ಮುಂಬೈ:ಬಿಎಸ್​ಇ ಬೆಂಚ್​ಮಾರ್ಕ್ ಸೂಚ್ಯಂಕವು ಇದೇ ಮೊದಲ ಬಾರಿಗೆ 70,000 ಅಂಕಗಳ ಗಡಿ ದಾಟಿದ ದಾಖಲೆಯನ್ನು ಸೋಮವಾರ ಬರೆಯಿತು. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೂಚ್ಯಂಕವು ದಾಖಲೆಯ 70,057.83 ಅಂಕ ತಲುಪಿತ್ತು. ತದನಂತರ ದಿನದ ವಹಿವಾಟಿನ ಈ ಸೂಚ್ಯಂಕವು ಕುಸಿತ ಕಂಡಿತು. ಅಂತಿಮವಾಗಿ, ಇದು 102.93 ಅಂಕ ಅಥವಾ 0.15 ಶೇಕಡಾ ಏರಿಕೆಯೊಂದಿಗೆ 69,928.53ಕ್ಕೆ ನೆಲೆಗೊಂಡಿತು.
ಜಾಗತಿಕ ಮಾರುಕಟ್ಟೆಗಳಲ್ಲಿನ ಆರಂಭಿಕ ಲಾಭಗಳ ನಡುವೆ ನಿಫ್ಟಿ ಸೂಚ್ಯಂಕವು ದಾಖಲೆಯ 21,026.10 ಅಂಕಗಳ ಗರಿಷ್ಠ ಮಟ್ಟವನ್ನು ತಲುಪಿತು. ಅಂತಿವುವಾಗಿ ಈ ಸೂಚ್ಯಂಕವು 27.70 ಅಂಕ ಅಥವಾ 0.13 ಶೇಕಡಾ ಏರಿಕೆಯೊಂದಿಗೆ 20,997.10ಕ್ಕೆ ನೆಲೆಸಿತು. ಇದು ಕೂಡ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ.
ದುರ್ಬಲಗೊಂಡ ಜಾಗತಿಕ ಸೂಚನೆಗಳು ಮತ್ತು ಫಾರ್ಮಾ ಸ್ಟಾಕ್‌ಗಳಲ್ಲಿನ ಕುಸಿತದಿಂದ ಪ್ರಭಾವಿತವಾದ ಮಾರುಕಟ್ಟೆಯು ಬೆಳಗಿನಿಂದಲೂ ಚಂಚಲತೆ ಪ್ರದರ್ಶಿಸಿತು.
ಸೆನ್ಸೆಕ್ಸ್ ಷೇರುಗಳ ಪೈಕಿ ಅಲ್ಟ್ರಾಟೆಕ್ ಸಿಮೆಂಟ್ ಶೇ.3.04ರಷ್ಟು ಲಾಭ ಮಾಡಿತು. ನೆಸ್ಲೆ ಶೇ. 1.3, ಪವರ್ ಗ್ರಿಡ್ ಶೇ.1.05 ಮತ್ತು ಟಾಟಾ ಮೋಟಾರ್ಸ್ ಶೇ.0.85ರಷ್ಟು ಏರಿಕೆ ಕಂಡಿವು. ಇಂಡಸ್‌ಇಂಡ್ ಬ್ಯಾಂಕ್, ಎಚ್‌ಸಿಎಲ್ ಟೆಕ್, ಟಿಸಿಎಸ್, ಟೆಕ್ ಮಹೀಂದ್ರಾ, ಎನ್‌ಟಿಪಿಸಿ, ಐಟಿಸಿ, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಟಾಟಾ ಸ್ಟೀಲ್‌ ಷೇರುಗಳು ಲಾಭ ಮಾಡಿದವು.
ಆಕ್ಸಿಸ್ ಬ್ಯಾಂಕ್ ಶೇ.1.26ರಷ್ಟು, ಎಂ&ಎಂ ಶೇ.0.99 ಮತ್ತು ಹಿಂದೂಸ್ತಾನ್ ಯೂನಿಲಿವರ್ ಶೇ.0.67ರಷ್ಟು ಕುಸಿತ ದಾಖಲಿಸಿದವು. ಮಾರುತಿ, ಬಜಾಜ್ ಫಿನ್‌ಸರ್ವ್, ಭಾರ್ತಿ ಏರ್‌ಟೆಲ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇನ್ಫೋಸಿಸ್ ಷೇರು ಕೂಡ ಹಿನ್ನಡೆ ಅನುಭವಿಸಿದವು.
ಬಿಎಸ್‌ಇ ಲಾರ್ಜ್‌ಕ್ಯಾಪ್ ಶೇಕಡಾ 0.21, ಬಿಎಸ್‌ಇ ಮಿಡ್‌ಕ್ಯಾಪ್ ಶೇಕಡಾ 0.91, ಸ್ಮಾಲ್‌ಕ್ಯಾಪ್ ಶೇಕಡಾ 0.71 ರಷ್ಟು ಏರಿಕೆಯಾಗಿವೆ. ಬಿಎಸ್‌ಇ ಸರಕುಗಳು ಶೇಕಡಾ 1.16, ಬಿಎಸ್‌ಇ ಮೆಟಲ್ ಶೇಕಡಾ 1.1, ಬಿಎಸ್‌ಇ ಸೇವೆಗಳು ಶೇಕಡಾ 0.95, ಬಿಎಸ್‌ಇ ಕ್ಯಾಪಿಟಲ್ ಗೂಡ್ಸ್ ಶೇಕಡಾ 0.76, ಬಿಎಸ್‌ಇ ಯುಟಿಲಿಟೀಸ್ ಶೇಕಡಾ 0.67 ಮತ್ತು ಬಿಎಸ್‌ಇ ಆಟೋ ಶೇಕಡಾ 0.48 ರಷ್ಟು ಹೆಚ್ಚಳ ಕಂಡಿವೆ. ಆದರೆ, ಬಿಎಸ್‌ಇ ಹೆಲ್ತ್‌ಕೇರ್ ಶೇ.0.38 ಹಾಗೂ ತೈಲ ಮತ್ತು ಅನಿಲ ಶೇ.0.15ರಷ್ಟು ಕುಸಿತ ದಾಖಲಿಸಿವೆ.
ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳ ಮೇಲಿನ ತನ್ನ ಮುಂದಿನ ನಡೆಯನ್ನು ಬುಧವಾರ ಪ್ರಕಟಿಸಲಿದೆ. ಅಲ್ಲದೆ, ಅಮೆರಿಕ ಸರ್ಕಾರವು ಮಂಗಳವಾರ ಗ್ರಾಹಕರ ಹಣದುಬ್ಬರ ಕುರಿತು ವರದಿ ಮಾಡಲಿದೆ. ಇದು ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿದೆ.

ಕಾಶ್ಮೀರವು ಭಾರತೀಯರದ್ದು; ಭಾರತವು ಕಾಶ್ಮೀರಿಗಳದ್ದು… ಸಂಸತ್ತಿನಲ್ಲಿ ಗರ್ಜಿಸಿದ ಅಮಿತ್​ ಶಾ!

ರಫ್ತು ನಿಷೇಧ ವಿರುದ್ಧ ಶರದ್​ ಪವಾರ್​, ಮಹಾರಾಷ್ಟ್ರ ರೈತರ ಪ್ರತಿಭಟನೆ: ಕೇಂದ್ರ ಸರ್ಕಾರ ಮಣಿದರೆ ಮತ್ತೆ ಈರುಳ್ಳಿ ಬೆಲೆ ಗಗನಮುಖಿ

ರಾಜಸ್ಥಾನ ಸಿಎಂ ಆಯ್ಕೆ ಮಂಗಳವಾರ: ರೇಸ್​ನಲ್ಲಿ ವಸುಂಧರಾ ರಾಜೇ, ಬಾಲಕನಾಥ್, ಶೇಖಾವತ್​, ಮೇಘವಾಲ್​, ವೈಷ್ಣವ್​

ವಾ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − eleven =
Remember me
