ಉತ್ತರಪ್ರದೇಶ:ಮೊರಾದಾಬಾದ್ ಪ್ರದೇಶದ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಕೋತಿಗಳ ಕಾಟದಿಂದ ಪಾರಾಗಲು ಲಂಗೂರ್ ಮತ್ತು ಫೈರ್ ಸೌಂಡ್ ಸೆನ್ಸಾರ್ ಯಂತ್ರಗಳ ಫೋಟೋಗಳನ್ನು ಅಳವಡಿಸಲಾಗಿದೆ. ಬಸ್ ನಿಲ್ದಾಣಗಳಲ್ಲಿ ಕೋತಿಗಳ ಕಾಟದಿಂದ ಪಾರಾಗಲು ಈ ಉಪಾಯ ಹೂಡಿದ್ದೇವೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಮೊರಾದಾಬಾದ್‌ನ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳಲ್ಲಿ ಅಧಿಕಾರಿಗಳು ಲಾಂಗೂರ್‌ನ ದೊಡ್ಡ ಫೋಟೋಗಳನ್ನು ಹಾಕಿದ್ದಾರೆ. ಈ ಫೋಟೋಗಳನ್ನು ಎತ್ತರದ ಮರಗಳು, ಕಂಬಗಳು, ಗೋಡೆಗಳು ಮತ್ತು ಬಸ್ ನಿಲ್ದಾಣದ ಛಾವಣಿಗಳ ಮೇಲೆ ಅಂಟಿಸಲಾಗಿದೆ. ಇದೇ ವೇಳೆ ಬಸ್ ನಿಲ್ದಾಣದಲ್ಲಿ ಕೋತಿಗಳನ್ನು ಓಡಿಸಲು ಸೆನ್ಸಾರ್ ಯಂತ್ರವನ್ನೂ ಅಳವಡಿಸಲಾಗಿದೆ. ಸೆನ್ಸಾರ್ ಯಂತ್ರದ ಬಳಿ ಕೋತಿ ಬಂದ ತಕ್ಷಣ ಬೆಂಕಿ ಹೊತ್ತಿಕೊಳ್ಳುವುದರೊಂದಿಗೆ ಗುಂಡಿನ ಸದ್ದು ಕೇಳಿ ಬರುತ್ತಿದ್ದು, ಇದರಿಂದ ಕೋತಿಗಳು ಓಡಿ ಹೋಗುತ್ತಿವೆ.
ದಿನವಿಡೀ 10-20 ಸಾವಿರ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಂಗಗಳು ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದು, ಬಸ್‌ಗಳಿಗೆ ಹಾನಿ ಮಾಡುತ್ತಿತ್ತು. ಹೀಗಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಹೇಳಿಕೊಂಡಿದ್ದಾರೆ.
ನಮ್ಮ ವ್ಯಾಪಾರಕ್ಕೆ ಕೋತಿಗಳ ಉಪಟಳವಿತ್ತು. ಅಂಗಡಿ ಸಾಮಾನುಗಳನ್ನು ಕಿತ್ತುಕೊಂಡು ಹೋಗುತ್ತಿದ್ದವು. ಇಂತಹ ಪರಿಸ್ಥಿತಿಯಲ್ಲಿ ಲಾಂಗುರ್ ಪೋಸ್ಟರ್‌ಗಳನ್ನು ಅಳವಡಿಸಿದಾಗಿನಿಂದ ಕೋತಿಗಳ ಕಾಟ ಕಡಿಮೆಯಾಗಿದೆ ಎಂದು ಬಸ್ ನಿಲ್ದಾಣದ ಅಂಗಡಿ ಮಾಲೀಕರೊಬ್ಬರು ಹೇಳಿಕೊಂಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
