ನವದೆಹಲಿ:ಭಾರತ ಅಮೆರಿಕದೊಂದಿಗೆ ಎರಡು ಬೃಹತ್ ಮೊತ್ತದ ರಕ್ಷಣಾ ಶಸ್ತ್ರಾಸ್ತ್ರ ಖರೀದಿ ಒಪ್ಪಂದಗಳನ್ನು ಅಂತಿಮಗೊಳಿಸಿದೆ. ಸುಮಾರು 25 ಸಾವಿರ ಕೋಟಿ ರೂಪಾಯಿ ಮೊತ್ತದಲ್ಲಿ 30 ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್​ಗಳನ್ನು ಖರೀದಿಸಲು ಭಾರತ ಮುಂದಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ವೇಳೆ ಈ ಒಪ್ಪಂದಗಳಿಗೆ ಉಭಯ ದೇಶಗಳ ನಾಯಕರು ಸಹಿ ಹಾಕುವ ನಿರೀಕ್ಷೆ ಇದೆ.
ನೌಕಾಪಡೆಗಾಗಿ 2.6 ಬಿಲಿಯನ್ ಡಾಲರ್ ಮೊತ್ತದಲ್ಲಿ 24 ‘ಎಂಎಚ್-60 ರೋಮಿಯೊ’ ಬಹುಕಾರ್ಯ ಹೆಲಿಕಾಪ್ಟರ್​ಗಳು ಹಾಗೂ ಸೇನೆಗಾಗಿ 930 ಮಿಲಿಯನ್ ಡಾಲರ್ ಮೊತ್ತದಲ್ಲಿ 6 ‘ಎಎಚ್-64ಇ’ ಆಕ್ರಮಣಕಾರಿ ಅಪಾಚೆ ಹೆಲಿಕಾಪ್ಟರ್​ಗಳನ್ನು ಭಾರತ ಖರೀದಿಸಲಿದೆ. ಅಮೆರಿಕ ಮತ್ತು ಭಾರತ ಮಧ್ಯೆ ಈ ಒಪ್ಪಂದಗಳಿಗೆ ಅಧಿಕೃತ ಮುದ್ರೆ ಬಿದ್ದರೆ ಮುಂದಿನ ಎರಡು ವರ್ಷಗಳಲ್ಲಿ ಮೊದಲ 6 ಹೆಲಿಕಾಪ್ಟರ್​ಗಳು ಭಾರತಕ್ಕೆ ಸಿಗಲಿವೆ. ಬಳಿಕ 2025ರ ವೇಳೆಗೆ ಉಳಿದ 24 ಹೆಲಿಕಾಪ್ಟರ್​ಗಳನ್ನೂ ಅಮೆರಿಕ ಹಸ್ತಾಂತರಿಸಲಿದೆ ಎಂದು ತಿಳಿದುಬಂದಿದೆ. ಈ ವ್ಯಾಪಾರದ ಮೂಲಕ 2007ರಿಂದ ಅಮೆರಿಕದಿಂದ ಭಾರತ ಖರೀದಿಸಿರುವ ರಕ್ಷಣಾ ಕ್ಷೇತ್ರದ ಸರಕುಗಳ ಒಟ್ಟು ಮೌಲ್ಯ ಬರೋಬ್ಬರಿ 20 ಬಿಲಿಯನ್ ಡಾಲರ್ ಗಡಿ ದಾಟಲಿದೆ. ಈಗಾಗಲೇ 2015ರಲ್ಲಿ 13,952 ಕೋಟಿ ರೂ. ಮೊತ್ತದಲ್ಲಿ ಮಾಡಿಕೊಂಡಿದ್ದ ಒಪ್ಪಂದಡಿ ಭಾರತಕ್ಕೆ ಇಂಥಹ 22 ಅತ್ಯಾಧುನಿಕ ಹೆಲಿಕಾಪ್ಟರ್​ಗಳು ಲಭಿಸಿದ್ದು, ಅವುಗಳನ್ನು ಸೇನೆಯ ವಿವಿಧ ವಲಯಗಳಲ್ಲಿ ನಿಯೋಜಿಸಲಾಗಿದೆ.
ಭಾರತ ಭೇಟಿಗೆ ಮೆಲನಿಯಾ ಉತ್ಸಾಹ:ಡೊನಾಲ್ಡ್ ಟ್ರಂಪ್ ಪತ್ನಿ ಮೆಲನಿಯಾ ಟ್ರಂಪ್ ಭಾರತಕ್ಕೆ ಭೇಟಿ ನೀಡಲು ಅತ್ಯಂತ ಉತ್ಸುಕಳಾಗಿದ್ದೇನೆ ಎಂದಿದ್ದಾರೆ. ‘ಭಾರತ ಭೇಟಿಗೆ ಆಹ್ವಾನಿಸಿದ್ದಕ್ಕೆ ಪ್ರದಾನಿ ಮೋದಿಗೆ ಧನ್ಯವಾದಗಳು. ಅಹಮದಾಬಾದ್ ಮತ್ತು ದೆಹಲಿಗೆ ಭೇಟಿ ನೀಡಲು ಎದುರುನೋಡುತ್ತಿದ್ದೇನೆ’ ಎಂದು ಮೆಲನಿಯಾ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 11 =
Remember me
