ಮುಂಬೈ:ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಏರಿಳಿತದ ವಹಿವಾಟಿನ ನಂತರ ಅಂತಿಮವಾಗಿ ಬಹುತೇಕ ಫ್ಲಾಟ್ (ಸಮತಟ್ಟು) ಆಗಿ ಕೊನೆಗೊಡವು,
ದಿನದ ವಹಿವಾಟಿನ ಬಹುತೇಕ ಸಮಯದಲ್ಲಿ ಏರಿಕೆ ಕಂಡಿದ್ದ 30-ಷೇರುಗಳ ಬಿಎಸ್‌ಇ ಸೂಚ್ಯಂಕವು ಅಂತಿಮವಾಗಿ 33.49 ಅಂಕಗಳು ಅಥವಾ ಶೇ 0.04 ಕಳೆದುಕೊಂಡು 76,456.59 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ಅವಧಿಯಲ್ಲಿ, ಇದು 370.45 ಅಂಕಗಳು ಅಥವಾ ಶೇ 0.48 ರಷ್ಟು ಜಿಗಿದು 76,860.53 ಕ್ಕೆ ತಲುಪಿತ್ತು.
ಏರಿಳಿತದ ವಹಿವಾಟಿನಲ್ಲಿ, ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 5.65 ಅಂಖಗಳು ಅಥವಾ 0.02 ರಷ್ಟು ಏರಿಕೆಯಾಗಿ 23,264.85 ಕ್ಕೆ ಕೊನೆಗೊಂಡಿತು.
ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬಿಎಸ್​ಇ ಸೆನ್ಸೆಕ್ಸ್ ಮತ್ತು ನಿಫ್ಟಿ ತಮ್ಮ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದವು.
ಮಂಗಳವಾರ ಕೋಟಕ್ ಮಹೀಂದ್ರಾ ಬ್ಯಾಂಕ್, ಏಷ್ಯನ್ ಪೇಂಟ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ, ಸನ್ ಫಾರ್ಮಾ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳ ಬೆಲೆ ಕುಸಿದವು. ಲಾರ್ಸೆನ್ ಆ್ಯಂಡ್ ಟೂಬ್ರೊ, ಟಾಟಾ ಮೋಟಾರ್ಸ್, ಮಾರುತಿ, ಎನ್‌ಟಿಪಿಸಿ, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಲಾಭ ಗಳಿಸಿದವು.
ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್ ಮತ್ತು ಟೋಕಿಯೊ ಉನ್ನತ ಮಟ್ಟದಲ್ಲಿ ನೆಲೆಸಿದರೆ, ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿತ ಕಂಡವು. ಐರೋಪ್ಯ ಮಾರುಕಟ್ಟೆಗಳು ಕಡಿಮೆ ವಹಿವಾಟು ನಡೆಡಿದವು. ಅಮೆರಿಕ ಮಾರುಕಟ್ಟೆಗಳು ಸೋಮವಾರ ಸಕಾರಾತ್ಮಕ ವಹಿವಾಟು ನಡೆಸಿದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ 2,572.38 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.
ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬಿಎಸ್​ಇ ಸೂಚ್ಯಂಕವು 77,000 ಅಂಕಗಳ ಗಡಿಯನ್ನು ದಾಟಿದ ನಂತರ ಅಂತ್ಯದಲ್ಲಿ ಮಾರಾಟದ ಒತ್ತಡಕ್ಕೆ ಒಳಗಾಗಿ, 203.28 ಅಂಕಗಳು ಅಥವಾ ಶೇ 0.27 ಕಡಿಮೆಯಾಗಿ 76,490.08 ಕ್ಕೆ ಕೊನೆಗೊಂಡಿತ್ತು. ತನ್ನ ಮೂರು ದಿನಗಳ ರ್ಯಾಲಿಯನ್ನು ಸ್ಥಗಿತಗೊಳಿಸಿದ ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 30.95 ಅಂಕಗಳು ಅಥವಾ ಶೇ 0.13 ರಷ್ಟು ಕುಸಿದು 23,259.20 ಕ್ಕೆ ಸ್ಥಿರವಾಗಿತ್ತು.
ಬಿಪಿಸಿಎಲ್​ ಖಾಸಗೀಕರಣ ಯೋಜನೆ ಸದ್ಯಕ್ಕಿಲ್ಲ: ಸಚಿವ ಪುರಿ ಸ್ಪಷ್ಟನೆ

2023-24ರಲ್ಲಿ ವಿಶೇಷ ಆರ್ಥಿಕ ವಲಯಗಳಿಂದ ರಫ್ತು 4% ಹೆಚ್ಚಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
