ನವದೆಹಲಿ:ಸೆಪ್ಟೆಂಬರ್ ತಿಂಗಳಲ್ಲಿ 1,47,686 ಕೋಟಿ ರೂಪಾಯಿ ಸರಕು ಮತ್ತು ಸೇವೆ ತೆರಿಗೆ (ಜಿಎಸ್​ಟಿ) ಆಕರವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 26ರಷ್ಟು ಜಿಗಿತ ಕಂಡಿದೆ. ಜಿಎಸ್​ಟಿ ಸಂಗ್ರಹ ಸತತ ಏಳನೇ ತಿಂಗಳು 1.40 ಲಕ್ಷ ಕೋಟಿ ರೂಪಾಯಿ ಗಡಿಯನ್ನು ದಾಟಿದೆ ಎಂದು ಹಣಕಾಸು ಸಚಿವಾಲಯ ಶನಿವಾರ ತಿಳಿಸಿದೆ. ಒಟ್ಟು ಕೇಂದ್ರೀಯ ಜಿಎಸ್​ಟಿ 25,271 ಕೋಟಿ ರೂ. ಹಾಗೂ ರಾಜ್ಯ ಜಿಎಸ್​ಟಿ 31,813 ಕೋಟಿ ರೂ. ಮತ್ತು ಏಕೀಕೃತ ಜಿಎಸ್​ಟಿ 80,464 ಕೋಟಿ ರೂ. ಇದೆ.ಕರ್ನಾಟಕದಲ್ಲಿ 9,760 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ ಶೇ. 25ರಷ್ಟು ಏರಿಕೆ ಸಾಧಿಸಿದೆ.
ವಾಣಿಜ್ಯ ಎಲ್​ಪಿಜಿ ದರ ಕಡಿತ: ವಿಮಾನ ಇಂಧನ (ಎಟಿಎಫ್) ಬೆಲೆಯಲ್ಲಿ ಶೇಕಡ 4.5 ಕಡಿತ ಮಾಡಲಾಗಿದ್ದು, ವಾಣಿಜ್ಯ ಬಳಕೆಯ 19 ಕೆ.ಜಿ. ಎಲ್​ಪಿಜಿ ಸಿಲಿಂಡರ್ ದರವನ್ನು 25.50 ರೂಪಾಯಿ ಇಳಿಸಲಾಗಿದೆ. ಇದರಿಂದ ಸಿಲಿಂಡರ್ ದರ ದೆಹಲಿಯಲ್ಲಿ 1,859.50 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನಗಳ ಬೆಲೆಗಳು ಇಳಿಯುತ್ತಿರುವ ಹಿನ್ನೆಲೆಯಲ್ಲಿ ಇದು ಜೂನ್​ನಿಂದೀಚೆಗೆ ಮಾಡಲಾದ ಆರನೇ ಅನಿಲ ಬೆಲೆ ಕಡಿತವಾಗಿದೆ. ಗೃಹ ಬಳಕೆಯ 14.2 ಕೆಜಿ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಪರಿಷ್ಕರಣೆ ಆಗಿಲ್ಲ. ಅದರ ಬೆಲೆ 1,053 ರೂಪಾಯಿ ಆಗಿದೆ. ಏವಿಯೇಷನ್ ಟರ್ಬೆನ್ ಫ್ಯುಯಲ್ (ವಿಮಾನ ಇಂಧನ-ಎಟಿಎಫ್) ಬೆಲೆ ಶೇಕಡ 4.5ರಷ್ಟು, ಅಂದರೆ 5,521.17 ರೂಪಾಯಿ ಕಡಿತಗೊಂಡಿದೆ. ಇದರಿಂದಾಗಿ ದೆಹಲಿಯಲ್ಲಿ ಎಟಿಎಫ್ ದರ ಒಂದು ಕಿಲೋ ಲೀಟರ್​ಗೆ 1,15,520.27 ರೂಪಾಯಿ ಆಗಿದೆ. ಎಟಿಎಫ್ ದರ ಪ್ರತಿ 15 ದಿನಕ್ಕೆ ಬದಲಾಗುತ್ತದೆ.
2021-22ನೇ ಸಾಲಿನ ತೆರಿಗೆ ಲೆಕ್ಕಪರಿಶೋಧನಾ (ಆಡಿಟ್) ವರದಿ ಸಲ್ಲಿಕೆಯ ಗಡುವವನ್ನು ಸೆ. 30ರ ಬದಲಿಗೆ ಅಕ್ಟೋಬರ್ 7ರ ವರೆಗೆ ಹಿಗ್ಗಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಯುಪಿಐ ವಹಿವಾಟು ಆಗಸ್ಟ್ ತಿಂಗಳಿಗಿಂತ ಶೇಕಡ 3 ಹೆಚ್ಚಳವಾಗಿದ್ದು ಒಟ್ಟು 678 ಕೋಟಿ ವ್ಯವಹಾರ ನಡೆದಿದೆ. ಈ ವಹಿವಾಟುಗಳ ಒಟ್ಟು ಮೊತ್ತ 11.16 ಲಕ್ಷ ಕೋಟಿ ರೂಪಾಯಿ ಆಗಿದೆ. ಇದು ಆಗಸ್ಟ್​ನಲ್ಲಿ 657 ಕೋಟಿ ವಹಿವಾಟಿನ ಮೂಲಕ 10.73 ಲಕ್ಷ ಕೋಟಿ ರೂ. ನಡೆದಿತ್ತು.
ನಿರುದ್ಯೋಗ ಪ್ರಮಾಣ ಇಳಿಕೆ: ಸೆಪ್ಟೆಂಬರ್​ನಲ್ಲಿ ನಿರುದ್ಯೋಗ ದರವು ಶೇ. 6.43ಕ್ಕೆ ಇಳಿದಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ವರದಿ ತಿಳಿಸಿದೆ.
ಪ್ರತಿ ಲೀಟರ್ ಪೆಟ್ರೋಲ್ ತಲಾ 2 ರೂಪಾಯಿ ಹೆಚ್ಚುವರಿ ಅಬಕಾರಿ ಸುಂಕ ವಿಧಿಸುವ ನಿರ್ಧಾರವನ್ನು ಒಂದು ತಿಂಗಳು, ಡೀಸೆಲ್ ಮೇಲಿನ ಕರವನ್ನು 6 ತಿಂಗಳು ಮುಂದಕ್ಕೆ ಹಾಕಿರುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.
ಆರ್​ಬಿಐ ರೆಪೊ ದರ ಏರಿಕೆ ಮಾಡಿದ ಬೆನ್ನಿಗೆ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್​ಬಿಐ, ಪಿಎನ್​ಬಿ, ಖಾಸಗಿ ವಲಯದ ಎಚ್​ಡಿಎಫ್​ಸಿ, ಐಸಿಐಸಿಐ ಬ್ಯಾಂಕ್​ಗಳ ಸಾಲದ ಮೇಲಿನ ಬಡ್ಡಿ ದರದಲ್ಲಿ 50 ಮೂಲಾಂಶ ಹೆಚ್ಚಳ ಮಾಡಿವೆ. ಇಬಿಎಲ್​ಆರ್ ಮತ್ತು ಎಂಸಿಎಲ್​ಆರ್ ಅಡಿಯಲ್ಲಿ ಸಾಲ ಪಡೆದ ಗ್ರಾಹಕರಿಗೆ ಇದು ಅನ್ವಯ ಆಗಲಿದ್ದು, ಇದರಿಂದಾಗಿ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಇಎಂಐ ಹೊರೆ ಹೆಚ್ಚಲಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 3 =
Remember me
