ಮುಜಾಫರ್​​ನಗರ:ಆಶ್ರಮದಲ್ಲಿ ವಾಸವಾಗಿದ್ದ 10 ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉತ್ತರ ಪ್ರದೇಶದ ಮುಜಾಫರ್​​ನಗರದ ಒಬ್ಬಾತನನ್ನು ಗುರುವಾರ ಬಂಧಿಸಲಾಗಿದೆ.ಈ ಕುರಿತು ಕಳೆದೆರಡು ದಿನಗಳ ಹಿಂದೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾದ ವರದಿಯಾಗಿತ್ತು. ಆರೋಪಿ ಸ್ವಯಂಘೋಷಿತ ದೇವಮಾನವ ಹುಡುಗರನ್ನು “ಕರೊನಾವೈರಸ್ ಔಷಧಿ ಎಂದು ಹೇಳಿ ಮದ್ಯ ನೀಡಿ ಅದನ್ನು ಕುಡಿಯಲು ಒತ್ತಾಯಿಸುತ್ತಿದ್ದನು.ಮಕ್ಕಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಮೊದಲು ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುವಂತೆ ಆರೋಪಿ ಒತ್ತಾಯಿಸುತ್ತಿದ್ದ. ಆತ ಹೇಳಿದಂತೆ ಕೇಳದಿದ್ದರೆ ಹುಡುಗರನ್ನು ಥಳಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಕ್ರಾಂತಿಕಾರಿ ಬರಹಗಾರ ವರವರ ರಾವ್ ಆರೋಗ್ಯ ಸ್ಥಿತಿ ಏರು ಪೇರು.. ನಿಷ್ಕಾಳಜಿ ವಹಿಸಿದ ಕಾರಾಗೃಹ ಅಧಿಕಾರಿಗಳ ವಿರುದ್ಧ ಕುಟುಂಬದವರ ಆರೋಪ
ಸುಳಿವು ಸಿಕ್ಕ ನಂತರ 10 ಹುಡುಗರನ್ನು ಗೋಡಿಯಾ ಆಶ್ರಮದಿಂದ ಮಕ್ಕಳ ರಕ್ಷಣಾ ಅಧಿಕಾರಿಗಳು ರಕ್ಷಿಸಿದ್ದಾರೆ. ಅಧಿಕಾರಿಗಳಿಗೆ ಮಾಹಿತಿ ನೀಡಿದ ವ್ಯಕ್ತಿ ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಆತನನ್ನು ಆಶ್ರಮದಿಂದ ಹೊರಗೆ ಹಾಕಲಾಗಿದೆ ಎಂದು ತಿಳಿಸಿದ್ದಾನೆ.ಶಿಕ್ಷಣ ನೀಡುವುದಾಗಿ ಹೇಳಿ ತ್ರಿಪುರಾ ಮತ್ತು ಮಿಜೋರಾಂನಿಂದ ಹುಡುಗರನ್ನು ಆಶ್ರಮಕ್ಕೆ ಕರೆತರಲಾಗಿತ್ತು. ರಕ್ಷಿಸಲಾದ ಮಕ್ಕಳ ವೈದ್ಯಕೀಯ ಪರೀಕ್ಷೆಯಲ್ಲಿ ಅವರ ಪೈಕಿ ನಾಲ್ವರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ದೃಢಪಟ್ಟಿದೆ.
ಇದನ್ನೂ ಓದಿ:ಐಶ್ವರ್ಯ ರೈ ಬಚ್ಚನ್​ ಮತ್ತು ಪುತ್ರಿ ಆರಾಧ್ಯಗೂ ಕರೊನಾ ಸೋಂಕು
ಆಶ್ರಮದಿಂದ ರಕ್ಷಿಸಲ್ಪಟ್ಟ 10 ವರ್ಷದ ಬಾಲಕನು ಮಕ್ಕಳ ಕಲ್ಯಾಣ ಸಮಿತಿಗೆ ಈ ಕುರಿತು ತಿಳಿಸಿದ್ದು, ಮಹಾರಾಜ್ ನಮ್ಮನ್ನು ಕರೋನವೈರಸ್ ಔಷಧಿ ಕುಡಿಯುವಂತೆ ಮಾಡುತ್ತಾನೆ. ನಂತರ ಅವನು ಬೆತ್ತಲೆಯಾಗಿ ಮಲಗಿ ಕೊಳಕು ಚಲನಚಿತ್ರಗಳನ್ನು ತೋರಿಸುತ್ತಾನೆ ಮತ್ತು ನಮಗೆ ಅಶ್ಲೀಲ ಚಟುವಟಕೆಗಳನ್ನು ನಡೆಸುವಂತೆ ಒತ್ತಾಯಿಸುತ್ತಾನೆ ಎಂದು ತಿಳಿಸಿದ್ದಾನೆ.13 ವರ್ಷದ ಬಾಲಕನಿಗೆ ಆ ಆರೋಪಿ ಮಸಾಜ್ ಮಾಡಲು, ಆಲ್ಕೋಹಾಲ್, ಬೀಡಿಗಳನ್ನು ತರಲು ಹೇಳುತ್ತಾನೆ. ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.ತನ್ನೊಂದಿಗೆ ಆತ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸುತ್ತಾನೆ ಎಂದು ಬಾಲಕನೋರ್ವ ಹೇಳಿಕೊಂಡಿದ್ದಾನೆ. ಆಶ್ರಮದ ಬಾಣಸಿಗ ಮತ್ತು ಆಶ್ರಮದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆಕ್ಸ್​ಫರ್ಡ್​ ವಿವಿ ತಜ್ಞರ ಕರೊನಾ ಲಸಿಕೆ ಅಭಿವೃದ್ಧಿಗೆ ಜೀವವನ್ನೇ ಪಣಕ್ಕಿಟ್ಟ ಭಾರತೀಯ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − eight =
Remember me
