ತಿರುವನಂತಪುರಂ:ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಲಕ್ಷದ್ವೀಪ ಮೂಲದ ನಟಿ-ರೂಪದರ್ಶಿ​ ಆಯಿಷಾ ಸುಲ್ತಾನ ಅವರಿಗೆ ಕೇರಳ ಹೈಕೋರ್ಟ್​ ಇಂದು ನಿರೀಕ್ಷಣಾ ಜಾಮೀನು ನೀಡಿದೆ.
ಆಯಿಷಾ ವಿರುದ್ಧ ಲಕ್ಷದ್ವೀಪ ಬಿಜೆಪಿ ಅಧ್ಯಕ್ಷ ಅಬ್ದುಲ್​ ಖಾದರ್​ ಅವರು ನೀಡಿರುವ ದೂರಿನ ಮೇಲೆ ಕವರತ್ತಿ ಪೊಲೀಸ್​ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 124 ಎ ಅಡಿಯಲ್ಲಿ (ದೇಶದ್ರೋಹ) ಮತ್ತು 153 ಬಿ ಅಡಿಯಲ್ಲಿ (ದ್ವೇಷ ಭಾಷಣ) ಪ್ರಕರಣ ದಾಖಲಾಗಿದೆ. ಮಲಯಾಳಂ ಟಿವಿ ಚಾನೆಲ್​ನಲ್ಲಿ ಪ್ರಸಾರವಾದ ಚರ್ಚಾ ಕಾರ್ಯಕ್ರಮದ ವೇಳೆ, ಲಕ್ಷದ್ವೀಪದಲ್ಲಿ ಕರೊನಾ ಹರಡಿಸಲು ಕೇಂದ್ರ ಸರ್ಕಾರ ಜೈವಿಕ ಅಸ್ತ್ರ ಬಳಸಿದೆ ಎಂದು ಆಯಿಷಾ ಗಂಭೀರ ಆರೋಪ ಮಾಡಿದ್ದು, ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಲಸಿಕೆಗೆ ಒತ್ತಾಯಿಸುವುದು, ಸೌಲಭ್ಯ ಕಟ್‌ ಎನ್ನುವ ಬೆದರಿಕೆ ಹಾಕುವುದು ಕಾನೂನುಬಾಹಿರ ಎಂದ ಹೈಕೋರ್ಟ್‌
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವು ನಾನ್​ಬೇಲಬಲ್​ ಆಗಿರುವುದರಿಂದ ನಿರೀಕ್ಷಣಾ ಜಾಮೀನು ಕೋರಿ ಜೂನ್ 14 ರಂದು ಕೇರಳ ಹೈಕೋರ್ಟ್​ನಲ್ಲಿ ಆಯಿಷಾ ಅರ್ಜಿ ಸಲ್ಲಸಿದ್ದರು. ತಮ್ಮ ಮಾತುಗಳು ಯಾವುದೇ ದುರುದ್ದೇಶದಿಂದ ಕೂಡಿರಲಿಲ್ಲ. ತಮಗೆ ತೊಂದರೆ ಕೊಡುವ ಉದ್ದೇಶದಿಂದ ದೂರು ದಾಖಲಿಸಲಾಗಿದೆ ಎಂದು ಆಯಿಷಾ ಹೇಳಿದ್ದರು.(ಏಜೆನ್ಸೀಸ್)
ಡೆಲ್ಟಾ ಪ್ಲಸ್ ಸೋಂಕಿನಿಂದ ಒಬ್ಬರು ಗುಣಮುಖ: ಸಚಿವ ಸುಧಾಕರ್ ಮಾಹಿತಿ

ಟ್ವಿಟರ್ ಇಂಡಿಯ ಎಂಡಿಗೆ ಕರ್ನಾಟಕ ಹೈಕೋರ್ಟ್​ ರಿಲೀಫ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + three =
Remember me
