ಉತ್ತರಪ್ರದೇಶ:ನೀಟಾಗಿ ಶೇವ್ ಮಾಡಿಕೊಳ್ಳಬೇಕು ಅಥವಾ ದಾಡಿ ಬಿಡಲು ಅನುಮತಿ ಪಡೆಯಬೇಕು.. ಎಂಬ ಷರತ್ತು ವಿಧಿಸಿದ್ದರೂ ಇಲ್ಲೊಬ್ಬರು ಸಬ್​ ಇನ್​ಸ್ಪೆಕ್ಟರ್ ಅದ್ಯಾವುದನ್ನೂ ಮಾಡದೆ ಈಗ ತೊಂದರೆಗೀಡಾಗಿದ್ದಾರೆ.
ಉತ್ತರಪ್ರದೇಶದ ಬಾಘ್​ಪಟ್​ನಲ್ಲಿ 3 ವರ್ಷಗಳಿಂದ ಸಬ್​ ಇನ್​ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಂತೆಸರ್ ಅಲಿ ಎಂಬವರು ಉದ್ದನೆಯ ದಾಡಿ ಬಿಟ್ಟಿದ್ದ ಕಾರಣ, ಗಡ್ಡ ಬೋಳಿಸಿಕೊಂಡು ಬರುವಂತೆ ಅಥವಾ ಗಡ್ಡ ಉಳಿಸಿಕೊಳ್ಳಲು ಮೇಲಧಿಕಾರಿಗಳ ಅನುಮತಿ ಪಡೆಯುವಂತೆ ಸೂಚನೆ ನೀಡಲಾಗಿತ್ತು. ಮೂರು ಮೂರು ಬಾರಿ ಈ ಬಗ್ಗೆ ನಿರ್ದೇಶನ ನೀಡಿದ್ದರೂ ಅವರು ಗಡ್ಡ ಬೋಳಿಸಲೂ ಇಲ್ಲ ಹಾಗೂ ಗಡ್ಡ ಉಳಿಸಿಕೊಂಡೇ ಕಾರ್ಯನಿರ್ವಹಿಸಲು ಮೇಲಧಿಕಾರಿಗಳಿಂದ ಅನುಮತಿಯನ್ನೂ ಪಡೆದಿರಲಿಲ್ಲ. ಹೀಗಾಗಿ ಅವರನ್ನು ಇಲಾಖೆ ಅಮಾನತು ಮಾಡಿದೆ.
ನಿಯಮಗಳ ಪ್ರಕಾರ, ಪೊಲೀಸ್​ ವೃತ್ತಿಯಲ್ಲಿ ಇರುವ ಸಿಕ್ಖರು ಮಾತ್ರ ಗಡ್ಡ ಬಿಟ್ಟಿರಲು ಅನುಮತಿ ಇದೆ. ಉಳಿದವರೆಲ್ಲ ಕ್ಲೀನ್​ ಶೇವ್ ಮಾಡಿಕೊಂಡಿರಬೇಕು. ಒಂದು ವೇಳೆ ಗಡ್ಡಧಾರಿ ಆಗಿರಬೇಕು ಎಂದರೆ ಮೇಲಧಿಕಾರಿಗಳಿಂದ ಅನುಮತಿ ಪಡೆದಿರಬೇಕು. ಆದರೆ ಇಂತೆಸರ್ ಅಲಿ ಎರಡರಲ್ಲಿ ಯಾವುದನ್ನೂ ಮಾಡದ್ದರಿಂದ ಅಮಾನತು ಮಾಡಲಾಗಿದೆ ಎಂದು ಬಾಘ್​ಪಟ್​ನ ಎಸ್​ಪಿ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − two =
Remember me
