ಪಟನಾ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣದ ತನಿಖೆಗಾಗಿ ಮುಂಬೈಗೆ ತೆರಳಿದ್ದ ಬಿಹಾರದ ಐಪಿಎಸ್​ ಅಧಿಕಾರಿ ವಿನಯ್​ ತಿವಾರಿ ಅವರನ್ನು ಮುಂಬೈ ಅಧಿಕಾರಿಗಳು ಬಲವಂತವಾಗಿ ಕ್ವಾರಂಟೈನ್​ಗೆ ದೂಡಿದ್ದಾರೆಂದು ಆರೋಪಿಸಿ ಬಿಹಾರದ ಡಿಜಿಪಿ ಗುಪ್ತೇಶ್ವರ್​ ಪಾಂಡೆ ಅವರು ಟ್ವೀಟ್​ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ:ಮಾವನ ಜತೆ ತೆರಳಿದ ಹುಡುಗಿಯರಿಬ್ಬರು ಮನೆಗೆ ಮರಳಿದ್ದು ಹೆಣವಾಗಿ: ಅಷ್ಟಕ್ಕೂ ನಡೆದಿದ್ದೇನು?
ಸುಶಾಂತ್​ ಸಾವಿಗೆ ಆತ್ಮಹತ್ಯೆ ಪ್ರಚೋದನೆಯೇ ಕಾರಣ ಎಂದು ಸುಶಾಂತ್​ ತಂದೆ ಪಟನಾದಲ್ಲಿ ದೂರು ನೀಡಿದ್ದರು. ಈ ಸಂಬಂಧ ಎಫ್​ಐಆರ್​ ಸಹ ದಾಖಲಾಗಿತ್ತು. ದೂರಿನ ಆಧಾರದ ಮೇಲೆ ವಿನಯ್​ ತಿವಾರಿ ಅವರು ಬಿಹಾರ ಪೊಲೀಸ್​ ತಂಡದೊಂದಿಗೆ ತನಿಖೆಗಾಗಿ ಮುಂಬೈಗೆ ತೆರಳಿದ್ದಾಗ ಈ ಹೈಡ್ರಾಮ ನಡೆದಿದೆ.
ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಡಿಜಿಪಿ ಪಾಂಡೆ ಅವರು ತಿವಾರಿ ಅವರು ಇಂದು ಪಟನಾದಿಂದ ಮುಂಬೈಗೆ ತೆರಳಿದರು. ಕರ್ತವ್ಯದ ಮೇಲೆ ಪೊಲೀಸ್​ ತಂಡದೊಂದಿಗೆ ತೆರಳಿದ ಅವರನ್ನು ಮುಂಬೈ ಅಧಿಕಾರಿಗಳು ಭಾನುವಾರ ರಾತ್ರಿ 11 ಗಂಟೆಗೆ ತಡೆದು ಬಲವಂತವಾಗಿ ಕ್ವಾರಂಟೈನ್​ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.​ನಾವು ಮನವಿ ಮಾಡಿದ ಬಳಿಕವೂ ತಿವಾರಿ ಅವರಿಗೆ ಉತ್ತಮ ವಸತಿ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಬದಲಾಗಿ ತಿವಾರಿ ಅವರು ಗೋರೆಗಾಂವ್ ಅತಿಥಿ ಗೃಹದಲ್ಲೇ ತಂಗಿದ್ದರು ಎಂದು ಡಿಜಿಪಿ ಪಾಂಡೆ ಹೇಳಿದ್ದಾರೆ.
IPS officer Binay Tiwari reached Mumbai today from patna on official duty to lead the police team there but he has been forcibly quarantined by BMC officials at 11pm today.He was not provided accommodation in the IPSMess despite request and was staying in a guest house in Goregawpic.twitter.com/JUPFRpqiGE
— Gupteshwar Pandey (@ips_gupteshwar)August 2, 2020

ಅಂದಹಾಗೆ ಸುಶಾಂತ್​ (34) ಜೂನ್​ 24ರಂದು ಮುಂಬೈನ ತಮ್ಮ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿತ್ತು. ಸಾವಿನ ಕುರಿತು ಸಾಕಷ್ಟು ತನಿಖೆ ಹಾಗೂ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಜುಲೈ ತಿಂಗಳ ಅಂತ್ಯದಲ್ಲಿ ಸುಶಾಂತ್​ ತಂದೆ ಪಟನಾದಲ್ಲಿ ಎಫ್​ಐಆರ್​ ದಾಖಲಿಸಿದ್ದರು. ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದರು.
ಇದನ್ನೂ ಓದಿ:ಪತಿಯನ್ನು ಜೈಲಿಗಟ್ಟಲು ಹೋಗಿ ಸಿಕ್ಕಿಬಿದ್ದಳು: ಪೊಲೀಸ್​ ತನಿಖೆಯಲ್ಲಿ ಸ್ಪೋಟಕ ಸತ್ಯಾಂಶ ಬಯಲು
ಇದರ ತನಿಖೆ ನಡೆಸಲು ಪೂರ್ವ ಪಟನಾದ ಪೊಲೀಸ್​ ವರಿಷ್ಠಾಧಿಕಾರಿ ಅನಿಲ್​ ತಿವಾರಿ ಅವರನ್ನು ನೇಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆಗಾಗಿ ಮುಂಬೈಗೆ ತೆರಳಿದ್ದರು. ಆದರೆ, ಕರೊನಾ ವೈರಸ್​ ಹೆಸರಲ್ಲಿ ಹೊರಗಿನಿಂದ ಬಂದ ಅವರನ್ನು ಬಲವಂತವಾಗಿ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂದು ಆರೋಪಿಸಲಾಗಿದೆ.
ಇತ್ತ ಮುಂಬೈ ಪೊಲೀಸರು ಸುಶಾಂತ್​ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. ಈವರೆಗೂ ಸುಶಾಂತ್​ ಕುಟುಂಬ ಹಾಗೂ ಚಿತ್ರರಂಗದ ಅನೇಕರು ಸೇರಿದಂತೆ ಸುಮಾರು 40 ಮಂದಿಯ ಹೇಳಿಕೆಗಳನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಬಾಡಿಗೆದಾರರು ಬೇಕಾಗಿದ್ದಾರೆ: ನಗರದೆಲ್ಲೆಡೆ ಟು ಲೆಟ್ ಬೋರ್ಡ್, 2 ಲಕ್ಷಕ್ಕೂ ಹೆಚ್ಚಿನ ಮನೆ ಖಾಲಿ
ವಿವಾಹಿತ ಮತ್ತೊಬ್ಬರ ಜತೆ ಲೈಂಗಿಕ ಸಂಬಂಧ ಹೊಂದುವುದು ಅಪರಾಧವೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − six =
Remember me
