒಪ್ಪಂದದ ಅನುಸಾರವಾಗಿ ಈ ಹೊಸ ಕಂತಿನ ಲಸಿಕೆಗಳಿಗೆ ಆರ್ಡರ್ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ರಷಿಯಾದ ಕರೊನಾ ಲಸಿಕೆ ಭಾರತಕ್ಕೆ ತರಲು ರೆಡ್ಡೀಸ್ ಲ್ಯಾಬ್ ಅರ್ಜಿ
ಜನವರಿಯಲ್ಲಿ ಶ್ರೀಲಂಕಾಗೆ ಕರೊನಾ ಲಸಿಕೆಯ 5 ಲಕ್ಷ ಡೋಸ್​ಗಳ ಮೊದಲ ಕಂತನ್ನು ಭಾರತ ಉಡುಗೊರೆಯಾಗಿ ನೀಡಿತ್ತು. ತನ್ಮೂಲಕ ಲಂಕಾ ತನ್ನ ಲಸಿಕಾ ಅಭಿಯಾನವನ್ನು ಆರಂಭಿಸಿದ್ದು, ಮುಂಚೂಣಿ ಕಾರ್ಯಕರ್ತರಿಗೆ ಮತ್ತು ಸುರಕ್ಷಾ ಸಿಬ್ಬಂದಿಗೆ ಲಸಿಕೆಯನ್ನು ನೀಡಲಾಗಿತ್ತು. ಶ್ರೀಲಂಕದಲ್ಲಿ ಈವರೆಗೂ 80,500 ಕರೊನಾ ಪ್ರಕರಣಗಳು ವರದಿಯಾಗಿದ್ದು, 450 ಸಾವುಗಳು ಸಂಭವಿಸಿವೆ.
ಶ್ರೀಲಂಕಾ ಜೊತೆಗೆ ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್ ಮತ್ತು ಸೀಶೆಲ್ಸ್, ಅಫ್ಘಾನಿಸ್ತಾನ ಮತ್ತು ಮಾರಿಷಸ್ ದೇಶಗಳಿಗೆ ಕೂಡ ಕರೊನಾ ಲಸಿಕೆಗಳನ್ನು ಅನುದಾನದ ರೀತಿಯಲ್ಲಿ ಭಾರತ ನೀಡುತ್ತಿದೆ. ಭಾರತವು ವಿಶ್ವದ ಅತಿದೊಡ್ಡ ಔಷಧ ತಯಾರಕರಲ್ಲಿ ಒಂದಾಗಿದ್ದು, ಅನೇಕ ದೇಶಗಳು ಈಗಾಗಲೇ ಕರೊನಾ ಲಸಿಕೆಗಾಗಿ ಭಾರತದೊಂದಿಗೆ ಮಾತುಕತೆ ನಡೆಸುತ್ತಿವೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ
“ಕಾರು, ಬೈಕಿನಂತೆ ಹೆಂಡತಿಯನ್ನೂ ನಿಮ್ಮ ಆಸ್ತಿ ಎಂದು ತಿಳಿಯಬೇಡಿ” : ಗಂಡಸರಿಗೆ ಹೈಕೋರ್ಟ್ ಕಿವಿಮಾತು
ಹದಿನೇಳರ ಹುಡುಗಿಯ ಮೇಲೆ ಗ್ಯಾಂಗ್ ರೇಪ್… ಸ್ನೇಹಿತೆ ಮನೆಗೆ ಹೋಗಿದ್ದೇ ತಪ್ಪಾಯಿತು!
ಪಿಎನ್​ಬಿ ಹಗರಣ : ನೀರವ್ ಮೋದಿಯನ್ನು ಭಾರತಕ್ಕೆ ಒಪ್ಪಿಸಲು ಇಂಗ್ಲೆಂಡ್ ಕೋರ್ಟ್ ಅನುಮತಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 10 =
Remember me
