ಶ್ರೀನಗರ:ಜಮ್ಮು-ಕಾಶ್ಮೀರದ ಹಿರಿಯ ಪೊಲೀಸ್​ ಅಧಿಕಾರಿ, ಶ್ರೀನಗರ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ  ಡಿಎಸ್​ಪಿ ದೇವಿಂದರ್​ ಸಿಂಗ್​ ಅವರನ್ನು ಇಂದು ಅಮಾನತು ಮಾಡಲಾಗಿದೆ.
ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರೊಂದಿಗೆ ಒಂದೇ ವಾಹನದಲ್ಲಿ ದೆಹಲಿಗೆ ತೆರಳುತ್ತಿದ್ದ ದೇವಿಂದರ್​ ಸಿಂಗ್​ ಅವರನ್ನು ಶನಿವಾರ ಶೋಪಿಯಾನದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.
ಸತತ ಎರಡು ದಿನಗಳ ವಿಚಾರಣೆ ನಡೆಸಿದ್ದು ಇನ್ನೂ ಕೂಡ ಪೊಲೀಸರ ತಂಡ ಮತ್ತು ಗುಪ್ತಚರ ದಳದ ಅಧಿಕಾರಿಗಳು ವಿಚಾರಣೆ ನಡೆಸುತ್ತಲೇ ಇದ್ದಾರೆ. ದೇವಿಂದರ್ ಸಿಂಗ್​ ಅವರು ಬರೀ ಉಗ್ರರ ಜತೆ ಪ್ರಯಾಣ ಮಾಡಿದ್ದಷ್ಟೇ ಅಲ್ಲ, ಬಾದಾಮಿ ಬಾಗ್​ ಕಂಟೋನ್ಮೆಂಟ್​ನಲ್ಲಿರುವ ಆರ್ಮಿ XV ಕಾರ್ಪ್ಸ್​ ಮುಖ್ಯಕಚೇರಿಯ ಬಳಿ ಇರುವ ತಮ್ಮ ನಿವಾಸದಲ್ಲಿ ಮೂವರು ಭಯೋತ್ಪಾದಕರಿಗೆ ಆಶ್ರಯ ನೀಡಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
ದೇವಿಂದರ್​ ಸಿಂಗ್​ ಅವರು ಕಳೆದ ನಾಲ್ಕುತಿಂಗಳ ಹಿಂದಷ್ಟೇ ರಾಷ್ಟ್ರಪತಿ ಪದಕದಿಂದ ಪುರಸ್ಕೃತರಾಗಿದ್ದಾರೆ. ಹಲವು ಉಗ್ರ ವಿರೋಧಿ ಕಾರ್ಯಾಚರಣೆಯಲ್ಲೂ ಸಕ್ರಿಯರಾಗಿ ಪಾಲ್ಗೊಂಡವರು.
ಹೀಗೆ ಉಗ್ರರಿಗೆ ಆಶ್ರಯ ಕೊಟ್ಟು, ಅವರೊಂದಿಗೆ ಪ್ರಯಾಣಿಸುವ ಕಾರಣ ಏನಿತ್ತು ಗೊತ್ತಿಲ್ಲ. ಇಬ್ಬರು ಉಗ್ರರೊಂದಿಗೆ ಇದ್ದ ಪೊಲೀಸ್​ ಅಧಿಕಾರಿಯನ್ನೂ ಉಗ್ರ ಎಂದೇ ಪರಿಗಣಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
