ಲಖನೌ:ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಸೀಮಾ ಹೈದರ್​ ಮೇಲೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಈಕೆ ನಿಜವಾಗಿಯೂ ಪ್ರೀತಿಯನ್ನು ಅರಸಿ ಬಂದಿದ್ದಾಳಾ? ಅಥವಾ ಪಾಕಿಸ್ತಾನದ ಏಜೆಂಟ್​ ಇರಬಹುದಾ? ಎಂಬ ಸಂಶಯ ವ್ಯಕ್ತವಾಗಿದ್ದು, ಆಕೆಯ ನಡೆ ದಿನದಿಂದ ದಿನಕ್ಕೆ ನಿಗೂಢತೆಯನ್ನು ಹೆಚ್ಚಿಸುತ್ತಿದೆ. ಇದೀಗ ಸೀಮಾ ಬಗ್ಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಪ್ರತಿಕ್ರಿಯೆ ನೀಡಿದ್ದಾರೆ.
ಸೀಮಾ ಮತ್ತು ಸಚಿನ್​ ಲವ್​ ಸ್ಟೋರಿ ರಿವರ್ಸ್​ ಲವ್​ ಜಿಹಾದ್​ ಇರಬಹುದಾ? ಆಕೆಯ ವಿರುದ್ಧ ತನಿಖೆ ನಡೆಯುತ್ತಿದ್ದು, ಪಾಕಿಸ್ತಾನಕ್ಕೆ ವಾಪಸ್​​ ಕಳುಹಿಸುತ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಸಿಎಂ ಯೋಗಿ ಉತ್ತರ ನೀಡುವ ಮೂಲಕ ಊಹಾಪೋಹಗಳಿಗೆ ತೆರೆಎಳೆಯುವ ಪ್ರಯತ್ನ ಮಾಡಿದರು. ಸದ್ಯ ತನಿಖೆ ನಡೆಯುತ್ತಿದೆ. ತನಿಖಾ ತಂಡಗಳು ಸಂಪೂರ್ಣ ವರದಿಯನ್ನು ನೀಡಿದ ಬಳಿಕ ಏನು ಮಾಡಬೇಕು ಮತ್ತು ಮುಂದಿನ ಕ್ರಮ ಏನು ಎಂಬುದರ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ವರದಕ್ಷಿಣೆ ಕೊಡಲಿಲ್ಲ ಎಂದು ಗರ್ಭಿಣಿ ಪತ್ನಿಗೆ ಥಳಿತ; ರಸ್ತೆ ಮಧ್ಯದಲ್ಲೇ ತ್ರಿವಳಿ ತಲಾಖ್ ಕೊಟ್ಟ ಪತಿರಾಯ!
ಸೀಮಾ, ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವ ಸಂಬಂಧ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಕಳೆದ ಮೇ ತಿಂಗಳಲ್ಲಿ ಸೀಮಾ ತನ್ನ ನಾಲ್ವರು ಮಕ್ಕಳೊಂದಿಗೆ ಕಠ್ಮಂಡುವಿನಿಂದ ದೆಹಲಿಗೆ ಬಸ್‌ನಲ್ಲಿ ಪ್ರಯಾಣಿಸಿ, ಅಲ್ಲಿಂದ ಗ್ರೇಟರ್​ ನೋಯ್ಡಾಗೆ ಬಂದು ತನ್ನ ಪ್ರಿಯಕರನ್ನು ಸೇರಿದ್ದಾಳೆ. ಸೀಮಾ ಮತ್ತು ಸಚಿನ್ ಮೀನಾ ಅವರು 2019 ರಲ್ಲಿ PUBG ಆಡುವಾಗ ಮೊದಲು ಪರಿಚಯವಾಯಿತು ಎಂದು ಹೇಳಿಕೊಂಡಿದ್ದಾರೆ. ಸೀಮಾ ಭಾರತಕ್ಕೆ ಬಂದ ಬಳಿಕ ಪಶುಪತಿನಾಥ ದೇವಸ್ಥಾನದಲ್ಲಿ ಇಬ್ಬರು ವಿವಾಹವಾದೆವು ಎಂದು ಸಚಿನ್​ ಹೇಳಿಕೆ ನೀಡಿದ್ದಾನೆ. ಮೀನಾ ಕುಟುಂಬವು ಸೀಮಾಳ ಜತೆ ಆಕೆಯ ನಾಲ್ವರು ಮಕ್ಕಳನ್ನು ಒಪ್ಪಿಕೊಂಡು ತಮ್ಮ ಜತೆ ಇರಿಸಿಕೊಂಡಿದ್ದಾರೆ.
ಜುಲೈ 4 ರಂದು ಗ್ರೇಟರ್ ನೋಯ್ಡಾ ಪೊಲೀಸರು ಸೀಮಾ, ಸಚಿನ್ ಮತ್ತು ಸಚಿನ್ ಅವರ ತಂದೆಯನ್ನು ಬಂಧಿಸಿದ್ದರು. ಆದರೆ, ಜುಲೈ 7ರಂದು ಮೂವರಿಗೆ ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕೆಲವು ವರದಿಗಳ ಪ್ರಕಾರ, ಸೀಮಾ ಹೈದರ್​ ಚಿಕ್ಕಪ್ಪ ಪಾಕಿಸ್ತಾನದ ಸೇನೆಯಲ್ಲಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಆಕೆಯ ಸಹೋದರ ಆರ್ಮಿ ಸೇರಲು ತಯಾರಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಜು.18 ರಂದು ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ಪಡೆ ಸೀಮಾಳನ್ನು ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಜು. 17ರಂದು 8 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಸದ್ಯ ತನಿಖೆ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಸೀಮಾ ಇಲ್ಲಿಯೇ ಇರುತ್ತಾಳಾ? ಅಥವಾ ಪಾಕಿಸ್ತಾನಕ್ಕೆ ಕಳುಹಿಸುತ್ತಾರಾ? ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.(ಏಜೆನ್ಸೀಸ್​)
ಪ್ರೇಯಸಿನಾ ಅಥವಾ ಪಾಕ್​ ಏಜೆಂಟಾ? ವಿಚಾರಣೆ ವೇಳೆ ಅನುಮಾನ ಮೂಡಿಸಿದ ಸೀಮಾ ನಡೆ

ರೂಮ್​ ನಂ. 204ರ ರಹಸ್ಯ ಬಯಲು: ಪಾಕ್​ ಮಹಿಳೆ ಸೀಮಾ ಜತೆ ಸಚಿನ್​ ರೀಲ್ಸ್​, ಮಹತ್ವದ ಮಾಹಿತಿ ಬೆಳಕಿಗೆ

ಅಂಜು ಗಂಡನ ಬಳಿ ಸೀಮಾ ಬಗ್ಗೆ ಕೇಳಿದ ವರದಿಗಾರ್ತಿ: ಅರವಿಂದ್​ ಕೊಟ್ಟ ಪ್ರತಿಕ್ರಿಯೆ ವೈರಲ್​

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:17 − five =
Remember me
