ಮುಂಬೈ:ಷೇರು ಮಾರುಕಟ್ಟೆಯಲ್ಲಿ ಗುರುವಾರ ಸಾರ್ವಕಾಲಿಕ ದಾಖಲೆಯೊಂದು ನಿರ್ಮಾಣವಾಗಿದೆ. ಸೆನ್ಸೆಕ್ಸ್​ ಆರಂಭವಾಗಿ 41 ವರ್ಷಗಳಲ್ಲಿ ಇದೇ ಮೊದಲನೇ ಬಾರಿಗೆ 50 ಸಾವಿರದ ಗಡಿ ದಾಟಿದೆ. ಕಳೆದ ಏಳು ವರ್ಷಗಳಲ್ಲಿ ಸೆನ್ಸೆಕ್ಸ್​ ಬರೋಬ್ಬರಿ 25 ಸಾವಿರ ಅಂಶ ಹೆಚ್ಚಳ ಕಂಡಿದೆ.
ಇದನ್ನೂ ಓದಿ:100 ರೂ. ಮುಖಬೆಲೆಯ ಹಳೇ ನೋಟು ಇನ್ಮುಂದೆ ಚಲಾವಣೆ ಆಗಲ್ಲ! ಸೂಚನೆ ಕೊಟ್ಟ ಆರ್​ಬಿಐ
ಬಾಂಬೆ ಸ್ಟಾಕ್​ ಎಕ್ಸ್​ಚೇಂಚ್​ 1875ರಲ್ಲಿ ಸ್ಥಾಪಿತವಾಯಿತು. ಅದಾದ ನಂತರ ಬಿಎಸ್​ಇಯ ಸೆನ್ಸೆಕ್ಸ್​ನ್ನು 1979ರ ಏಪ್ರಿಲ್​ 1ರಂದು ಕೇವಲ 100 ಅಂಶಗಳೊಂದಿಗೆ ಆರಂಭಿಸಲಾಯಿತು. ಟಾಪ್​ ಟ್ರೆಂಡಿಂಗ್​ನಲ್ಲಿರುವ 30 ಷೇರುದಾರರೊಂದಿಗೆ ಈ ಮಾರುಕಟ್ಟೆಯನ್ನು ಆರಂಭಿಸಲಾಯಿತು. ಸೆನ್ಸೆಕ್ಸ್​ ಆರಂಭವಾದ ನಂತರ ಮೂರು ದಿನಗಳಲ್ಲಿ ಅಂದರೆ 1979ರ ಏಪ್ರಿಲ್​ 3ರಂದು ಸೆನ್ಸೆಕ್ಸ್​ 124.15 ಅಂಶದಲ್ಲಿ ದಿನದ ವಹಿವಾಟನ್ನು ಅಂತ್ಯವಾಗಿತ್ತು. ಅದಾದ ನಂತರ 1985ರ ಜುಲೈ 19ರಂದು 500ರ ಗಡಿ ದಾಟಿತ್ತು. 1990ರ ಜುಲೈ 25ಕ್ಕೆ 1000ದ ಗಡಿ ದಾಟಿತ್ತು. 1992ರಲ್ಲಿ 2000ಕ್ಕೂ ಹೆಚ್ಚಾಗಿತ್ತು.
1999ರಲ್ಲಿ 13ನೇ ಲೋಕಸಬಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆದ್ದು, ಅಟಲ್​ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿ ಆದ ಸಮಯದಲ್ಲಿ ಸೆನ್ಸೆಕ್ಸ್​ 5000 ದಾಟಿತು. 2005ರಲ್ಲಿ ಮುಕೇಶ್​ ಅಂಬಾನಿ ಮತ್ತು ಅನಿಲ್​ ಅಂಬಾನಿಯ ವ್ಯಾವಹಾರಿಕ ರಾಜಿ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದ ನಂತರ ಮತ್ತೆ ಏರಿಕೆ ಕಂಡ ಸೆನ್ಸೆಕ್ಸ್​ 7000 ದಾಟಿತ್ತು. 2006ರಲ್ಲಿ 10 ಸಾವಿರಕ್ಕೂ ಹೆಚ್ಚಾಯಿತು. 5 ಸಾವಿರದಿಂದ 10 ಸಾವಿರಕ್ಕೆ ಏರಿಕೆಯಾಗಲು 6 ವರ್ಷಗಳ ಸಮಯ ಬೇಕಾಯಿತು.
ಇದನ್ನೂ ಓದಿ:ಆಂಧ್ರದಲ್ಲಿ ಮತ್ತೆ ಕಾಣಿಸಿಕೊಂಡಿದೆ ನಿಗೂಢ ರೋಗ: 29 ಮಂದಿ ಸ್ಥಿತಿ ಗಂಭೀರ
2007 ಷೇರುಮಾರುಕಟ್ಟೆ ಪ್ರಿಯರಿಗೆ ಉತ್ತಮ ವರ್ಷವಾಗಿತ್ತು ಎನ್ನಬಹುದು. 10 ಸಾವಿರದಲ್ಲಿದ್ದ ಸೆನ್ಸೆಕ್ಸ್​ 15 ಸಾವಿರಕ್ಕೂ ಅಧಿಕವಾಯಿತು. ಅದಾದ ನಂತರ ಅದೇ ವರ್ಷದಲ್ಲಿ 20 ಸಾವಿರವನ್ನೂ ಮೀರಿತು. ಅದರ ಮರುವರ್ಷವೇ ಮತ್ತೆ ಭಾರಿ ಇಳಿಕೆ ಕಂಡು 12-15 ಸಾವಿರದ ಮಟ್ಟಕ್ಕೆ ಬಂದಿಳಿಯಿತು. 2009ರ ಆರಂಭದಲ್ಲಿ ಮತ್ತೆ ಇಳಿಕೆ ಕಂಡು 8 ಸಾವಿರಕ್ಕೆ ಇಳಿದ ಮಾರುಕಟ್ಟೆ ವರ್ಷದ ದ್ವಿತಿಯಾರ್ಧದಲ್ಲಿ ಮತ್ತೆ ಏರಿಕೆ ಕಂಡು 15 ಸಾವಿರಕ್ಕೆ ತಲುಪಿತು.
2011ರ ಆರಂಭ 20 ಸಾವಿರದಲ್ಲಿ ಆಯಿತಾದರೂ ವರ್ಷದ ಅಂತ್ಯ 15 ಸಾವಿರದಲ್ಲಿ ಆಯಿತು. ಅದಾದ ಮೇಲೆ 2 ವರ್ಷ ಸೆಕ್ಸೆಕ್ಸ್​ 20 ಸಾವಿರದ ಆಸುಪಾಸಿನಲ್ಲೇ ಇತ್ತು.
2014ರಿಂದ ಸೆನ್ಸೆಕ್ಸ್ ಮತ್ತೆ ಏರಿಕೆ ಕಂಡುಕೊಂಡಿತು. 2014ರಲ್ಲಿ 30 ಸಾವಿರದವರೆಗೆ ಏರಿಕೆಯಾಯಿತು. 2018ರಲ್ಲಿ 35 ಸಾವಿರ ದಾಟಿದ ಸೆನ್ಸೆಕ್ಸ್​ 2019ರ ಅಕ್ಟೋಬರ್​ಗೆ 40 ಸಾವಿರ ದಾಟಿತು. ಇದೀಗ 2021ರ ಜನವರಿಯಲ್ಲಿ 50 ಸಾವಿರ ದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ. (ಏಜೆನ್ಸೀಸ್​)

ಫ್ರೀ ಇನ್ನರ್​ವೇರ್​ ಆಫರ್​ಗೆ ಮರುಳಾದ ಯುವತಿ! ಮುಂದೇನಾಯ್ತು ಕೇಳಿದರೆ ಶಾಕ್​ ಆಗೋದು ಗ್ಯಾರಂಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + six =
Remember me
