ನವದೆಹಲಿ:ಕಾಂಗ್ರೆಸ್​ ಹಿರಿಯ ನಾಯಕ, ಸುಪ್ರೀಂಕೋರ್ಟ್​ ನ್ಯಾಯವಾದಿ ಅಭಿಷೇಕ್​ ಮನು ಸಿಂಘ್ವಿ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ.
ಅಭಿಷೇಕ್​ ಮನು ಸಿಂಘ್ವಿ ಅವರ ಮಗ ಸೇರಿ, ಕುಟುಂಬದ ಇತರ ಸದಸ್ಯರಿಗೆ, ಅವರ ಮನೆಯಲ್ಲಿ ಕೆಲಸ ಮಾಡುತ್ತಿರುವ ಇತರ ಸಿಬ್ಬಂದಿಗೂ ಕೊವಿಡ್​-19 ಬಾಧಿಸುತ್ತಿದೆ.
ಸಿಂಘ್ವಿ ಅವರು ಮನೆಯಲ್ಲೇ ಐಸೋಲೇಟ್​ ಆಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ತೀವ್ರ ತೊಂದೆಯೇನೂ ಕಾಣುತ್ತಿಲ್ಲ. ಸಣ್ಣ ಪ್ರಮಾಣದಲ್ಲಿ ಜ್ವರ ಬಾಧಿಸುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗಿಲ್ಲ. ಜು.9ರವರೆಗೂ ಅವರಿಗೆ ಕ್ವಾರಂಟೈನ್​​ನಲ್ಲಿ ಇರಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಂಘ್ವಿ ಅವರಿಗೆ ಕೊವಿಡ್​-19 ತಗುಲಿ ಈಗಾಗಲೇ ಐದಕ್ಕೂ ಹೆಚ್ಚು ದಿನಗಳು ಕಳೆದಿವೆ. ಜೂ.23ರಂದು ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಕರಣವೊಂದರ ವಾದ ಮಂಡನೆ ಮಾಡಿದ್ದರು.
ಸಿಂಘ್ವಿ ಅವರ ಪತ್ನಿಗೂ ಕೂಡ ಕೊವಿಡ್​-19 ಸೋಂಕು ತಗುಲಿದ್ದು ಸಣ್ಣ ಪ್ರಮಾಣದ ಜ್ವರ ಇದೆ. ಅವರೂ ಸರ್ಕಾರದ ಮಾರ್ಗಸೂಚಿಯಂತೆ ಮನೆಯಲ್ಲೇ ಐಸೋಲೇಟ್​ ಆಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.
ದೆಹಲಿಯಲ್ಲಿ ಹಲವು ನ್ಯಾಯಾಧೀಶರು, ವಕೀಲರು, ಕ್ಲರ್ಕ್​ಗಳು, ಕೋರ್ಟ ಸಿಬ್ಬಂದಿ ಕೊವಿಡ್​-19ನಿಂದ ಬಳಲುತ್ತಿದ್ದಾರೆ.ಕಳೆದ ತಿಂಗಳು ನ್ಯಾಯಾಧೀಶರೋರ್ವವರ ಮನೆಯ ಅಡುಗೆಯವನಿಗೆ ಕೊವಿಡ್​-19 ಪಾಸಿಟಿವ್ ಎಂದು ವರದಿ ಬಂದಿತ್ತು. ಹೀಗಾಗಿ ಆ ಜಡ್ಜ್​ ಅವರ ಇಡೀ ಕುಟುಂಬ ಕ್ವಾರಂಟೈನ್​ ಆಗಬೇಕಿತ್ತು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 17 =
Remember me
