ನವದೆಹಲಿ:ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್​ಎಸ್​ಸಿ) ಕಡಲ ಸುರಕ್ಷತೆ ಕುರಿತು ಸೋಮವಾರ ವರ್ಚುವಲ್ ಮೂಲಕ ನಡೆಯುವ ಉನ್ನತ ಮಟ್ಟದ ಸಭೆ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ. ಯುಎನ್​ಎಸ್​ಸಿಯ ಅಧ್ಯಕ್ಷತೆ ಅವಕಾಶವು ಈ ತಿಂಗಳು ಭಾರತಕ್ಕೆ ದೊರಕಿದೆ. ಏಳೂವರೆ ದಶಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯುಎನ್​ಎಸ್​ಸಿಯ ಅಧ್ಯಕ್ಷತೆಯನ್ನು ಭಾರತದ ಪ್ರಧಾನಿ ಸ್ವಯಂ ವಹಿಸುತ್ತಿದ್ದಾರೆ.
ಈ ಸಭೆಯಲ್ಲಿ ಐದು ಕಾಯಂ ರಾಷ್ಟ್ರಗಳು (ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ) ಮಾತ್ರವಲ್ಲದೆ ತಾತ್ಕಾಲಿಕ ಸದಸ್ಯತ್ವ ಹೊಂದಿರುವ (ಭಾರತ ಸೇರಿ) 10 ರಾಷ್ಟ್ರಗಳ ಪ್ರತಿನಿಧಿಗಳು ಭಾಗಿಯಾಗಲಿ ದ್ದಾರೆ. ಪ್ರಧಾನಿ ಮೋದಿಯೇ ಅಧ್ಯಕ್ಷತೆ ವಹಿಸುತ್ತಿರುವ ಕಾರಣ ಸಭೆಯಲ್ಲಿ ಈ ರಾಷ್ಟ್ರಗಳ ಚುನಾಯಿತ ನಾಯಕರೇ ಖುದ್ದು ಭಾಗವಹಿಸುವ ಸಾಧ್ಯತೆ ಇದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ) ತಿಳಿಸಿದೆ.
ಸಭೆಯಲ್ಲಿ ಕಡಲ್ಗಳತನಕ್ಕೆ ಕಡಿವಾಣ, ಹಡಗುಗಳ ಯಾನಕ್ಕೆ ಇರುವ ಅಭದ್ರತೆ ದೂರ ಮಾಡಲು ಸುರಕ್ಷತೆ ಹೆಚ್ಚಳ, ಅಂತಾರಾಷ್ಟ್ರೀಯ ನೌಕಾಯಾನದಲ್ಲಿ ಎಲ್ಲ ರಾಷ್ಟ್ರಗಳಿಂದ ಪರಸ್ಪರ ಸಹಕಾರ ಮುಂತಾದ ವಿಚಾರಗಳು ಕಾರ್ಯಸೂಚಿಯಲ್ಲಿವೆ ಎಂದು ಪಿಎಂಒ ಹೇಳಿದೆ. ಸಾಗರ ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರತದ ಇತಿಹಾಸ ಪುರಾತನ ಕಾಲದಿಂದಲೂ ಇದೆ. ಸಿಂಧೂ ನದಿ ನಾಗರಿಕತೆ ಕಾಲದಲ್ಲೇ ದೇಶದ ರೇವುಗಳು ವಾಣಿಜ್ಯ ವಹಿವಾಟು ನಡೆಸುತ್ತಿದ್ದ ಉಲ್ಲೇಖಗಳು ದೊರೆಯುತ್ತವೆ. ಭಾರತದ ಕಡಲ ವ್ಯಾಪಾರವು ಕಾಲಕಾಲಕ್ಕೆ ಸುಧಾರಣೆಗೊಂಡು, ದೇಶ ಸ್ವತಂತ್ರಗೊಂಡ ನಂತರ ತನ್ನದೇ ನೀತಿಯನ್ನು ಹೊಂದಿದೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ 2015ರಲ್ಲಿ ‘ಸಾಗರ’ (ಖಛ್ಚಿuಜಿಠಿಢ ಚ್ಞಛ ಎಟಡಿಠಿಜ ್ಛ್ಟ ಚ್ಝ್ಝ ಜ್ಞಿ ಠಿಜಛಿ ್ಕಜಜಿಟ್ಞ ಖಅಎಅ) ಎಂಬ ದೃಷ್ಟಿಕೋನವನ್ನು ಇದಕ್ಕೆ ನೀಡಿದ್ದಾರೆ. ಅಂದರೆ, ಪ್ರಾದೇಶಿಕ ವಲಯದಲ್ಲಿ ಪರಸ್ಪರ ಸಹಕಾರದ ಮೂಲಕ ಸಾಗರದ ಸುಸ್ಥಿರ ಬಳಕೆ ಆಶಯವಾಗಿದೆ. ಸುರಕ್ಷತಾ ಚೌಕಟ್ಟು, ಭದ್ರತೆ ಮತ್ತು ಕಡಲಯಾನದಲ್ಲಿ ಸ್ಥಿರತೆ ತರುವುದು ಇದರ ಉದ್ದೇಶ. ಭಾರತ ಹಿಂದು ಮಹಾಸಾಗರದಲ್ಲಿ ಕಡಲ ಸುರಕ್ಷತೆಯನ್ನು ವಹಿಸಿದೆ. ಹಿಂದು-ಶಾಂತ ಸಾಗರದ ನೌಕಾ ಸಂಚಾರದಲ್ಲೂ ಭಾರತದ ಪಾತ್ರ ಮಹತ್ವದ್ದಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − two =
Remember me
