ನವದೆಹಲಿ:ಎನ್​ಡಿಎ ಆಡಳಿತದ 3ನೇ ಅವಧಿಯಲ್ಲಿ ಎಂಎಸ್​ಎಂಇಗಳ (ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು) ಉತ್ಥಾನಕ್ಕಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭರಪೂರ ಉತ್ತೇಜನ ನೀಡಿದ್ದಾರೆ. ಉದ್ಯೋಗ ಸೃಜನೆ, ಪೂರಕ ಉದ್ಯಮಗಳ ಮೂಲಕ ಸ್ವ ಉದ್ಯೋಗ ಸ್ಥಾಪನೆಗೆ ಅವಕಾಶವಾಗಿ ರಾಷ್ಟ್ರದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶ, ಅವರ ಈ ಕ್ರಮದಲ್ಲಿ ಸ್ಪಷ್ಟಗೋಚರ.
ಎಂಎಸ್​ಎಂಇಗಳ ವಹಿ ವಾಟನ್ನು ಜಾಗತಿಕವಾಗಿ ವಿಸ್ತರಿಸುವ ಅವಕಾಶಕ್ಕಾಗಿ ಸಾಲ ಯೋಜನೆಗಳು, ನಿಯಂತ್ರಣ ಮಾರ್ಪಾಡುಗಳು ಮತ್ತು ತಂತ್ರಜ್ಞಾನದ ಬೆಂಬಲ ಒದಗಿಸುವುದಾಗಿ ಅವರು ಮಂಗಳವಾರ ಮಂಡಿಸಿದ 2024-25ನೇ ಸಾಲಿನ ಬಜೆಟ್​ನಲ್ಲಿ ಘೋಷಿಸಿದರು.ಎಂಎಸ್​ಎಂಇಗಳು ವಿಶೇಷ ಉಲ್ಲೇಖ ಖಾತೆ (ಎಸ್​ಎಂಎ) ಹಂತದಲ್ಲಿದ್ದರೆ, ಸರ್ಕಾರ ಬೆಂಬಲಿತ ನಿಧಿಯ ಮೂಲಕ ಸಾಲ ಖಾತ್ರಿ ಯೋಜನೆಯನ್ನು ಒದಗಿಸಿ, ಅಂಥ ಸಂಸ್ಥೆಗಳಿಗೆ ಅಗತ್ಯ ಸಾಲ ಸೌಲಭ್ಯ ವಿಸ್ತರಿಸುವುದು ಇದರ ಉದ್ದೇಶ ಎಂದು ವಿವರಿಸಿದರು.
ಯಂತ್ರೋಪಕರಣಗಳ ಖರೀದಿಗಾಗಿ ಅಡಮಾನಮುಕ್ತ ಮತ್ತು ತೃತೀಯ ವ್ಯಕ್ತಿಯ ಜಾಮೀನು ಇಲ್ಲದೆ ಕಾಲಾವಧಿ ಸಾಲ ಪಡೆಯಲು ಎಂಎಸ್​ಎಂಇ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಸಾಲ ಖಾತ್ರಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಸಾಲ ಖಾತ್ರಿ ಯೋಜನೆಯು ಉದ್ಯಮಿ ಪಡೆದಿರುವ ಸಾಲದ ಮೊತ್ತ ಅದೆಷ್ಟೇ ಹೆಚ್ಚಾಗಿದ್ದರೂ, 100 ಕೋಟಿ ರೂ.ವರೆಗೆ ಸಾಲದ ಖಾತ್ರಿ ಒದಗಿಸಲಿದೆ.
5 ಸಾವಿರ ರೂ. ಇಂಟರ್ನ್​ಶಿಪ್ ಭತ್ಯೆ:ಮುಂದಿನ 5 ವರ್ಷಗಳಲ್ಲಿ 1 ಕೋಟಿಗೂ ಹೆಚ್ಚಿನ ಯುವಕರಿಗೆ ಅತ್ಯುನ್ನತವಾದ 500 ಕಂಪನಿಗಳಲ್ಲಿ ಇಂಟರ್ನ್​ಶಿಪ್ ಕೈಗೊಳ್ಳಲು ಅನುವು ಮಾಡಿಕೊಡಲು ಸಮಗ್ರ ಯೋಜನೆಯನ್ನು ಆರಂಭಿಸಲಾಗುವುದೆಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು.

ಪ್ರಧಾನಮಂತ್ರಿಯವರ ಪ್ಯಾಕೇಜ್​ನಲ್ಲಿ ಅನುಷ್ಠಾನಗೊಳ್ಳಲಿರುವ 5ನೇ ಯೋಜನೆ ಇದು. ವಾಸ್ತವಿಕ ವಾತಾವರಣದಲ್ಲಿ 12 ತಿಂಗಳು ಇಂಟರ್ನ್​ಶಿಪ್ ಕೈಗೊಂಡು, ಉದ್ಯಮ ಮತ್ತು ಉದ್ಯೋಗದ ಅಗತ್ಯಗಳನ್ನು ಯುವಕರು ಅರಿತುಕೊಳ್ಳುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಒಂದು ಬಾರಿಯ -ಠಿ;6,000 ಧನಸಹಾಯದ ಜತೆಗೆ ಇಂಟರ್ನಿಗಳಿಗೆ ಮಾಸಿಕ -ಠಿ;5,000 ಇಂಟರ್ನ್​ಶಿಪ್ ಭತ್ಯೆ ನೀಡಲಾಗುತ್ತದೆ. ಸಿಎಸ್​ಆರ್ ಯೋಜನೆಯಡಿ ಕಂಪನಿಗಳು ತರಬೇತಿ ವೆಚ್ಚ ಮತ್ತು ಶೇ.10 ಇಂಟರ್ನ್​ಶಿಪ್ ವೆಚ್ಚವನ್ನು ನಿರ್ವಹಿಸಲಿವೆ.
20 ಲಕ್ಷ ರೂ. ಮುದ್ರಾ ಸಾಲ:ಈ ಹಿಂದೆ ಸಾಲ ಪಡೆದು, ಸಕಾಲದಲ್ಲಿ ಮರಳಿಸಿರುವ ಉದ್ಯಮಿಗಳಿಗೆ ಕೊಡುವ ಮುದ್ರಾ ಸಾಲದ ಮೊತ್ತವನ್ನು 20 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದುವರೆಗೂ ಈ ಸಾಲದ ಮಿತಿ 10 ಲಕ್ಷ ರೂ. ಆಗಿತ್ತು.
ಏಕೀಕೃತ ತಾಂತ್ರಿಕ ಪ್ಲಾಟ್​ಫಾಮ್ರ್:ಋಣಬಾಧ್ಯತೆ ಮತ್ತು ದಿವಾಳಿ ತನ ಕಾಯ್ದೆ (ಐಬಿಸಿ) ಜಾರಿಯಲ್ಲಿ ಸ್ಥಿರತೆ, ಪಾರದರ್ಶಕತೆ, ಸಕಾಲಿಕ ಪರಿಷ್ಕರಣೆ ಮತ್ತು ಸಂಬಂಧಪಟ್ಟವರೆಲ್ಲರಿಗೂ ಸ್ಪಷ್ಟವಾಗಿ ತಿಳಿಯುವಂತೆ ಮಾಡುವ ಉದ್ದೇಶದಿಂದ ಏಕೀಕೃತ ತಾಂತ್ರಿಕ ಪ್ಲಾಟ್​ಫಾಮ್ರ್ ರೂಪಿಸಲಾಗುತ್ತದೆ.
ಹೊಸ ಪೋರ್ಟಲ್:ಕೈಗಾರಿಕೆ ಮತ್ತು ವಹಿವಾಟಿನ ಸುಲಭ ಅನುಸರಣೆಯ ಅವಕಾಶಕ್ಕಾಗಿ ಶ್ರಮ ಸುವಿಧಾ ಮತ್ತು ಸಮಾಧಾನ ಪೋರ್ಟಲ್​ಗಳ ಪುನರುತ್ಥಾನ.
ಖನಿಜ ಮಿಷನ್:ವಿದೇಶಗಳಲ್ಲಿರುವ ನಿರ್ಣಾಯಕ ಖನಿಜಗಳ ಸ್ಥಿರಾಸ್ತಿಗಳ ಖರೀದಿ ಹಾಗೂ ದೇಶಿಯ ಉತ್ಪಾದನೆಗೆ ಖನಿಜಗಳ ಮಿಷನ್ ಜಾರಿ.
ವಿಕಿರಣಮುಕ್ತಕ್ಕೆ ಕ್ರಮ : ಎಂಎಸ್​ಎಂಇ ವಲಯದಲ್ಲಿ 50 ಬಹುಉತ್ಪನ್ನ ಆಹಾರ ವಿಕಿರಣಮುಕ್ತ ಪ್ರಯೋಗಾಲಯಗಳ ಸ್ಥಾಪನೆಗೆ ಸರ್ಕಾರ ಅಗತ್ಯ ಆರ್ಥಿಕ ನೆರವು ಒದಗಿಸಲಿದೆ. ಇದಕ್ಕಾಗಿ, ಎನ್​ಎಬಿಎಲ್ ಮಾನ್ಯತೆಯ 100 ಆಹಾರ ಗುಣಮಟ್ಟ ಮತ್ತು ಸುರಕ್ಷತೆ ಪರಿಶೀಲನಾ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತಿದೆ.
ಈ ವರ್ಷ 24 ಸಿಡ್ಬಿ ಶಾಖೆಗಳು:ಮುಂದಿನ ಮೂರು ವರ್ಷದೊಳಗಾಗಿ, ಎಲ್ಲ ಪ್ರಮುಖ ಎಂಎಸ್​ಎಂಇ ಕ್ಲಸ್ಟರ್​ಗಳಲ್ಲಿ ಎಸ್​ಐಡಿಬಿಐ (ಸಿಡ್ಬಿ) ಶಾಖೆಗಳ ಸಂಖ್ಯೆ ಹೆಚ್ಚಳವಾಗಲಿದೆ. ಎಂಎಸ್​ಎಂಇಗಳಿಗೆ ನೇರವಾಗಿ ಸಾಲ ಸೌಲಭ್ಯ ದೊರೆಯುವಂತೆ ಮಾಡುವುದು ಈ ಕ್ರಮದ ಉದ್ದೇಶವಾಗಿದೆ. ಹಾಲಿ ವಿತ್ತೀಯ ವರ್ಷದಲ್ಲಿ ಸಿಡ್ಬಿಯ 24 ಶಾಖೆಗಳನ್ನು ಆರಂಭಿಸಲಾಗುತ್ತಿದೆ. 242 ಎಂಎಸ್​ಎಂಇ ಕ್ಲಸ್ಟರ್​ಗಳ ಪೈಕಿ 168 ಕ್ಲಸ್ಟರ್​ಗಳಿಗೆ ಇದರಿಂದ ಅನುಕೂಲವಾಗಲಿದೆ.

ಹೆಚ್ಚುವರಿ ನ್ಯಾಯಮಂಡಳಿ ಸ್ಥಾಪನೆ:ಕಂಪನಿ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು ಹೆಚ್ಚುವರಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ.  ಸೇವಾ ವಲಯದಲ್ಲಿ ಉತ್ಪಾದನೆ ಹೆಚ್ಚಿಸಲು, ಉದ್ಯಮಶೀಲತೆ ಅವಕಾಶಗಳನ್ನು ಕಲ್ಪಿಸಲು ಖಾಸಗಿ ವಲಯದಿಂದ ನಾವೀನ್ಯತೆ ಸೃಷ್ಟಿಸಲು ಡಿಪಿಐ (ಡಿಜಿಟಲ್ ಸರ್ವೀಸ್ ಇನ್ಪ್ರಾಸ್ಟ್ರಕ್ಚರ್) ಅಪ್ಲಿಕೇಶನ್​ಗಳನ್ನು ಅಭಿವೃದ್ಧಿ ಪಡಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸದ್ದಾರೆ. ಈ ಯೋಜನೆಯನ್ನು ಇ-ಕಾಮರ್ಸ್, ಶಿಕ್ಷಣ, ಆರೋಗ್ಯ, ಕಾನೂನು ಸೇರಿ ಹಲವು ಕ್ಷೇತದಲ್ಲಿ ಜಾರಿಗೆ ತರುವುದದಾಗಿ ತಿಳಿಸಿದ್ದಾರೆ.
ಅಲ್ಲದೆ, ದಿವಾಳಿತನ ಮತ್ತು ದಿವಾಳಿತನ ಕೋಡ್ (ಐಬಿಸಿ) ಅಡಿಯಲ್ಲಿ ಫಲಿತಾಂಶಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಇಂಟಿಗ್ರೇಟೆಡ್ ಟೆಕ್ನಾಲಜಿ ಪ್ಲಾಟ್​ಫಾಮ್ರ್ ಸ್ಥಾಪಿಸಲಾಗುವುದು. ಸಾಲ ವಸೂಲಾತಿ ನ್ಯಾಯಮಂಡಳಿಗಳನ್ನು ಸುಧಾರಿಸಲು ಮತ್ತು ಬಲಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಐಬಿಸಿ) 1,000ಕ್ಕೂ ಹೆಚ್ಚು ಕಂಪನಿಗಳ ಸಮಸ್ಯೆಯನ್ನು ಪರಿಹರಿಸಿದ್ದು, ಇದರ ಪರಿಣಾಮವಾಗಿ ಸಾಲಗಾರರಿಗೆ 3.3 ಲಕ್ಷ ಕೋಟಿಗೂ ಹೆಚ್ಚು ಹಣಕಾಸು ವಹಿವಾಟಿನಲ್ಲಿ ಚೇತರಿಕೆಯಾಗಿದೆ. ಜತೆಗೆ, 10 ಲಕ್ಷ ಕೋಟಿಗೂ ಅಧಿಕ ಮೊತ್ತದ 28,000 ಪ್ರಕರಣಗಳನ್ನು ದಾಖಲಿಸುವ ಮುನ್ನವೇ ವಿಲೇವಾರಿ ಮಾಡಲಾಗಿದೆ.

ಮೊಬೈಲ್ ಫೋನ್, ಚಾರ್ಜರ್​ಗಳ ಬೆಲೆ ಅಗ್ಗ:ಮೊಬೈಲ್ ಫೋನ್ ಮತ್ತು ಚಾರ್ಜರ್​ಗಳ ಮೇಲಿನ ಮೂಲ ಕಸ್ಟಮ್್ಸ ಸುಂಕ ಶೇಕಡ 15ರಷ್ಟು ಇಳಿಕೆಯಾಗಲಿದೆ. ಸರ್ಕಾರದ ಈ ಕ್ರಮದಿಂದಾಗಿ ಮೊಬೈಲ್ ಫೋನ್ ಮತ್ತು ಮೊಬೈಲ್ ಚಾರ್ಜರ್​ಗಳ ಬೆಲೆ ಕಡಿಮೆಯಾಗಲಿದೆ. ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಟೆಲಿಕಾಂ ಉಪಕರಣಗಳ ಮೇಲಿನ ತೆರಿಗೆ ಇಳಿಕೆ ಮಾಡಲಾಗಿದೆ. ಪ್ರಿಂಟೆಡ್ ಸರ್ಕ್ಯುಟ್ ಬೋರ್ಡ್(ಪಿಸಿಡಿ) ಹಾಗೂ ಪಿಸಿಬಿಎ ಮೇಲೆ ಶೇ.10ರಿಂದ 15ರಷ್ಟು ಬೆಲೆ ಕಡಿಮೆ ಮಾಡಲು ಬಜೆಟ್​ನಲ್ಲಿ ತೀರ್ವನಿಸಲಾಗಿದೆ. ಮೊಬೈಲ್ ಫೋನ್, ಚಾರ್ಜರ್ ಬೆಲೆ ಇಳಿಕೆ ಕ್ರಮದಿಂದ ಮುಂದಿನ 6 ವರ್ಷಗಳಲ್ಲಿ ಮೊಬೈಲ್ ಉತ್ಪಾದನೆ 3 ಪಟ್ಟು ಅಧಿಕವಾಗಲಿದೆ. ಭಾರತೀಯ ಮೊಬೈಲ್ ಫೋನ್ ಉದ್ಯಮವು ಪ್ರಬುದ್ಧವಾಗಿದೆ. ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್ ಫೋನ್ ಮೇಲಿನ ತೆರಿಗೆ, ಮೊಬೈಲ್​ನ ಉಪಕರಣಗಳಾದ ಪಿಸಿಬಿಎ ಮತ್ತು ಬಿಸಿಡಿ ಅನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಸಿದ್ದರಾಮಯ್ಯ ಅವರ ಕಾಲ ಗುಣದಲ್ಲಿ ಮಳೆ ಆಗಲ್ಲ ಎನ್ನುವವರಿಗೆ ಖಡಕ್ ಟಾಂಗ್ ಕೊಟ್ಟ ಸಿಎಂ..!

ವೋಟ್‌ ಬ್ಯಾಂಕ್‌ ಬಜೆಟ್‌ ಅಲ್ಲ, ವಿಕಸಿತ ಭಾರತದ ಬಜೆಟ್: ಸಂಸದ ಡಾ.ಕೆ.ಸುಧಾಕರ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
