ಮುಂಬೈ:ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ-ಕಾಶ್ಮೀರದವರೆಗೆ ನಡೆದಿದ್ದ ಭಾರತ್​ ಜೋಡೋ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ದೊರಕಿತ್ತು. ಮೊದಲನೇ ಹಂತದಲ್ಲಿ ದೊರೆಕಿದ್ದ ಯಶಸ್ಸಿನಿಂದ ಕಾಂಗ್ರೆಸ್​ ನಾಯಕರು ಎರಡನೇ ಭಾಗದ ಭಾರತ್​ ಜೋಡೋ ಯಾತ್ರೆ ನಡೆಸಲು ಮುಂದಾಗಿದ್ದು, ಈ ಬಾರಿ ಪೂರ್ವದಿಂದ ಪಶ್ಚಿಮ ರಾಜ್ಯಗಳತ್ತ ಪಾದಯಾತ್ರೆ ನಡೆಸಲಿದ್ದಾರೆ.
ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ನಾನಾ ಪಟೋಲೆ ಕನ್ಯಾಕುಮಾರಿಯಿಂದ-ಕಾಶ್ಮೀರದವರೆಗೆ ರಾಹುಲ್​ ಗಾಂಧಿ ನಡೆಸಿದ ಭಾರತ್​ ಜೋಡೋ ಯಾತ್ರೆಗೆ ಅಭೂತಪೂರ್ವ ಯಶಸ್ಸು ದೊರೆಕಿತ್ತು. ಎರಡನೇ ಹಂತದಲ್ಲಿ ಗುಜರಾತಿನಿಂದ ಮೇಘಾಲಯದವರೆಗೆ ಭಾರತ್​ ಜೋಡೋ ಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ.
ಮೊದಲನೇ ಹಂತದಲ್ಲಿ ದಕ್ಷಿಣದಿಂದ ಉತ್ತರ ಭಾರತದತ್ತ ಹೆಜ್ಜೆ ಹಾಕಲಾಗಿತ್ತು. ಈ ಬಾರಿ ಪೂರ್ವದಿಂದ ಪಶ್ಚಿಮ ರಾಜ್ಯಗಳತ್ತ ಯಾತ್ರೆ ನಡೆಸಲು ಉದ್ದೇಶಿಸಲಾಗಿದೆ. ಗುಜರಾತ್​ನಿಂದ ಎರಡನೇ ಹಂತದ ಯಾತ್ರೆ ಆರಂಭವಾಗಲಿದೆ. ಈ ಸಂಬಂಧ ವೀಕ್ಷಕರನ್ನೂ ನೇಮಿಸಲಾಗಿದ್ದು ಸಮಿತಿ ನೀಡುವ ವರದಿ ಆಧರಿಸಿ ಸಿದ್ದತೆಗಳನ್ನು ಆರಂಭಿಸಲಾಗುವುದು ಎಂದು ಮಹಾರಾಷ್ಟ್ರ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ನಾನಾ ಪಟೋಲೆ ಮಾಹಿತಿ ನೀಡಿದ್ದಾರೆ.
#WATCH| "Second leg of Rahul Gandhi's Bharat Jodo Yatra to begin from Gujarat to Meghalaya," says Maharashtra Congress chief Nana Patolepic.twitter.com/KqjikjkDPK
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − four =
Remember me
