ಅಯೋಧ್ಯೆ:ಭವ್ಯ ರಾಮ ಮಂದಿರ ನಿರ್ವಣವಾಗಲಿರುವ ಅಯೋಧ್ಯೆ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಉತ್ತರ ಪ್ರದೇಶ ಸರ್ಕಾರ ‘ಅಯೋಧ್ಯಾ ತೀರ್ಥ ವಿಕಾಸ ಪರಿಷದ್ (ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ)’ ರಚಿಸಲು ನಿರ್ಧರಿಸಿದೆ. ಮಂಡಳಿಯಲ್ಲಿ ಐವರು ಸದಸ್ಯರಿರುತ್ತಾರೆ. ಮುಖ್ಯಮಂತ್ರಿ ಅಧಿಕಾರೇತರ ಅಧ್ಯಕ್ಷರಾಗಿರುತ್ತಾರೆ. ಈ ಮಂಡಳಿಯು ಮುಂದಿನ ಎರಡು ವರ್ಷಗಳಲ್ಲಿ ಅಯೋಧ್ಯೆಯ ಚಿತ್ರಣವನ್ನೇ ಬದಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ದಾರ್ ಪಟೇಲ್ ಪ್ರತಿಮೆ ಮಾದರಿ: ಅಯೋಧ್ಯೆಯ ಅಭಿವೃದ್ಧಿಗೆ ರಾಜ್ಯ ಈಗಾಗಲೇ 250 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ. ರಾಮ ಮಂದಿರ ನಿರ್ವಣದ ಜೊತೆಯಲ್ಲೇ ಅಯೋಧ್ಯೆಯ ಅಭಿವೃದ್ಧಿಯಾಗಬೇಕೆನ್ನುವುದು ಮುಖ್ಯಮಂತ್ರಿಯ ಆಶಯವಾಗಿದೆ. ಇದು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂಬುದು ಅಧಿಕಾರಿಯೊಬ್ಬರ ಅಭಿಪ್ರಾಯ. ಯೋಗಿ ಆದಿತ್ಯನಾಥ 2017 ಮಾರ್ಚ್
ನಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಯೋಧ್ಯೆಯ ಅಭಿವೃದ್ಧಿಗೆ ವೈಯಕ್ತಿಕ ಆಸಕ್ತಿ ತೋರಿಸುತ್ತಿದ್ದಾರೆ. ದೀಪಾವಳಿ ವೇಳೆ ಅದ್ದೂರಿ ‘ದೀಪೋತ್ಸವ’ ಸಂಪ್ರದಾಯವನ್ನು ಅವರು ಆರಂಭಿಸಿದ್ದಾರೆ. ಗುಜರಾತ್​ನ ಸರ್ದಾರ್ ಪಟೇಲ್ ಪ್ರತಿಮೆಯ ಮಾದರಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
