ನವದೆಹಲಿ:ಸಾಮಾನ್ಯವಾಗಿ ವಿದೇಶ ಪ್ರಯಾಣಕ್ಕೆ ಹೋದಾಗ ಎದುರಾಗುವುದು ರೋಮಿಂಗ್ ಸಮಸ್ಯೆ. ಕೆಲವೊಂದು ದೇಶಗಳಲ್ಲಿ ಅಲ್ಲಿಗೆ ಹೋದ ಬಳಿಕ ಪ್ರತ್ಯೇಕ ಇನ್ನೊಂದು ಸಿಮ್ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಅದಕ್ಕೆ ಇದೀಗ ಪ್ರಪ್ರಥಮವಾಗಿ ಪರಿಹಾರ ಕಂಡುಕೊಳ್ಳಲಾಗಿದೆ.
ಯಾವುದೇ ದೇಶಕ್ಕೆ ಹೋದರೂ ಸಂಪರ್ಕ-ಸಂವಹನಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ದೇಶದ ಮೊದಲ ಇ-ಸಿಮ್​ ಬಂದಿದೆ. ಈ ಸಿಮ್​ ಇದ್ದರೆ ಸಾಕು, ವಿದೇಶ ಪ್ರಯಾಣಿಕರಿಗೆ ರೋಮಿಂಗ್ ಸೇರಿದಂತೆ ಇತರ ಸಮಸ್ಯೆ ಆಗುವುದಿಲ್ಲ. ಎಂ2ಎಂ ಸರ್ವಿಸ್ ಪ್ರೊವೈಡರ್ ಕಂಪನಿ ಆಗಿರುವ ಸೆನ್ಸರೈಸ್ ಇಂಥದ್ದೊಂದು ಸಿಮ್ ಜಾರಿಗೆ ತಂದಿದೆ. ಇದನ್ನು ಭಾರತದ ಪ್ರಪ್ರಥಮ ಇ-ಸಿಮ್​ ಎನ್ನಲಾಗುತ್ತಿದೆ.
ಜಗತ್ತಿನಾದ್ಯಂತ ಸುತ್ತಾಟ ನಡೆಸುವವರಿಗೆ, ಯಾವಾಗಲೂ ವಿದೇಶ ಪ್ರಯಾಣದಲ್ಲಿ ಇರುವವರಿಗೆ ಈ ಸಿಮ್​ನಿಂದ ತುಂಬಾ ಅನುಕೂಲಗಳಾಗಲಿವೆ. ಇದೊಂದು ಸಿಮ್​ ಇದ್ದರೆ ಸಾಕು, ಜಗತ್ತಿನ ಬಹುತೇಕ ದೇಶಗಳಲ್ಲಿ ಬೇರೆ ಸಿಮ್​ ಪಡೆಯದೇ ಸಂಚರಿಸಬಹುದು ಎನ್ನಲಾಗಿದೆ.
ಇದನ್ನೂ ಓದಿ:ಈ ದೇವಸ್ಥಾನದಲ್ಲಿ ಮಹಿಳೆಯರಿಗಷ್ಟೇ ಗರ್ಭಗುಡಿಗೆ ಪ್ರವೇಶ, ಪೂಜಿಸಲು ಅವಕಾಶ: ಮುಟ್ಟಾಗಿದ್ದರೂ ಇಲ್ಲಿ ಮೈಲಿಗೆಯಲ್ಲ!
ಇದೊಂಥರ ಡಿಜಿಟಲ್ ಸಿಮ್ ಕಾರ್ಡ್. ಇದರ ಮೂಲಕ ಡೇಟಾ ಮತ್ತು ಇಂಟರ್ನೆಟ್ ಪ್ಯಾಕೇಜ್​ಗಳಿಗೆ ಸಬ್​ಸ್ಕ್ರೈಬ್ ಮಾಡಿಕೊಳ್ಳಬಹುದು. ಜಗತ್ತಿನ ಯಾವುದೇ ದೇಶದ ಇಲ್ಲವೇ ಯಾವುದೇ ಖಂಡದಲ್ಲೂ ಪಬ್ಲಿಕ್ ವೈ-ಫೈ ಇತ್ಯಾದಿಗೆ ಸಂಪರ್ಕ ಹೊಂದಬಹುದು.
ಇ-ಸಿಮ್ ಬಳಕೆಯಿಂದ ಪ್ರಯಾಸವಿಲ್ಲದೆ ಇಂಟರ್​ನೆಟ್ ಸಂಪರ್ಕ ಪಡೆಯಬಹುದು. ಪ್ರತ್ಯೇಕ ಅಥವಾ ಹೊಸ ಸಿಮ್ ಪಡೆಯದೇ ಬೇಕಾದ ಪ್ಲ್ಯಾನ್​ನ ಡೇಟಾ ಪಡೆಯಬಹುದು. ಸೆನ್ಸರೈಸ್ ಆ್ಯಪ್ ಮೂಲಕ ಕ್ಯೂಆರ್​ ಕೋಡ್ ಸ್ಕ್ಯಾನ್​ ಮಾಡಿ ಇ-ಸಿಮ್ ಪಡೆಯಬಹುದು.
ನಟ ದರ್ಶನ್ ವಿರುದ್ಧ ದೂರು ಕೊಟ್ಟ ಮಹಿಳೆ​: ಹರಿದುಹೋದ ಬಟ್ಟೆ, ಹೊಟ್ಟೆಗೆ ಗಾಯ!

ಆಕೆ ಇನ್ನಿಲ್ಲ ಎಂಬುದನ್ನು ಖಚಿತಪಡಿಸಿದ ಇಸ್ರೇಲ್​; ಆಕೆಯನ್ನು ಹಮಾಸ್ ಉಗ್ರರು ಅದೇನೇನು ಮಾಡಿದ್ದರೆಂದರೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − thirteen =
Remember me
