ನವದೆಹಲಿ:ತನ್ನ ಭಾರತೀಯ ಪ್ರೇಮಿ ಸಚಿನ್ ಮೀನಾ ಅವರೊಂದಿಗೆ ಇರಲು ಅಕ್ರಮವಾಗಿ ಗಡಿಗಳನ್ನು ದಾಟಿದ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್, ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತವಾಗಿ ದೇಶದ ಉತ್ಸಾಹವನ್ನು ಪ್ರತಿಧ್ವನಿಸಿ, ಭಾನುವಾರ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದವರಾದ ಸೀಮಾ ಅವರು ತಮ್ಮ ವಕೀಲ ಎಪಿ ಸಿಂಗ್ ಅವರೊಂದಿಗೆ ನೋಯ್ಡಾದ ತಮ್ಮ ನಿವಾಸದಲ್ಲಿ ನಡೆದ ‘ಹರ್ ಘರ್ ತಿರಂಗಾ’ ಆಚರಣೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಸೀಮಾ ಹೈದರ್, ಸಿನಿಮಾದಲ್ಲಿ ನಟಿಸುವಂತೆ ಬಂದಿದ್ದ ಆಫರ್ ತಿರಸ್ಕರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಸೀಮಾ ಹೈದರ್​​ಗೆ ಆರ್‌ಪಿಐ ಟಿಕೆಟ್ ನೀಡುವ ವಿಚಾರ: ‘ಕೊಡುತ್ತೇವೆ, ಪಕ್ಷದಿಂದಲ್ಲ ಪಾಕಿಸ್ತಾನಕ್ಕೆ…’ ಎಂದ ರಾಮ್ ದಾಸ್ ಅಠವಳೆ
ಈ ಹಿಂದೆ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಪಕ್ಷದ ಮುಖಂಡರೊಬ್ಬರು ಸೀಮಾ ಹೈದರ್ ಬಾಲಿವುಡ್‍ಗೆ ಪಾದಾರ್ಪಣೆ ಮಾಡುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಅದಾದ ನಂತರ ಈ ಬೆಳವಣಿಗೆ ನಡೆದಿದೆ. ನೋಯ್ಡಾ ಮೂಲದ ಚಲನಚಿತ್ರ ನಿರ್ಮಾಪಕ ಅಮಿತ್ ಜಾನಿ ನಿರ್ಮಿಸಲಿರುವ ತಮ್ಮ ಚೊಚ್ಚಲ ಚಿತ್ರ ‘ಕರಾಚಿ ಟು ನೋಯ್ಡಾ’ ಚಿತ್ರೀಕರಣದಲ್ಲಿ ಸೀಮಾ ಹೈದರ್ ನಿರತರಾಗಿದ್ದಾರೆ ಎಂಬುದು ಬರೇ ಊಹಾಪೋಹವಾಗಿದ್ದರೂ ಈ ಬೆದರಿಕೆ ಬಂದಿದೆ.
#noidaसीमा हैदर ने अपने घर पर तिरंगा लगाया, भारत माता की जय और हिंदुस्तान जिंदाबाद के नारे लगाये….#seemahaidar#seemasachi#seemahaiderpakistan#SeemaHaiderpic.twitter.com/WSuRlUwF3Z— Prashant Tripathi (@prashantncrrepo)August 13, 2023
#noidaसीमा हैदर ने अपने घर पर तिरंगा लगाया, भारत माता की जय और हिंदुस्तान जिंदाबाद के नारे लगाये….#seemahaidar#seemasachi#seemahaiderpakistan#SeemaHaiderpic.twitter.com/WSuRlUwF3Z
ಇದನ್ನೂ ಓದಿ:ಅಕ್ರಮವಾಗಿ ಭಾರತ ಪ್ರವೇಶಿಸಿದ ಸೀಮಾ ಹೈದರ್​, ಸಿನಿಮಾದಲ್ಲಿ RAW ಏಜೆಂಟ್ ಪಾತ್ರ ನಿರ್ವಹಿಸುತ್ತಾರಾ?!
ಸೀಮಾ ಹೈದರ್, ಸಚಿನ್ ಮತ್ತು ಸಿಂಗ್ ಅವರು ಜೈ ಭಾರತ್ ಮಾತಾ ಮತ್ತು ಹಿಂದೂಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಇದನ್ನೂ ಓದಿ:ಸೀಮಾ ಹೈದರ್​ಳನ್ನು ಪಾಕಿಸ್ತಾನಕ್ಕೆ ವಾಪಸ್​ ಕಳಿಸ್ತೀರಾ? ಸಿಎಂ ಯೋಗಿ ಆದಿತ್ಯನಾಥ್​ ಕೊಟ್ಟ ಉತ್ತರ ಹೀಗಿತ್ತು….
ಪಾಕಿಸ್ತಾನದ ಸಿಂಧ್ ಪ್ರಾಂತ್ಯದವರಾದ ಸೀಮಾ, ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ವಾಸಿಸುವ ಸಚಿನ್ ಅವರೊಂದಿಗೆ ವಾಸಿಸಲು ಮೇ ತಿಂಗಳಲ್ಲಿ ನೇಪಾಳದ ಮೂಲಕ ಬಸ್‍ನಲ್ಲಿ ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದರು. ಜುಲೈನಲ್ಲಿ, ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ತನ್ನ ಪತಿ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸಿಸಲು ಅವಕಾಶ ನೀಡಬೇಕು ಎಂದು ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮುಂದೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರು.
ಇದನ್ನೂ ಓದಿ:ಪಾಕ್ ಪ್ರಜೆ ಸೀಮಾ ಹೈದರ್​​​ಗೆ ಭಾರತದ ಪೌರತ್ವ ನೀಡುವಂತೆ ಸಚಿನ್ ತಂದೆ ಒತ್ತಾಯ
ವಕೀಲ ಎಪಿ ಸಿಂಗ್ ಅವರು ಸಲ್ಲಿಸಿದ ಮನವಿಯಲ್ಲಿ ರಾಷ್ಟ್ರಪತಿಗಳು ಪ್ರಕರಣದ ಮೌಖಿಕ ವಿಚಾರಣೆಯನ್ನು ನಡೆಸುವಂತೆ ಕೋರಿದ್ದಾರೆ.
ಇದನ್ನೂ ಓದಿ:ಸೀಮಾ ಹೈದರ್ ಆಯ್ತು, ಪ್ರಿಯಕರನನ್ನು ಹುಡುಕಿಕೊಂಡು ಏಳು ಸಮುದ್ರ ದಾಟಿ ಬಂದ ಮತ್ತೋರ್ವ ಮಹಿಳೆ!
ಸೀಮಾ (30) ಮತ್ತು ಸಚಿನ್ (22) 2019 ರಲ್ಲಿ ಆನ್ಲೈನ್ ಗೇಮ್ ಪಬ್ಜಿ ಆಡುವಾಗ ವರ್ಚುವಲ್ ಆಗಿ ಭೇಟಿಯಾದರು. ನಂತರ 2023ರಲ್ಲಿ, ಸೀಮಾ ಪಾಕಿಸ್ತಾನದಿಂದ ದುಬೈಗೆ, ನಂತರ ನೇಪಾಳಕ್ಕೆ ಪ್ರಯಾಣಿಸಿ ಗಡಿ ದಾಟಿ ಭಾರತಕ್ಕೆ ಪ್ರವೇಶಿಸಿದರು.
ಇದನ್ನೂ ಓದಿ:ಅಂಜು ಗಂಡನ ಬಳಿ ಸೀಮಾ ಬಗ್ಗೆ ಕೇಳಿದ ವರದಿಗಾರ್ತಿ: ಅರವಿಂದ್​ ಕೊಟ್ಟ ಪ್ರತಿಕ್ರಿಯೆ ವೈರಲ್​
ಸೀಮಾ ಹೈದರ್ ಅವರು ಪಾಕಿಸ್ತಾನ ಸೇನೆ ಮತ್ತು ದೇಶದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ನೊಂದಿಗೆ ಸಂಭಾವ್ಯ ಸಂಪರ್ಕಗಳ ಬಗ್ಗೆ ಯುಪಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಗುಪ್ತಚರ ಬ್ಯೂರೋ (ಐಬಿ) ಹದ್ದಿನ ಕಣ್ಣನ್ನು ಇಟ್ಟಿವೆ.
ಇದನ್ನೂ ಓದಿ:ರೂಮ್​ ನಂ. 204ರ ರಹಸ್ಯ ಬಯಲು: ಪಾಕ್​ ಮಹಿಳೆ ಸೀಮಾ ಜತೆ ಸಚಿನ್​ ರೀಲ್ಸ್​, ಮಹತ್ವದ ಮಾಹಿತಿ ಬೆಳಕಿಗೆ
ಯುಪಿ ಎಟಿಎಸ್ ಮೂಲಗಳ ಪ್ರಕಾರ, ಸೀಮಾ ಹೈದರ್ ಈ ಹಿಂದೆ ಪಬ್ಜಿ ಮೂಲಕ ಭಾರತದ ಹಲವಾರು ಜನರೊಂದಿಗೆ ಸಂಪರ್ಕದಲ್ಲಿದ್ದರು. ವಿಚಾರಣೆಯ ಸಮಯದಲ್ಲಿ, ಸೀಮಾ ಹೈದರ್ ಹೆಚ್ಚಾಗಿ ದೆಹಲಿ-ಎನ್ಸಿಆರ್ ಜನರನ್ನು ಪಬ್ಜಿ ಮೂಲಕ ಸಂಪರ್ಕಿಸಿದ್ದಳು ಎಂದು ತಿಳಿದುಬಂದಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 1 =
Remember me
