ಮುಂಬೈ:ನವ ಸೇವಾ ಬಂದರಿನಲ್ಲಿ ಶನಿವಾರ 1,000 ಕೋಟಿ ರೂ. ಮೊತ್ತದ ಭಾರಿ ಪ್ರಮಾಣದ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ.ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮಾದಕ ದ್ರವ್ಯ 191 ಕಿ.ಗ್ರಾಂ ನಷ್ಟಿತ್ತು. ಸುಳಿವಿನ ಆಧಾರದ ಮೇಲೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆ ಮಾದಕ ದ್ರವ್ಯವನ್ನು ಅಫ್ಘಾನಿಸ್ತಾನದಿಂದ ಇರಾನ್ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು.
ಇದನ್ನೂ ಓದಿ:ಮದ್ಯವ್ಯಸನಿ ಗಂಡನನ್ನು ಬಿಟ್ಟು ಬೇರೊಬ್ಬನನ್ನು ‘ಕೂಡಿ’ದಾಕೆಗೆ ಅಂತಿಮವಾಗಿ ಸಿಕ್ಕಿದ್ದು ಪ್ರೀತಿಯಲ್ಲ…
ಮಾದಕ ವಸ್ತುವನ್ನು ಬಿದಿರಿನಂತೆ ಕಾಣುವಂತೆ ಮಾಡಲು ಪ್ಲಾಸ್ಟಿಕ್ ಕೊಳವೆಗಳಲ್ಲಿ ಮುಚ್ಚಿ ಬಣ್ಣ ಬಳೆಯಲಾಗಿತ್ತು. ಸಾಗಿಸಲು ಸುಲಭವಾಗುವಂತೆ ಮಾಡಲು ಮಾದಕ ವಸ್ತುವನ್ನು ಆಯುರ್ವೇದ ಔಷಧವೆಂಬಂತೆ ಬಿಂಬಿಸಲಾಗಿತ್ತು.ಸುಂಕದ ಅಧಿಕಾರಿಯೊಬ್ಬರು ಸುಳಿವು ನೀಡಿದ ನಂತರ ಕಸ್ಟಮ್ಸ್ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಕ್ರಮ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ವಿಶೇಷ ಗುಪ್ತಚರ ಮತ್ತು ತನಿಖಾ ಶಾಖೆಯ (ಎಸ್‌ಐಐಬಿ) ಅಧಿಕಾರಿಗಳು ಸಹಾಯಕ್ಕಾಗಿ ಡಿಆರ್‌ಐ ಅನ್ನು ಸಂಪರ್ಕಿಸಿದ್ದರು.
ಇದನ್ನೂ ಓದಿ:ಹಿಂದೂ ರಾಷ್ಟ್ರಕ್ಕೆ ನಿಮ್ಮ ಕೊಡುಗೆ ಅಮೂಲ್ಯ ಎಂದು ಯೋಗಿಗೆ ಪತ್ರ ಬರೆದರಾ ಮೋದಿ ? ಸತ್ಯ ಏನು?
ಅವರು ಕಂಟೇನರ್ ಅನ್ನು ಪರಿಶೀಲಿಸಿದಾಗ, ಸರ್ವಿಮ್ ರಫ್ತು ಕಂಪನಿಯೊಂದರಿಂದ ಆಮದು ಮಾಡಿಕೊಂಡಿದ್ದ ಕಿತ್ತಳೆ ಬಣ್ಣದ ಗೋಣಿ ಚೀಲಗಳಿದ್ದಿರುವುದು ಗಮನಕ್ಕೆ ಬಂದಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗೋಣಿ ಚೀಲಗಳೊಳಗಿನ ಸರಕುಗಳನ್ನು ಗ್ಲೈಸಿರಿಜಾ ಗ್ಲಾಬ್ರಾ ಎಕ್ಸ್​ಟ್ರಾಕ್ಟ್ ಅಥವಾ ಲೈಕೋರೈಸ್ ರೂಟ್ ಎಕ್ಸ್​ಟ್ರಾಕ್ಟ್ ಎಂದು ಬರೆಯಲಾಗಿತ್ತು.ಅವುಗಳನ್ನು ಮರದ ತೊಗಟೆಯಿಂದ ಮುಚ್ಚಲಾಗಿತ್ತು. ಅಧಿಕಾರಿಗಳು ಹೊರಗಿನ ತೊಗಟೆಯನ್ನು ತೆಗೆದಾಗ, ಅದು ಹಸಿರು ಪೈಪ್ ಆಗಿದ್ದು, ಅದರೊಳಗೆ ಪುಡಿಯನ್ನು ತುಂಬಿಸಲಾಗಿತ್ತು. ಪುಡಿ ಹೆರಾಯಿನ್ ಎಂದು ಖಚಿತಪಡಿಸಿಕೊಳ್ಳಲು ಎನ್‌ಡಿಪಿಎಸ್ ಪರೀಕ್ಷೆಯನ್ನು ಸಹ ನಡೆಸಲಾಯಿತು.
ಇದನ್ನೂ ಓದಿ:LIVE: ಚೆನ್ನೈ-ಅಂಡಮಾನ್​ ಸಬ್​ಮರೈನ್ ಆಪ್ಟಿಕಲ್ ಫೈಬರ್ ಕನೆಕ್ಟಿವಿಟಿಗೆ ಚಾಲನೆ ನೀಡಿದ ಪ್ರಧಾನಿ
ನಿಷೇಧಿತ ವಸ್ತುವನ್ನು ದೇಶಕ್ಕೆ ಸಾಗಿಸಲಾಗುತ್ತಿದೆ ಎಂದು ದೃಢಪಟ್ಟ ನಂತರ, ಎನ್‌ಡಿಪಿಎಸ್ ಅದನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಬ್ಬರು ಕಸ್ಟಮ್ಸ್ ಹೌಸ್ ಏಜೆಂಟರು-ಎಂ ಬಿ ಶಿಪ್ಪಿಂಗ್ ಆ್ಯಂಡ್ ಲಾಜಿಸ್ಟಿಕ್ಸ್ ಸಾಲ್ಯೂಷನ್​​​ನ ಮೀನಾನಾಥ್ ಬೊಡಕೆ ಮತ್ತು ಕೊಂಡಿಭಾವು ಪಾಂಡುರಂಗ್ ಗುಂಜನ್ ಅವರನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅವರನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ.
ಬಿಜೆಪಿ ಮುಖಂಡರ ಮೇಲೆ ಮುಂದುವರೆದಿದೆ ಉಗ್ರರ ದಾಳಿ: ನಾಲ್ಕನೇ ಬಲಿ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + ten =
Remember me
