ನವದೆಹಲಿ :ಒಲಂಪಿಕ್ಸ್​ಗೆ ಒಂದು ವಾರ ಉಳಿದಿರುವಂತೆ, ಇಂದು ಮೊದಲ ಕಂತಿನ ಭಾರತೀಯ ಒಲಂಪಿಕ್​​ ಸ್ಪರ್ಧಿಗಳು ಜಪಾನಿನ ಟೋಕಿಯೋಗಾಗಿ ತೆರಳಲಿದ್ದಾರೆ. ಇವರಿಗೆ ಔಪಚಾರಿಕವಾದ ಬೀಳ್ಕೊಡುಗೆ​ ಸಮಾರಂಭವೊಂದು ನವದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ನಡೆಯಲಿದೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕುರ್​ ಹಾಗೂ ಕ್ರೀಡಾ ರಾಜ್ಯ ಸಚಿವ ನಿಶಿತ್​ ಪ್ರಮಾಣಿಕ್​ ಅವರು, 54 ಅಥ್ಲೀಟ್​ಗಳೊಂದಿಗೆ ಇಂಡಿಯನ್​ ಒಲಂಪಿಕ್​ ಅಸೋಸಿಯೇಷನ್(ಐಒಎ)ನ ಪ್ರತಿನಿಧಿಗಳು ಮತ್ತು ಸಹಾಯಕ ಸಿಬ್ಬಂದಿಯನ್ನೊಳಗೊಂಡ 88 ಜನರ ತಂಡಕ್ಕೆ, ಶುಭ ಕೋರಿ ಬೀಳ್ಕೊಡಲಿದ್ದಾರೆ. ಐಒಎ ಮತ್ತು ಸ್ಪೋರ್ಟ್ಸ್​ ಅಥಾರಿಟಿ ಆಫ್​ ಇಂಡಿಯಾದ ಪದಾಧಿಕಾರಿಗಳು ಉಪಸ್ಥಿತರಿರುವರು.
ಇದನ್ನೂ ಓದಿ:ಟೋಕಿಯೋ ಒಲಂಪಿಕ್ಸ್​ ಸಮಾರಂಭಗಳಿಗೆ ಫ್ಲ್ಯಾಗ್​ಬೇರರ್ಸ್ ಆಯ್ಕೆ
ಆರ್ಚರಿ, ಹಾಕಿ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಜಿಮ್ನಾಸ್ಟಿಕ್ಸ್, ವೈಟ್ ಲಿಫ್ಟಿಂಗ್​ ಸೇರಿದಂತೆ ಎಂಟು ಕ್ರೀಡಾ ಕ್ಷೇತ್ರಗಳ ಆಟಗಾರರು ಟೋಕಿಯೋಗೆ ಹೊರಟಿರುವ ತಂಡದಲ್ಲಿದ್ದಾರೆ. ಈ ಬಾರಿ 127 ಭಾರತೀಯ ಅಥ್ಲೀಟ್​ಗಳು ಒಲಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ.(ಏಜೆನ್ಸೀಸ್)
ಒಲಂಪಿಕ್ಸ್​​​ಗೆ ಸಿದ್ಧವಾಯ್ತು ಹಾಕಿ ಮಹಿಳಾ ತಂಡ; ಕ್ಯಾಪ್ಟನ್​ ಆಗಿ ರಾಣಿ ರಾಂಪಾಲ್
ಮತ್ತೆ ಏರಿದ ಪೆಟ್ರೋಲ್​ ಬೆಲೆ! ಡೀಸೆಲ್ ಬೆಲೆ ತಟಸ್ಥ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + seventeen =
Remember me
