ಹೈದರಾಬಾದ್​:ತೆಲಂಗಾಣದ ಭುವನಗಿರಿ ಬಾಲಕಿಯರ ಹಾಸ್ಟೆಲ್‌ನಲ್ಲಿ ಇಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರು ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಸಂಚಲನ ಉಂಟುಮಾಡಿದೆ.
ಮೃತರನ್ನು ಭವ್ಯ ಮತ್ತು ವೈಷ್ಣವಿ ಎಂದು ಗುರುತಿಸಲಾಗಿದೆ. ಇಬ್ಬರು ವಿದ್ಯಾರ್ಥಿನಿಯರು ಹಾಸ್ಟೆಲ್ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಹಬ್ಸಿಗುಡಾ ಮೂಲದ ಇಬ್ಬರು ಬಾಲಕಿಯರು ಹಾಸ್ಟೆಲ್‌ನಲ್ಲಿದ್ದುಕೊಂಡು ಭುವನಗಿರಿಯ ರೆಡ್ಡಿವಾಡ ಬಾಲಕಿಯರ ಪ್ರೌಢಶಾಲೆಯಲ್ಲಿ ಓದುತ್ತಿದ್ದರು. ಎಂದಿನಂತೆ ಶನಿವಾರವೂ ಶಾಲೆಗೆ ತೆರಳಿದ್ದ ವಿದ್ಯಾರ್ಥಿಗಳು ಸಂಜೆ ಹಾಸ್ಟೆಲ್‌ಗೆ ಮರಳಿದರು.
ಊಟದ ಸಮಯದಲ್ಲೂ ಇಬ್ಬರೂ ಕೊಠಡಿಯಿಂದ ಹೊರಗೆ ಬರದ ಕಾರಣ ವಿದ್ಯಾರ್ಥಿನಿಯೊಬ್ಬಳು ಅನುಮಾನಗೊಂಡು ಕೊಠಡಿಗೆ ತೆರಳಿ ನೋಡಿದಾಗ ಆಘಾತಕಾರಿ ದೃಶ್ಯ ಕಂಡಿರು. ಇಬ್ಬರು ವಿದ್ಯಾರ್ಥಿನಿಯರು ಎರಡು ಫ್ಯಾನ್‌ಗೆ ನೇಣು ಹಾಕಿಕೊಂಡು ನೇತಾಡುತ್ತಿದ್ದರು. ಕೂಡಲೇ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಆಸ್ಪತ್ರೆಗೆ ಸಾಗಿಸಲಾದರೂ ಪರೀಕ್ಷಿಸಿದ ವೈದ್ಯರು ಅದಾಗಲೇ ಇಬ್ಬರು ಮೃತಪಟ್ಟಿರುವುದಾಗಿ ಘೋಷಿಸಿದರು.
ಬಾಲಕಿಯರು ನೇಣು ಬಿಗಿದುಕೊಂಡ ಕೊಠಡಿಯಿಂದ ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಉಲ್ಲೇಖಿಸಿರುವ ಅಂಶಗಳು ಆಘಾತಕಾರಿಯಾಗಿದೆ. ಇನ್ನೊಂದೆಡೆ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣದಲ್ಲಿ ಸಂಚಲನದ ಸಂಗತಿಗಳು ಸಹ ಬೆಳಕಿಗೆ ಬರುತ್ತಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಬಾಲಕಿಯರ ಹಿಂಭಾಗದಲ್ಲಿ ಗಾಯಗಳು ಕಂಡುಬಂದಿವೆ. ಕೈ ಮತ್ತು ಕೆನ್ನೆಯ ಮೇಲೆ ಕಚ್ಚಿದ ಗಾಯಗಳು ಕಂಡುಬಂದಿವೆ. ಈ ಸಂಬಂಧ ಕುಟುಂಬದ ಸದಸ್ಯರು ಫೋಟೋಗಳನ್ನು ಬಿಡುಗಡೆ ಮಾಡಿ, ತಮ್ಮ ಮಕ್ಕಳನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದಾರೆ.
ಹಾಸ್ಟೆಲ್ ವಾರ್ಡನ್, ಆಟೋ ಚಾಲಕನೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಭವ್ಯ ಮತ್ತು ವೈಷ್ಣವಿ ಅವರಿಗೆ ತಿಳಿದು, ವಾರ್ಡನ್ ಕಿರುಕುಳ ನೀಡುತ್ತಿದ್ದರು. ಕೊಠಡಿಯಲ್ಲಿ ಸಿಕ್ಕಿರುವ ಆತ್ಮಹತ್ಯೆ ಪತ್ರವೂ ಕೂಡ ಅಸಲಿ ಅಲ್ಲ. ಕೊಲೆ ಮಾಡಿದ ಬಳಿಕ ಪ್ರಕರಣ ಹೊರಗೆ ಬಾರದಂತೆ ವಾರ್ಡನ್ ಮೇಡಂ ಅವರನ್ನು ಹೊಗಳಿ ಪತ್ರ ಬರೆಸಿದ್ದಾರೆ ಎಂದು ಮೃತರ ಪಾಲಕರು ಆರೋಪ ಮಾಡಿದ್ದಾರೆ.
ವಾರ್ಡನ್‌ನ ಅಕ್ರಮ ರಹಸ್ಯ ಬಹಿರಂಗಗೊಂಡಿದ್ದು ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ ಎಂದು ಬಾಲಕಿಯರ ಸಂಬಂಧಿಕರು ಆರೋಪಿಸಿದ್ದಾರೆ. ಸಂಬಂಧಿಕರ ಅನುಮಾನದ ಜೊತೆಗೆ ಪ್ರಕರಣದ ತನಿಖೆಯ ಭಾಗವಾಗಿ ಹಾಸ್ಟೆಲ್ ವಾರ್ಡನ್, ಆಟೋ ಚಾಲಕ ಆಂಜನೇಯು, ಅಡುಗೆಯವರಾದ ಸುಜಾತ, ಸುಲೋಚನಾ, ಪಿಇಟಿ ಪ್ರತಿಭಾ ಹಾಗೂ ಟ್ಯೂಷನ್ ಶಿಕ್ಷಕಿ ಭುವನೇಶ್ವರಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ವಿಚಾರಣೆ ಬಳಿಕ ವಿದ್ಯಾರ್ಥಿಗಳ ಸಾವಿನ ಹಿಂದಿನ ಅಸಲಿ ಕಾರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.(ಏಜೆನ್ಸೀಸ್​)
ನೇಹಾ ಲಕ್ಷ್ಮಿ ಬ್ಯಾಚುಲರ್ ಪಾರ್ಟಿಯಲ್ಲಿ ಸುರಭಿ ಚಂದನಾ; ವೈರಲ್ ಆಯ್ತು ನಟಿಯ ಬೋಲ್ಡ್ ಲುಕ್

ಮನಸ್ಸಿಗೆ ಅನಿಸಿದ್ದನ್ನು ಮಾಡಿ ಎಂದ ಮಲಿಕ್​ಗೆ ಖಡಕ್​ ತಿರುಗೇಟು ನೀಡಿದ ಸಾನಿಯಾ ಮಿರ್ಜಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 5 =
Remember me
