ನವದೆಹಲಿ:ಕೆಲವು ತಿಂಗಳ ಹಿಂದೆ ಸೀಮಾ ಹೈದರ್ ಎಂಬ ಮಹಿಳೆ PUBG ಯಲ್ಲಿ ಪರಿಚಯವಾದ ಯುವಕನಿಗಾಗಿ ಪಾಕಿಸ್ತಾನದಿಂದ ತನ್ನ ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದು ಆ ಸಮಯದಲ್ಲಿ ಸುದ್ದಿಯಲ್ಲಿ ಹಾಟ್ ಟಾಪಿಕ್ ಆಗಿತ್ತು. ಇದೀಗ ರಾಮನ ಮೇಲಿನ ಭಕ್ತಿಯನ್ನು ಹಾಡಿನ ಮೂಲಕವಾಗಿ ವ್ಯಕ್ತಪಡಿಸಿದ್ದಾರೆ.
ಸೀಮಾ ಹೈದರ್, ಪ್ರಸ್ತುತ ಗ್ರೇಟರ್ ನೋಯ್ಡಾದ ರಬುಪುರದಲ್ಲಿ ತನ್ನ ಪ್ರೇಮಿ ಸಚಿನ್ ಮೀನಾ ಜೊತೆ ವಾಸಿಸುತ್ತಿದ್ದಾರೆ.ಸೀಮಾ ಎಂಬ ಮುಸ್ಲಿಂ ಮಹಿಳೆ ಹಿಂದೂ ದೇವರನ್ನು ಪೂಜಿಸುತ್ತಾಳೆ.ಸೀಮಾ ತನ್ನ ಮಗನೊಂದಿಗೆ ಹನುಮಾನ್ ಚಾಲೀಸಾವನ್ನು ಪಠಿಸಿದ್ದು ನೆಟ್‌ನಲ್ಲಿ ವೈರಲ್ ಆಗಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
ಸಚಿನ್-ಸೀಮಾ ವಾಸಿಸುವ ರಬೂಪುರದಲ್ಲಿ ಇತ್ತೀಚೆಗೆ ರಾಮ ಭಜನೆ ನಡೆಯಿತು.ರಾಮಕೀರ್ತನೆ ಹಾಗೂ ಹನುಮಾನ್ ಭಕ್ತಿಗೀತೆಗಳನ್ನು ಹಾಡಲಾಯಿತು.ಈ ಸಂದರ್ಭದಲ್ಲಿ ಸೀಮಾ ಅವರು ಸ್ವಾತಿ ಮಿಶ್ರಾ ಹಾಡಿರುವ ‘ರಾಮ್ ಆಯೇಂಗೆ’ ಹಾಡನ್ನು ಹಾಡಿದರು.ತಲೆಯ ಮೇಲೆ ಕುಂಕುಮವನ್ನು ಧರಿಸಿ ರಾಮಭಕ್ತಿ ಗೀತೆಯನ್ನು ಸೊಗಸಾಗಿ ಹಾಡಿದರು.ಅವರ ಮಗ ಕೂಡ ಅವರೊಂದಿಗೆ ಹನುಮಾನ್ ಚಾಲೀಸಾವನ್ನು ಪಠಿಸಿದರು.ಈ ವಿಡಿಯೋವನ್ನು ಅವರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ग्रेटर नोएडा : पाकिस्तान से आई सीमा हैदर के घर हुआ बजरंग पाठ सीमा के बेटे राज ने पूरा बजरंग पाठ गाकर सुनायासीमा हैदर ने भी गाकर सुनाया श्री राम के लिए भजनसीमा आज पहली बार आपने घर#SeemaHaider#Seema#noida#indiapic.twitter.com/3x08XdvRbC
— Avnendra Singh (@avnendra_s)January 18, 2024

ಅನುಮತಿ ದೊರೆತ ಬಳಿಕ ಕುಟುಂಬ ಸಮೇತ ಅಯೋಧ್ಯೆಯ ರಾಮಮಂದಿರಕ್ಕೆ ರಾಮದರ್ಶನಕ್ಕೆ ತೆರಳುವುದಾಗಿ ಸೀಮಾ ಈ ಸಂದರ್ಭದಲ್ಲಿ ತಿಳಿಸಿದರು. ಅವರು ಇಲ್ಲಿ ತುಂಬಾ ಸಂತೋಷವಾಗಿದ್ದಾರೆ. ಭಾರತವು ಮಹಿಳೆಯರನ್ನು ಗೌರವಿಸುವ ದೇಶವಾಗಿದೆ ಎಂದು ಹೇಳಿದರು. ತಾನು ಸಂಪೂರ್ಣವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಮತ್ತು ಶ್ರೀಕೃಷ್ಣ ಮತ್ತು ರಾಮನ ಭಕ್ತೆ ಎಂದು ಅವರು ಹೇಳಿದರು.
ನನಗೆ ಅದ್ರ ಅವಶ್ಯಕತೆ ಇಲ್ಲ, ಎಲ್ಲವನ್ನು ಅನುಭವಿಸಿದ್ದೇನೆ..’ಓ ಮಲ್ಲಿಗೆ’ ಬ್ಯೂಟಿ ಚಾರುಲತಾ ಓಪನ್​ ಟಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + one =
Remember me
