ನವದೆಹಲಿ:ವಲಸೆ ಕಾರ್ವಿುಕರನ್ನು ಗುರುತಿಸಿ 15 ದಿನದೊಳಗೆ ಅವರವರ ಊರುಗಳಿಗೆ ಕಳಿಸಬೇಕು ಎಂದು ಸುಪ್ರೀಂಕೋರ್ಟ್ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ (ಯುಟಿ) ಮಂಗಳವಾರ ದೇಶಿಸಿದೆ. ಕರೊನಾ ಲಾಕ್​ಡೌನ್ ಆದೇಶಗಳನ್ನು ಉಲ್ಲಂಘಿಸಿರುವರೆನ್ನಲಾದ ವಲಸೆ ಕಾರ್ವಿುಕರ ವಿರುದ್ಧ ಹೂಡಲಾಗಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಲೂ ಅದು ಸೂಚಿಸಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಮತ್ತು ಎಂ.ಆರ್. ಷಾ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಊರುಗಳಿಗೆ ತಲುಪಿದ ವಲಸೆ ಕಾರ್ವಿುಕರ ಸಮಗ್ರ ಪಟ್ಟಿಯನ್ನು ರಚಿಸಬೇಕು ಹಾಗೂ ಲಾಕ್​ಡೌನ್​ಗೆ ಮುನ್ನ ಅವರು ತೊಡಗಿದ್ದ ಕೆಲಸವನ್ನು ನಮೂದಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ. ಲಾಕ್​ಡೌನ್ ನಂತರ ವಲಸೆ ಕಾರ್ವಿುಕರಿಗಾಗಿ ರೂಪಿಸಿದ ಉದ್ಯೋಗ ಯೋಜನೆಗಳ ಬಗ್ಗೆಯೂ ತಿಳಿಸುವಂತೆ ಆದೇಶಿಸಿದೆ. ಉದ್ಯೋಗ ಒದಗಿಸುವ ಸಲುವಾಗಿ ಕಾರ್ವಿುಕರ ಕೌಶಲ್ಯಗಳ ಮಾಹಿತಿ ಕಲೆ ಹಾಕುವಂತೆ ಮತ್ತು ಈ ಕುರಿತು ಜುಲೈ 8ರೊಳಗೆ ಅಫಿಡವಿಟ್ ಸಲ್ಲಿಸುವಂತೆಯೂ ಸೂಚಿಸಿದೆ.
ಸಮಾಲೋಚನೆ: ತಮ್ಮ ಕೆಲಸದ ಸ್ಥಳಗಳಿಗೆ ಮರಳ ಬಯಸುವ ವಲಸೆ ಕಾರ್ವಿುಕರಿಗೆ ಸಮಾಲೋಚನೆ ಸೌಲಭ್ಯ (ಕೌನ್ಸೆಲಿಂಗ್) ಒದಗಿಸುವಂತೆಯೂ ಸುಪ್ರೀಂಕೋರ್ಟ್ ಸರ್ಕಾರಗಳಿಗೆ ಸೂಚಿಸಿದೆ.
ಸ್ವಯಂಪ್ರೇರಿತ ಪ್ರಕರಣ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ವಲಸೆ ಕಾರ್ವಿುಕರ ಪ್ರಯಾಣಕ್ಕೆಂದು ರಾಜ್ಯಗಳು ಬೇಡಿಕೆ ಮಂಡಿಸಿದ 24 ಗಂಟೆಯೊಳಗೆ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡುವಂತೆ ರೈಲ್ವೆ ಇಲಾಖೆಗೆ ನಿರ್ದೇಶಿಸಿದೆ. ಇದಕ್ಕೂ ಮುನ್ನ ಕೆಲದಿನಗಳ ಹಿಂದೆ ವಲಸೆ ಕಾರ್ವಿುಕರಿಗೆ ರೈಲು ಅಥವಾ ಬಸ್ ಪ್ರಯಾಣಕ್ಕೆ ಹಣ ಪಡೆಯದಂತೆ ಮತ್ತು ಅವರಿಗೆ ಆಹಾರ, ನೀರು ಒದಗಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು.
ಹಳ್ಳಿಗಳಿಗೆ ಕಾಲಿಟ್ಟ ಕೊವಿಡ್​-19; ಸೋಂಕು ಮಣಿಸಲು ಹಳ್ಳಿಗರು ತೆಗೆದುಕೊಂಡ ನಿರ್ಧಾರ ಅನುಕರಣೀಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + sixteen =
Remember me
