ಲಾಹೋರ್:ಒಡಹುಟ್ಟಿದವರು ಜೊತೆಯಾಗಿ ಬೆಳೆಯುತ್ತಾರೆ. ದೊಡ್ಡವರಾಗುತ್ತಾ ಉದ್ಯೋಗ, ವಿದ್ಯಾಭ್ಯಾಸ ಮತ್ತು ಇನ್ನಿತರ ಕೆಲಸದ ನಿಮಿತ್ತ ದೂರ ಇರಬೇಕಾದ ಸನ್ನಿವೇಶ ಬರುತ್ತದೆ. ಆದರೆ ಈ ಸಹೋದರ- ಸಹೋದರಿ ಬರೋಬ್ಬರಿ 75 ವರ್ಷಗಳ ನಂತರ ಭೇಟಿಯಾಗುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
1947ರ ಆಗಸ್ಟ್​ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಮೇಲೆ ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳಾಗಿ ವಿಭಜನೆಗೊಂಡವು. ಬಂಗಾಳ ಮತ್ತು ಪಂಜಾಬ್​ ಪ್ರಾಂತ್ಯಗಳೂ ವಿಭಜನೆಗೊಂಡು ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ದೇಶ ಎಂಬ ಹೊಸ ದೇಶಗಳು ರೂಪುಗೊಂಡವು. ಈ ಸಂದರ್ಭದಲ್ಲಿ ಅನೇಕ ಕುಟುಂಬ ಸದಸ್ಯರು ಬೇರ್ಪಟ್ಟರು.ವಿಭಜನೆಯ ಸಮಯದಲ್ಲಿ, ಪಂಜಾಬ್‌ನ ಭಾರತದ ಭಾಗದಿಂದ ಸರ್ದಾರ್ ಭಜನ್ ಸಿಂಗ್ ಅವರ ಕುಟುಂಬವು ದುರಂತವಾಗಿ ಹರಿದುಹೋಯಿತು, ಅಜೀಜ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಸ್ಥಳಾಂತರಗೊಂಡಾಗ ಅವರ ಇತರ ಕುಟುಂಬ ಸದಸ್ಯರು ಭಾರತದಲ್ಲಿಯೇ ಇದ್ದರು.
ಇದನ್ನೂ ಓದಿ:ವಾತಾವರಣದ ವಿಚಿತ್ರ ಆಟ; ಈ ಬಾರಿ ಬೆಂಗಳೂರಲ್ಲಿ ಗಾಳಿ ಮಳೆಗೆ ಮರಗಳು ಉರುಳಿದ್ದು ಯಾಕೆ ಗೊತ್ತಾ?
ದೇಶ ವಿಭಜನೆಯ ಸಂದರ್ಭದಲ್ಲಿ ಪಂಜಾಬ್​ನ ​ಸರ್ದಾರ್​ ಭಜನ್​ ಸಿಂಗ್​ ಕುಟುಂಬವು ಹರಿದು ಹಂಚಿಹೋಗಿತ್ತು. ಸಾಮಾಜಿಕ ಜಾಲತಾಣದ ಮೂಲಕವೇ ಈ ಸುದ್ದಿ ತಿಳಿದ ಕುಟುಂಬಸ್ಥರು ಒಡಹುಟ್ಟಿದವರನ್ನು ಒಂದಾಗಿಸಿದರು. ನಂತರ ಎರಡೂ ಕುಟುಂಬದವರು ಕರ್ತಾರಪುರದ ಗುರುದ್ವಾರ ದರ್ಬಾರ್​ ಸಾಹಿಬ್​ಗೆ ಭೇಟಿ ಕೊಟ್ಟು ಒಟ್ಟಿಗೆ ಊಟ ಮಾಡಿದರು. ಪುನರ್ಮಿಲನದ ಈ ಸಂದರ್ಭದಲ್ಲಿ ಪರಸ್ಪರ ಉಡುಗೊರೆಗಳನ್ನು ಕೊಟ್ಟುಕೊಂಡರು.
An other separated family meetup at kartarpur Corridor (a Corridor of Peace). Mr sheikh Abdul Aziz and his sister Mohinder kaur who got separated at the time of partition in 1947 met at Gurdwara Sri Darbar Sahib kartarpur.Both families were very happy and praised the governmentpic.twitter.com/TACb7O7SjH
— PMU Kartarpur Official (@PmuKartarpur)May 20, 2023

ಭಾರತೀಯಾಗಿರುವ ಪ್ರಜೆ-ಸೋದರಿ 81 ವರ್ಷದ ಮಹೇಂದ್ರ ಕೌರ್, ಪಾಕ್​ ಆಕ್ರಮಿತ ಕಾಶ್ಮೀರದ ಪ್ರಜೆ-ಸೋದರ 78 ವರ್ಷದ ಶೇಖ್​ ಅಬ್ದುಲ್​ ಅಜೀಜ್​ ಕರ್ತಾರಪುರದ ಕಾರಿಡಾರಿನಲ್ಲಿ ಭೇಟಿಯಾಗಿದ್ದಾರೆ. 1947ರ ವಿಭಜನೆಯ ಸಮಯದಲ್ಲಿ ಬೇರ್ಪಟ್ಟ ಒಡಹುಟ್ಟಿದವರು ಮತ್ತೆ ಜತೆಯಾಗಿದ್ದು, ಸಂತೋಷ ಎಂದು ನೆಟ್ಟಿಗರು ಈ ಪೋಸ್ಟ್​ಗೆ ಕಾಮೆಂಟ್​​ ಮಾಡಿದ್ದಾರೆ.
ಒಂದೇ ಬಾರಿಗೆ 5 ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟ ಮಹಿಳೆ; ತಾಯಿ, ಮಕ್ಕಳು ಸುರಕ್ಷಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − eleven =
Remember me
