ಕೊಲ್ಕತಾ :ಹಿರಿಯ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದ ಮತ್ತು ಕೆಲವು ತಿಂಗಳ ಮುಂಚೆ ಬಿಜೆಪಿ ಸೇರಿದ ಸುವೇಂದು ಅಧಿಕಾರಿಯವರ ತಂದೆ ಸಿಸಿರ್ ಅಧಿಕಾರಿ ಅವರು ಬಿಜೆಪಿ ಸೇರುವ ಸಾಧ್ಯತೆಗಳು ಕಂಡುಬರುತ್ತಿವೆ. ಇಂದು ಪಶ್ಚಿಮ ಬಂಗಾಳದ ಎಗ್ರಾದಲ್ಲಿ ನಡೆಯಲಿರುವ ಬಿಜೆಪಿ ನಾಯಕ ಹಾಗೂ ಗೃಹ ಮಂತ್ರಿ ಅಮಿತ್ ಷಾ ಅವರ ಸಾರ್ವಜನಿಕ ರಾಲಿಯಲ್ಲಿ ಸಿಸಿರ್ ಅಧಿಕಾರಿ ಭಾಗವಹಿಸಲಿದ್ದಾರೆ.
ಕಳೆದ ಡಿಸೆಂಬರ್​ನಲ್ಲಿ ಇದೇ ರೀತಿ ಷಾ ರಾಲಿಯ ವೇಳೆ ಸುವೇಂದು ಅಧಿಕಾರಿ ಟಿಎಂಸಿಯಿಂದ ಬಿಜೆಪಿಗೆ ಹಾರಿದ್ದರು. ಈಗ ಅವರ ತಂದೆ ಕಾಂತಿ ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ಸಿಸಿರ್,​ ಅದೇ ರೀತಿ ಷಾ ರಾಲಿಯಲ್ಲಿ ಭಾಗವಹಿಸುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಅವರೊಂದಿಗೆ ಟಿಎಂಸಿ ಸಂಸದರೇ ಆದ ಪುತ್ರ ದಿಬ್ಯೇಂದು ಅಧಿಕಾರಿ ಕೂಡ ರಾಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:“ನನ್ನ ಹೆಲಿಕಾಪ್ಟರ್ ಕೆಟ್ಟಿತ್ತು… ಆದರೆ ನಾನದನ್ನು ಸಂಚು ಎನ್ನುವುದಿಲ್ಲ…”
ಇತ್ತೀಚೆಗೆ ಪ್ರತಿಷ್ಠಿತ ದಿಘಾ-ಶಂಕರ್‌ಪುರ ಅಭಿವೃದ್ಧಿ ಮಂಡಳಿಯ ಚೇರ್​ಮನ್​ಗಿರಿಯಿಂದ ಮತ್ತು ಟಿಎಂಸಿಯ ಜಿಲ್ಲಾ ಘಟಕದ ಅಧ್ಯಕ್ಷತೆಯಿಂದ ಸಿಸಿರ್ ಅಧಿಕಾರಿ ಅವರನ್ನು ಟಿಎಂಸಿ ಕೆಳಗಿಳಿಸಿತ್ತು. ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಸಿರ್ ಅಧಿಕಾರಿ, “ನನ್ನ ಇಡೀ ಕುಟುಂಬವನ್ನು ಟಿಎಂಸಿಯೇ ದೂರ ತಳ್ಳುತ್ತಿದೆ” ಎಂದಿದ್ದಾರೆ. ಜೊತೆಗೆ ನಂದೀಗ್ರಾಮದಲ್ಲಿ ಟಿಎಂಸಿ ಮುಖ್ಯಸ್ಥೆ ಸಿಎಂ ಮಮತಾ ಬ್ಯಾನರ್ಜಿ ಅವರ ಎದುರು ಸ್ಪರ್ಧಿಸುತ್ತಿರುವ ತಮ್ಮ ಮಗ ಸುವೇಂದು ಪರವಾಗಿ ತಾವು ಪ್ರಚಾರ ಮಾಡುವುದಾಗಿ ಕೂಡ ಹೇಳಿಕೆ ನೀಡಿದ್ದಾರೆ.(ಏಜೆನ್ಸೀಸ್)
ಮಾಲ್​ಗೆ ಹೋಗುವ ಮಂದಿಗೆ ಕರೊನಾ ಬರೆ ! ದುಡ್ಡು ತೆತ್ತು ಪರೀಕ್ಷೆ ಮಾಡಿಸಿಕೊಳ್ಳಿ !

8ನೇ ತರಗತಿ ಮುಗಿಸದವ ಸಿಸೇರಿಯನ್ ಮಾಡಿದ… ಮುಂದಾದದ್ದು ದೊಡ್ಡ ದುರಂತ

ರೇಪ್ ಮಾಡಲು ಯತ್ನಿಸಿದವನ ಮರ್ಮಾಂಗವನ್ನೇ ತುಂಡರಿಸಿದ ಮಹಿಳೆ; ಬುಕ್ಕಾದವು ಎರಡು ಕೇಸು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
