ನವದೆಹಲಿ:ಮಧ್ಯಪ್ರದೇಶದ ಉಜ್ಜೈನ್​ನ ಮಹಾಕಾಲ ದೇವಸ್ಥಾನದಲ್ಲಿ ಭದ್ರತಾ ಅಧಿಕಾರಿಯಾಗಿದ್ದ ರೂಬಿ ಯಾದವ್​ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.
ದೇಗುಲಕ್ಕೆ ಬಂದಿದ್ದಾಗ ಕುಖ್ಯಾತ ಪಾತಕಿ ವಿಕಾಸ್​ ದುಬೆಯನ್ನು ಹಿಡಿಯಲು ದೇವಸ್ಥಾನದ ಮೂವರು ಭದ್ರತಾ ಸಿಬ್ಬಂದಿಯನ್ನು ಕಳುಹಿಸಿದ್ದು ಅವರ ಪಾಲಿಗೆ ಮಹಾಪರಾಧವಾಗಿ ಪರಿಣಮಿಸಿದೆ. ಇದರಿಂದಾಗಿ ಪಾತಕಿ ದುಬೆಯ ಬಂಧನದ ಬಗ್ಗೆಯೇ ಸಾಕಷ್ಟು ಅನುಮಾನಗಳು ಮೂಡಲಾರಂಭಿಸಿವೆ.
ಇದನ್ನೂ ಓದಿ:ದನದ ಹಿಂಡು ತಪ್ಪಿಸಲು ಚಾಲಕ ಪ್ರಯತ್ನಿಸಿದಾಗ ವಾಹನ ಪಲ್ಟಿ!
ಮಹಾಕಾಲ ದೇವಸ್ಥಾನದ ಭದ್ರತಾ ಉಸ್ತುವಾರಿಯಾಗಿದ್ದ ರೂಬಿ ಯಾದವ್​ ಅವರು ದುಬೆಯ ಬಂಧನದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಶಂಕಾಸ್ಪದ ವ್ಯಕ್ತಿ ದೇಗುಲದ ಪ್ರಾಂಗಣದಲ್ಲಿ ಸುತ್ತುತ್ತಿರುವ ಬಗ್ಗೆ ಅನುಮಾನಗೊಂಡ ಅವರು, ಪರಿಶೀಲಿಸಿದಾಗ ಅದು ದುಬೆ ಎಂಬುದು ಖಚಿತವಾಗಿತ್ತು. ಆದ್ದರಿಂದ ತಮ್ಮ ಭದ್ರತಾ ಸಿಬ್ಬಂದಿಯ ತಂಡದೊಂದಿಗೆ ಆತನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
ಸುದ್ದಿಗಾರರ ಜತೆ ಮಾತನಾಡಿದಾಗಲೂ ರೂಬಿ ಯಾದವ್​ ಅವರು ಇದೇ ಮಾತನ್ನು ಹೇಳಿದ್ದರು. ಆದರೆ, ಈ ಬಗ್ಗೆ ಮಧ್ಯಪ್ರದೇಶದ ಪೊಲೀಸರು ತಮ್ಮದೇ ಆದ ಕಟ್ಟುಕಥೆಯನ್ನು ಹೇಳಿದ್ದರು. ಆತ ದೇಗುಲದ ಮುಂದೆ ಇರುವ ಖಚಿತ ಮಾಹಿತಿ ಪಡೆದು, ಅಲ್ಲಿಗೆ ತೆರಳಿ ಬಂದಿಸಿದ್ದಾಗಿ ತಿಳಿಸಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಇಂಗ್ಲೆಂಡ್​ ವಿರುದ್ಧ ವೆಸ್ಟ್​ ಇಂಡೀಸ್​ ಮೇಲುಗೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
