ಗುಜರಾತ್​:ಚೆನ್ನಾಗಿ ಓದು ಎಂದು ಮಕ್ಕಳಿಗೆ ಮನೆಯಲ್ಲಿ ಬುದ್ಧಿ ಹೇಳುವುದು, ಬಯ್ಯುವುದೆಲ್ಲ ಹೊಸದೇನಲ್ಲ. ಆದರೆ ಈ ಘಟನೆ ಹಾಗೆ ಹೇಳುವುದಕ್ಕೂ ಪೋಷಕರು ಹಿಂಜರಿಯುವಂತೆ ಮಾಡುವ ಹಾಗಿದೆ. ಅಪ್ಪ-ಅಮ್ಮ ಹಾಗೂ ಅಜ್ಜಿ ‘ಓದು ಓದು’ ಅಂತ ಬೈದರು ಎಂದು ಬೇಜಾರಾದ ಈ ಹುಡುಗ ಒಂದಿಡೀ ವಾರ ಅವರನ್ನೆಲ್ಲ ಟೆನ್ಷನ್​ನಲ್ಲಿ ಇರುವಂಥ ಕಿತಾಪತಿ ಮಾಡಿದ್ದಾನೆ.
ಗುಜರಾತ್​ನ ವಡೋದರದಲ್ಲಿನ ಈ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಮನೆಯವರ ಮೇಲೆ ಬೇಸರ ಮಾಡಿಕೊಂಡವನೇ ಸೀದಾ ಗೋವಾಗೆ ಹೋಗಿ ಕ್ಲಬ್​-ಪಬ್​ಗಳಲ್ಲಿ ಎಂಜಾಯ್​ ಮಾಡಿದ್ದಾನೆ. ಕಳೆದ ವಾರ ಹೇಳದೆ ಕೇಳದೆ ಮನೆಯಿಂದ ಹೊರಟಿದ್ದ ಈತ ಮೊದಲಿಗೆ ವಡೋದರದಿಂದ ಗೋವಾಗೆ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಪಡೆಯಲು ಮುಂದಾಗಿದ್ದ. ಆದರೆ ಆಧಾರ್ ಕಾರ್ಡ್ ಇರದ ಕಾರಣ ಅದು ಸಾಧ್ಯವಾಗಿರಲಿಲ್ಲ. ಬಳಿಕ ಅಲ್ಲಿಂದ ಪುಣೆಗೆ ಬಸ್​ನಲ್ಲಿ ತೆರಳಿದ ಈತ, ನಂತರ ಇನ್ನೊಂದು ಬಸ್​ನಲ್ಲಿ ಗೋವಾ ತಲುಪಿದ್ದ.
ಇದನ್ನೂ ಓದಿ:‘ಸೆಕ್ಸ್​ಪರ್ಟ್’​ ಇನ್ನಿಲ್ಲ: ಇವರಿದ್ದಾಗ ಸಿಕ್ಕಿತ್ತು ಅದೆಷ್ಟೋ ಮಂದಿಗೆ ಸಾಂತ್ವನ-ಸಮಾಧಾನ…
ಗೋವಾದಲ್ಲಿ ಸಿಕ್ಕ ಸಿಕ್ಕ ಪಬ್​-ಕ್ಲಬ್​ಗಳಿಗೆ ತೆರಳಿ ಮನಸೋ ಇಚ್ಛೆ ಎಂಜಾಯ್​ ಮಾಡಿದ ಈತ, ಇನ್ನೇನು ಮನೆಯಿಂದ ತಂದಿದ್ದ ಹಣವೆಲ್ಲ ಖಾಲಿಯಾಗಿಬಿಡುತ್ತದೆ ಎನ್ನುವಾಗಲೇ ಅಲ್ಲಿಂದ ವಾಪಸ್ ಹೊರಟಿದ್ದು. ಇತ್ತ ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ಕೊಟ್ಟ ತಂದೆ-ತಾಯಿಗೆ ಮತ್ತೊಂದು ಶಾಕ್​ ಕಾದಿತ್ತು. ಏಕೆಂದರೆ ಮನೆಯಲ್ಲಿಟ್ಟಿದ್ದ 1.5 ಲಕ್ಷ ರೂ. ಕಾಣೆಯಾಗಿತ್ತು. ಅಷ್ಟರಲ್ಲಾಗಲೇ ಹುಡುಗ ಪುಣೆಗೆ ಮರಳಿದ್ದ.
ಮೊಬೈಲ್​ಫೋನ್​ ಜಾಡು ಹಿಡಿದು ಹುಡುಕಲೆತ್ನಿಸಿದ್ದ ಪೊಲೀಸರಿಗೆ ಅದು ಸಾಧ್ಯವಾಗಿರಲಿಲ್ಲ. ಏಕೆಂದರೆ ಇವನು ಮೊಬೈಲ್​ಫೋನ್​ ಸ್ವಿಚ್ಡ್​ ಆಫ್​ ಮಾಡಿಟ್ಟುಕೊಂಡಿದ್ದ. ಡಿ. 25ರಂದು ಪುಣೆಯಲ್ಲಿ ಈತ ಫೋನ್​ ಸ್ವಿಚ್ ಆನ್​ ಮಾಡುತ್ತಿದ್ದಂತೆ ಟ್ರೇಸ್ ಮಾಡಿದ್ದ ಪೊಲೀಸರು ಅಲ್ಲಿನ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಪುಣೆ ಪೊಲೀಸರು ಈ ಪೋರನನ್ನು ಪತ್ತೆ ಮಾಡಿ, ಡಿ. 26ರಂದು ವಡೋದರ ಪೊಲೀಸರಿಗೆ ಒಪ್ಪಿಸಿದ ಮೇಲೆ ನಾಪತ್ತೆ ಪ್ರಕರಣ ಸುಖಾಂತಗೊಂಡಿದೆ. (ಏಜೆನ್ಸೀಸ್​)
ಇದನ್ನೂ ಓದಿ:ವರ್ಷಾಂತ್ಯದ ರಾತ್ರಿ ಇಲ್ಲೆಲ್ಲ ಹೋಗಲೇಬೇಡಿ; ಹೋದರೆ ಅಷ್ಟೇ..
ಇವರಿಬ್ಬರು ಸಿಕ್ಕಿ ಬೀಳದಿದ್ದರೆ ವರ್ಷಾಂತ್ಯದ ಮಧ್ಯರಾತ್ರಿ ಅದೇನಾಗಿರುತ್ತಿತ್ತೋ!?

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್: ಕೊರಗಿ ಕೊರಗಿ ಆತ್ಮಹತ್ಯೆಗೆ ಶರಣಾದ ಹುಡುಗ..!

ರೈತರು ಪ್ರತಿಭಟಿಸುತ್ತಿರುವ ಸ್ಥಳದಲ್ಲೇ ‘ಹಾಟ್​ ಸ್ಪಾಟ್​’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 15 =
Remember me
