ತೆಲಂಗಾಣ: ಇಲ್ಲಿನ ಏಕೈಕ ಬಿಜೆಪಿ ಶಾಸಕ ರಾಜಾ ಸಿಂಗ್​ ಅವರಿಗೆ ಪೊಲೀಸರು ಪತ್ರವೊಂದನ್ನು ಕಳಿಸಿದ್ದು, ದಯವಿಟ್ಟು ಮೋಟರ್​ ಬೈಕ್​​ ಮೇಲೆ ಒಬ್ಬೊಬ್ಬರೇ ಓಡಾಡಬೇಡಿ ಎಂದು ಹೇಳಿದ್ದಾರೆ.
ರಾಜಾ ಸಿಂಗ್​ ಅವರಿಗೆ ಅಪಾಯ ಉಂಟಾಗಬಹುದು ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹಾಗಾಗಿ ಬೈಕ್​​ನಲ್ಲಿ ಸಂಚರಿಸಬೇಡಿ ಎಂದು ತಿಳಿಸಿದ್ದಾಗಿ ಹೈದರಾಬಾದ್ ಪೊಲೀಸರು ಹೇಳಿದ್ದಾರೆ.ರಾಜಾ ಸಿಂಗ್​ ಅವರು ಹೆಚ್ಚಾಗಿ ತಮ್ಮ ಮತ ಕ್ಷೇತ್ರದ ಸಂಚಾರಕ್ಕೆ ಬೈಕ್​ ಬಳಸುತ್ತಾರೆ. ಈಗ ಅವರಿಗೆ ಬೆದರಿಕೆ ಇದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ಮನವಿ ಮಾಡಲಾಗಿದೆ. ಸರ್ಕಾರ ನೀಡುವ ಬುಲೆಟ್​ ಪ್ರೂಫ್ ವಾಹನದಲ್ಲಿಯೇ ಸಂಚರಿಸಲು ಹೇಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ:ಕೋಮಾದಲ್ಲಿಯೇ ಇದ್ದಾರೆ ಪ್ರಣಬ್​ ಮುಖರ್ಜಿ; ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ
ಆದರೆ ಎಂಎಲ್​ಎ ಇದಕ್ಕೆ ಕ್ಯಾತೆ ತೆಗೆದಿದ್ದಾರೆ. ನನಗೇನು ಅಪಾಯವಿದೆ ಎಂಬುದನ್ನು ತಿಳಿಸಿ. ಕೆಲವು ಕಡೆಗಳಲ್ಲಿ ದೊಡ್ಡ ವಾಹನಗಳ ಪ್ರವೇಶ ಸಾಧ್ಯವಿಲ್ಲ. ಅಲ್ಲೆಲ್ಲ ಚಿಕ್ಕ ಬೈಕ್​​ನಲ್ಲಿಯೇ ಸಂಚಾರ ಮಾಡಬೇಕಾಗುತ್ತದೆ. ಕಿರಿದಾದ ಕಾಲು ದಾರಿಯಲ್ಲಿ ಬೈಕ್​ನಲ್ಲಿ ಹೋಗುವುದು ಅನಿವಾರ್ಯ ಎಂದು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ನಾನು ನನ್ನ ಕ್ಷೇತ್ರದ ಜನರನ್ನು ಮಾತನಾಡಿಸದೆ ಇರಲು ಸಾಧ್ಯವಿಲ್ಲ..ಅವರಿಂದ ದೂರ ಉಳಿಯಲಾಗದು. ನನ್ನ ಶೆಡ್ಯೂಲ್​​ಗಳಲ್ಲ ಯಾವುದೇ ಬದಲಾವಣೆ ಇಲ್ಲ ಎಂದೂ ಹೇಳಿದ್ದಾರೆ.
ಭದ್ರತೆ ದೃಷ್ಟಿಯಿಂದ ಪೊಲೀಸರು ಆಗಸ್ಟ್​ 28ರಂದು ಈ ಪತ್ರವನ್ನು ರಾಜಾ ಸಿಂಗ್​ ಅವರಿಗೆ ತಲುಪಿಸಿದ್ದಾರೆ. (ಏಜೆನ್ಸೀಸ್​)
ದೇಶದಲ್ಲಿ ಒಂದೇ ದಿನ 75,000ಕ್ಕೂ ಅಧಿಕ ಕರೊನಾ ಕೇಸ್​​; ‘ಇನ್ನಾದರೂ ಎಚ್ಚರಗೊಳ್ಳಿ’ ಎಂದ ಕಾಂಗ್ರೆಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
