ನವದೆಹಲಿ:ದೆಹಲಿಯಲ್ಲಿ ಸೋಮವಾರದಿಂದ ಲಾಕ್​ಡೌನ್​ ಅನ್ನು ಸ್ವಲ್ಪ ಸಡಿಲಗೊಳಿಸಲು ನಿರ್ಧರಿಸಿರುವುದಾಗಿ ಸಿಎಂ ಅರವಿಂದ ಕೇಜ್ರೀವಾಲ್​ ತಿಳಿಸಿದ್ದಾರೆ.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮನೆಗೆಲಸದವರು, ಕೊಳಾಯಿ ಕೆಲಸದವರು, ಟೆಕ್ನೀಷಿಯನ್​ಗಳು ಸೇರಿ ಸ್ವ ಉದ್ಯೋಗ ಮಾಡುತ್ತಿರುವವರೆಲ್ಲರೂ ತಮ್ಮ ಕೆಲಸಗಳಿಗೆ ಹೋಗಬಹುದಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ದೇಶಕ್ಕೆ ರಿಲೀಫ್​ ಸಿಕ್ಕರೂ ಮುಂಬೈ, ಪುಣೆ ನಗರಗಳಿಗಿಲ್ಲ ರಿಲೀಫ್​
ದೆಹಲಿಯ ಎಲ್ಲ ಬಡಾವಣೆಗಳಲ್ಲಿರುವ ಅಗತ್ಯ ಮತ್ತು ಅನಗತ್ಯ ವಸ್ತುಗಳನ್ನು ಮಾರಾಟ ಮಾಡುವ ಎಲ್ಲ ಅಂಗಡಿಗಳನ್ನು ಎಂದಿನಂತೆ ತೆರಯಬಹುದಾಗಿದೆ. ಆದರೆ ಇ-ಕಾಮರ್ಸ್​ ಕಂಪನಿಗಳು ಕೇವಲ ಅಗತ್ಯ ವಸ್ತುಗಳನ್ನು ಮಾತ್ರ ಡೆಲಿವರಿ ಕೊಡಬಹುದಾಗಿದೆ ಎಂದು ತಿಳಿಸಿದರು.
ದೆಹಲಿಯ ಎಲ್ಲ ಖಾಸಗಿ ಆಸ್ಪತ್ರೆಗಳು ಶೇ.33 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದಾಗಿದೆ ಎಂದು ಹೇಳಿದರು.ಶಾಲೆ-ಕಾಲೇಜುಗಳು, ಕೋಚಿಂಗ್​ ಸಂಸ್ಥೆಗಳು, ಹೋಟೆಲ್​ಗಳು ಮತ್ತು ರೆಸ್ಟೋರೆಂಟ್​ಗಳು ಸಂಪೂರ್ಣವಾಗಿ ಮುಚ್ಚಿರಲಿವೆ. ಕ್ಷೌರದ ಅಂಗಡಿಗಳು, ಸ್ಪಾಗಳ ಬಾಗಿಲನ್ನು ಇನ್ನೆರಡು ವಾರ ತೆಗೆಯುವಂತಿಲ್ಲ ಎಂದು ತಿಳಿಸಿದ್ದಾರೆ.
VIDEO| ಲಾಕ್​ಡೌನ್​ ಉಲ್ಲಂಘಿಸಿದವನಿಗೆ ಡ್ಯಾನ್ಸ್​ ಮಾಡಲು ಹೇಳಿ ಎಡವಟ್ಟು ಮಾಡ್ಕೊಂಡ ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
