ನವದೆಹಲಿ:ಅಪರೂಪದಲ್ಲೇ ಅತಿ ಅಪರೂಪವಾಗಿರುವ ಎರಡು ತಲೆಯ ಹಾವು ಭಾರತದಲ್ಲಿ ಪತ್ತೆಯಾಗಿದ್ದು, ಅವುಗಳು ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಪೂರ್ವ ಭಾರತದ ಅರಣ್ಯ ವಲಯದಲ್ಲಿ ವನ್ಯಜೀವಿ ಉತ್ಸಾಹಿಗಳು ಎರಡು ತಲೆಯ ವಿಶೇಷ ಹಾವನ್ನು ಪತ್ತೆಹಚ್ಚಿದ್ದು, ಇದನ್ನು ಕಂಡ ಪ್ರಾಣಿ ತಜ್ಞರು ಕಕ್ಕಾಬಿಕ್ಕಿಯಾಗಿದ್ದಾರೆ. ಈ ಸರಿಸೃಪಗಳು ಹೊಸದಾಗಿ ಜನಿಸಿದ್ದು, ಅದನ್ನು ವೂಲ್ಫ್​ ಸ್ನೇಕ್ ​(Wolf Snake) ಎಂದು ಕರೆಯಲಾಗಿದೆ. ಇವು ವಿಷಕಾರಿ ವರ್ಗಕ್ಕೆ ಸೇರಿದ್ದಲ್ಲ.
ಅಪರೂಪದ ಸರಿಸೃಪವು ಒಡಿಶಾದ ಕಿಯೋಂಜ್ಹಾರ್​ ವನ್ಯಜೀವಿ ಅಭಯಾರಣ್ಯದ ಧೆಂಕಿಕೊಟ್​ನಲ್ಲಿ ಪತ್ತೆಯಾಗಿದ್ದು, ಇದನ್ನು ಭಾರತೀಯ ಫೋಟೋಗ್ರಾಫರ್​ ರಾಕೇಶ್​ ಮೊಹಲಿಕ್​ ಎಂಬುವರು ಸೆರೆಹಿಡಿದಿದ್ದಾರೆ.
ಇದನ್ನೂ ಓದಿ:ಸಕ್ಕರೆ ನಾಡಿನ ಜನರೇ ಹುಷಾರು… ಇಲ್ಲದಿದ್ರೆ ಬೆಲೆ ತೆರಬೇಕಾದೀತು…!
14 ಸೆಂಟಿಮೀಟರ್​ ಉದ್ದದ ಹಾವಿನಲ್ಲಿ, ಪೂರ್ಣವಾಗಿ ರಚನೆಯಾದ ಎರಡು ತಲೆಗಳಿದ್ದು, ಕಾರ್ಯನಿರ್ವಹಿಸುವ ನಾಲ್ಕು ಕಣ್ಣುಗಳಿವೆ ಮತ್ತು ಎರಡು ಉದ್ದ ನಾಲಿಗೆ ಇದೆ ಎಂದು ಪರಿಣಿತರು ಹಾವನ್ನು ಪರೀಕ್ಷಿಸಿದ ಬಳಿಕ ತಿಳಿಸಿದ್ದಾರೆ.
ವಿಶೇಷವೆಂದರೆ ಎರಡೂ ತಲೆ ಕೂಡ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ಈ ಜೀವಜಗತ್ತಿನಲ್ಲಿ ಜೀವಿಗಳು ಎರಡು ತಲೆಯನ್ನು ಇಟ್ಟುಕೊಂಡು ಬದುಕುಳಿಯುವುದು ತುಂಬಾನೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಪ್ರಾಣಿ ತಜ್ಞರು.
ಅಂದಹಾಗೆ ಫೋಟೋಗ್ರಾಫರ್​ ರಾಕೇಶ್​ ಅವರು ವನ್ಯಜೀವಿ ಉತ್ಸಾಹಿ ಹಾಗೂ ಸಂಶೋಧಕರು ಆಗಿದ್ದು ಸಾಕಷ್ಟು ಪ್ರಭೇದ ಜೀವಿಗಳನ್ನು ಪತ್ತೆಹಚ್ಚಿದ್ದಾರೆ. ವೂಲ್ಫ್​ ಸ್ನೇಕ್​ ಕೂಡ ಒಂದಾಗಿದ್ದು, ಈ ಜೀವಿಗಳು ತಮ್ಮಷ್ಟಕ್ಕೆ ತಾವೇ ಸ್ಪರ್ಧೆಗೆ ಇಳಿಯುತ್ತವೆ. ಎರಡು ತಲೆಗಳಲ್ಲಿ ಒಂದು ಹೆಚ್ಚು ಬೆಳವಣಿಗೆಯಾಗುತ್ತದೆ ಮತ್ತು ಊಟಕ್ಕಾಗಿ ಎರಡು ಕೂಡ ಕಚ್ಚಾಡುತ್ತವೆ ಎಂದು ರಾಕೇಶ್​ ವಿವರಿಸಿದ್ದಾರೆ.
ಇದನ್ನೂ ಓದಿ:ಐಫೋನ್ ಗಿಫ್ಟ್ ಆಮಿಷ: ಆನ್​ಲೈನ್ ಲಿಂಕ್ ಕಳುಹಿಸಿ ಇಬ್ಬರ ಬ್ಯಾಂಕ್ ಖಾತೆಗೆ ಕನ್ನ
ಹಾವನ್ನು ಪತ್ತೆಹಚ್ಚಿ ಪರೀಕ್ಷಿಸಿದ ಬಳಿಕ ಮರಳಿ ಅದನ್ನು ಕಾಡಿಗೆ ಸುರಕ್ಷಿತವಾಗಿ ಬಿಡಲಾಗಿದೆ. ನಾವು ಪುರಾಣಗಳಲ್ಲಿ ಮಾತ್ರ ಎರಡು ತಲೆಯ ಹಾವಿನ ಉಲ್ಲೇಖವನ್ನು ಕೇಳಿದ್ದೆವು. ಆದರೆ, ನಿಜವಾಗಿಯು ನೋಡಿದಾಗ ಅಚ್ಚರಿಯಾಗುವುದು ಸತ್ಯ. ಏನೇ ಆಗಲಿ ಪ್ರಕೃತಿಯ ಮಡಿಲಲ್ಲಿ ಎಷ್ಟು ಕೌತುಕಗಳಿವೆ ಎಂದು ಅಂದಾಜಿಸಲು ಸಾಧ್ಯವೇ?.(ಏಜೆನ್ಸೀಸ್​)
https://www.youtube.com/watch?v=IwdTal5PH_4
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × three =
Remember me
