ಜಾರ್ಖಂಡ್:ರಾಜಧಾನಿ ರಾಂಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ವಾಹನದ ಮುಂದೆ ಇದ್ದಕ್ಕಿದ್ದಂತೆ ಮಹಿಳೆಯೊಬ್ಬರು ಕಾಣಿಸಿಕೊಂಡಿದ್ದು, ಭದ್ರತೆಯಲ್ಲಿ ದೊಡ್ಡ ಲೋಪ ಕಂಡುಬಂದಿದೆ. ಡೈನಾಮಿಕ್ ಎಸ್‌ಪಿಜಿ ಜವಾನರು ಬೆಂಗಾವಲು ಪಡೆಯನ್ನು ನಿಲ್ಲಿಸಿದ ನಂತರ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಮಹಿಳೆಯನ್ನು ವಿಚಾರಣೆ ಮಾಡಿದ್ದಾರೆ.
ಪ್ರಧಾನಿಯವರ ಕಾರಿನ ಮುಂದೆ ಬಂದ ಮಹಿಳೆನರೇಂದ್ರ ಮೋದಿ ಅವರು ಬುಧವಾರ ಬೆಳಗ್ಗೆ ಬಿರ್ಸಾ ಮ್ಯೂಸಿಯಂಗೆ ತೆರಳುತ್ತಿದ್ದಾಗ ರೇಡಿಯಂ ರಸ್ತೆ ಬಳಿ ಇದ್ದಕ್ಕಿದ್ದ ಹಾಗೆ ಮಹಿಳೆ ಪ್ರಧಾನಿಯವರ ಕಾರಿನ ಮುಂದೆ ಬಂದಿದ್ದಾರೆ. ರೇಡಿಯಂ ರಸ್ತೆಯಲ್ಲಿರುವ ಗಾರ್ಡನ್ ಫ್ರೆಶ್ ಅಂಗಡಿಯ ಮುಂದೆಯೇ ಈ ಮಹಿಳೆ ಪ್ರಧಾನಿಯವರ ಕಾರಿನ ಮುಂದೆ ಬಂದಿದ್ದಾಳೆ. ಆದರೆ ಆಗಲೇ ಎಚ್ಚೆತ್ತ ಎಸ್‌ಪಿಜಿ ಸಿಬ್ಬಂದಿ ಕೆಂಪು ಶಾಲು ಹಾಕಿದ್ದ ಮಹಿಳೆಯನ್ನು ವಾಹನದ ಮುಂಭಾಗದಿಂದ ಹೊರ ಹಾಕಿದ್ದಾರೆ. ಈ ಮಹಿಳೆಯ ಹೆಸರು ಸಂಗೀತಾ ಝಾ ಎಂದು ಹೇಳಲಾಗಿದೆ. ಆಕೆ ದಿಯೋಘರ್ ನಿವಾಸಿ. ವಿಚಾರಣೆ ಬಳಿಕ ಆಕೆಯನ್ನು ಬಿಡುಗಡೆ ಮಾಡಲಾಗಿದೆ. ಅವರು ಪ್ರಧಾನಿಯನ್ನು ಭೇಟಿಯಾಗಲು ಬಯಸಿದ್ದರು ಎನ್ನಲಾಗಿದೆ.
पीएम मोदी की गाड़ी के आगे आई महिला।#Jharkhand#Ranchi#Khundi#BirsaMundahttps://t.co/kmoR60ywjDpic.twitter.com/eA8f9Acm0y
— Yogesh Sahu (@ysaha951)November 15, 2023

ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪಪ್ರಧಾನಿಯವರ ಕಾರಿನ ಮುಂದೆ ದಿಢೀರ್ ಕಾಣಿಸಿಕೊಂಡ ಮಹಿಳೆಯ ವಿಡಿಯೋ ಅಂತರ್ಜಾಲ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದು ಪ್ರಧಾನಿ ಭದ್ರತೆಯಲ್ಲಿನ ದೊಡ್ಡ ಲೋಪ ಎಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ವೇಳೆ ಕರ್ತವ್ಯಲೋಪ ಎಸಗಿದ್ದಕ್ಕಾಗಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ.
ಪಶ್ಚಿಮ ಸಿಂಗ್‌ಭೂಮ್‌ನಿಂದ ಬಂದಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅಬು ಜಾಫರ್, ಹವಾಲ್ದಾರ್ ಛೋಟಾಲಾಲ್ ತುಡು ಮತ್ತು ಕಾನ್‌ಸ್ಟೆಬಲ್ ರಂಜನ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ರಣಬೀರ್ ಊದಿಕೊಂಡ ಮುಖವನ್ನು ನೋಡಿ “ನೀವು ಮತ್ತೆ ಕುಡಿಯಲು ಪ್ರಾರಂಭಿಸಿದ್ದೀರಾ” ಎನ್ನಬೇಕೆ?

Sign in to your account
Please enter an answer in digits:three + 9 =
Remember me
