ಕೊಚ್ಚಿ:ಮಕ್ಕಳ ಮುಂದೆ ಅರೆಬೆತ್ತಲೆಯಾಗಿ ದೇಹದ ಮೇಲೆ ಡ್ರಾಯಿಂಗ್​ ಮಾಡಿಸಿಕೊಳ್ಳುವ ಮೂಲಕ ವಿವಾದಕ್ಕೀಡಾಗಿದ್ದ ಹೋರಾಟಗಾರ್ತಿ ರೆಹನಾ ಫಾತಿಮಾಗೆ ಕೇರಳ ಹೈಕೋರ್ಟ್​ ಶಾಕ್​ ನೀಡಿದ್ದು, ರೆಹನಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿದೆ.
ಮಕ್ಕಳ ಕಾಳಜಿಗಾಗಿ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ. ದೇಹ ಮತ್ತು ಅದರ ಅಂಗಾಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಅಗತ್ಯವಿದೆ. ಅಂಗಾಗಳನ್ನು ಕೇವಲ ಲೈಂಗಿಕ ಸಾಧನವನ್ನಾಗಿ ನೋಡುವ ಬದಲು ಅದನ್ನು ಬೇರೆ ಮಾಧ್ಯಮವಾಗಿ ವೀಕ್ಷಿಸಲು ಮಕ್ಕಳಲ್ಲಿ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ಈ ರೀತಿ ಮಾಡಿದೆ ಎಂದು ರೆಹಾನಾ ಕೋರ್ಟ್​ ಮುಂದೆ ಹೇಳಿಕೆ ನೀಡಿದ್ದರು.
ಇದನ್ನೂ ಓದಿ:ತನ್ನ ಮಕ್ಕಳ ಮುಂದೆ ಅರೆಬೆತ್ತಲೆಯಾದ ರೆಹಾನಾಗೆ ಮತ್ತೊಂದು ಸಂಕಷ್ಟ!
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ಪಿವಿ ಕುನ್ಹಿಕೃಷ್ಣನ್​, ನಿಮ್ಮ ತತ್ವಶಾಸ್ತ್ರದ ಪ್ರಕಾರ ನಿಮ್ಮ ಮಕ್ಕಳಿಗೆ ಕಲಿಸುವ ಸ್ವತಂತ್ರ ನಿಮಗಿದೆ. ಆದರೆ, ಅದು ನಿಮ್ಮ ಮನೆಯ ನಾಲ್ಕು ಗೋಡೆಗಳ ನಡುವೆ ಇರಬೇಕು ಮತ್ತು ಕಾನೂನನ್ನು ಉಲ್ಲಂಘಿಸುವಂತಿರಬಾರದು ಎಂದು ರೆಹನಾಗೆ ಬುದ್ಧಿ ಹೇಳಿದ್ದಾರೆ. ಇದೇ ವೇಳೆ ಮಕ್ಕಳ ಜೀವನದಲ್ಲಿ ತಾಯಿ ಪಾತ್ರದ ಬಗ್ಗೆ ತಿಳಿಸಿದ ಜಡ್ಜ್​ ಮುಂದಿನ ತನಿಖೆಗೆ ಪೊಲೀಸರಿಗೆ ಸಹಕರಿಸುವಂತೆ ಸೂಚನೆ ನೀಡಿದರು.
ಘಟನೆ ಹಿನ್ನೆಲೆ ಏನು?ರೆಹನಾ ಜೂನ್​ 19ರಂದು ತನ್ನ ಯೂಟ್ಯೂಬ್​ ಚಾನಲ್​ನಲ್ಲಿ ಬಾಡಿ ಆರ್ಟ್ಸ್​ ಪಾಲಿಟಿಕ್ಸ್​ (#BodyArtPolitics) ಎಂಬ ಅಡಿಬರಹದೊಂದಿಗೆ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದರು. ವಿಡಿಯೋದಲ್ಲಿ ರೆಹನಾ ತನ್ನ ಮಗ ಹಾಗೂ ಮಗಳ ಕೈಯಿಂದ ಅರೆಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸಿಕೊಳ್ಳುತ್ತಿರುವ ದೃಶ್ಯವಿದೆ. ವಿಡಿಯೋ ಮಾಡಿದ್ದರ ಉದ್ದೇಶದ ಬಗ್ಗೆ ತಿಳಿಸಿದ್ದ ರೆಹನಾ, ಲೈಂಗಿಕತೆ ಮತ್ತು ನಗ್ನತೆ ನಿಷೇಧವಾಗಿರುವ ಸಮಾಜದಲ್ಲಿ ಮಹಿಳೆಯರು ಲೈಂಗಿಕತೆ ಮತ್ತು ಅವರ ದೇಹದ ಬಗ್ಗೆ ಮುಕ್ತವಾಗಿರಬೇಕು ಎಂದು ಪುನರುಚ್ಚರಿಸುವುದಕ್ಕಾಗಿ ಈ ವಿಡಿಯೋವನ್ನು ಮಾಡಿದ್ದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ದೂರು ದಾಖಲಾಗಿತ್ತು. ಅಲ್ಲದೆ, ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಆಯೋಗವು ಸಹ ಮಧ್ಯಪ್ರವೇಶಿಸಿತ್ತು. ಇದರ ನಡುವೆ ರಾಜ್ಯ ಸರ್ಕಾರ ರೆಹಾನೆ ಜಾಮೀನು ನೀಡದಂತೆ ಅರ್ಜಿಯನ್ನು ಸಲ್ಲಿಸಿತ್ತು.
ಇದನ್ನೂ ಓದಿ:ಮನೆ ಖಾಲಿ ಮಾಡಮ್ಮ ರೆಹನಾ! ಮಕ್ಕಳ ಮುಂದೆ ಅರೆಬೆತ್ತಲೆಯಾದವಳಿಗೆ ಸಂಕಷ್ಟದ ಮೇಲೆ ಸಂಕಷ್ಟ!
ಅಂದಹಾಗೆ ರೆಹನಾ ಅವರು ಬಿಎಸ್​ಎನ್​ಎಲ್​ ಮಾಜಿ ಉದ್ಯೋಗಿಯಾಗಿದ್ದಾರೆ. ಅಯ್ಯಪ್ಪ ಭಕ್ತರ ನಂಬಿಕೆಗೆ ನೋವುಂಟು ಮಾಡುವ ಫೇಸ್​ಬುಕ್​ ಪೋಸ್ಟ್​ ಹಾಕಿದ ಆರೋಪದಲ್ಲಿ ಈ ಹಿಂದೆ ಬಂಧಿತರಾಗಿ 18 ದಿನ ಜೈಲುವಾಸ ಅನುಭವಿಸಿದ್ದರು. ಅಲ್ಲದೆ, ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದೆಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಬಳಿಕ 2018ರ ಅಕ್ಟೋಬರ್​ನಲ್ಲಿ ರೆಹನಾ ಸಹ ಶಬರಿಮಲೆಗೆ ಭೇಟಿ ನೀಡುವ ಪ್ರಯತ್ನ ಮಾಡಿ, ಬಂಧಿತರಾಗಿ ಬಿಡುಗಡೆಯಾಗಿದ್ದರು.(ಏಜೆನ್ಸೀಸ್​)
ಅರೆಬೆತ್ತಲೆ ದೇಹದ ಮೇಲೆ ಮಕ್ಕಳು ಡ್ರಾಯಿಂಗ್ ಮಾಡಿದ್ದರಲ್ಲಿ ಅಶ್ಲೀಲತೆ ಏನಿದೆ? ಸರ್ಕಾರಕ್ಕೆ ರೆಹನಾ ತಿರುಗೇಟು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 3 =
Remember me
