ಇಂಥದ್ದೊಂದು ಸಮಯ ಬರಬಹುದು ಎಂಬ ನಿರೀಕ್ಷೆ ಎಲ್ಲರಿಗೂ ಇತ್ತು. ಅದೀಗ ನಿಜವಾಗಿದೆ. ಸದ್ಯಕ್ಕೆ ಕನ್ನಡ ಕಿರುತೆರೆಯ ಎಲ್ಲಾ ಚಾನಲ್‍ಗಳಲ್ಲೂ, ಎಲ್ಲಾ ಧಾರಾವಾಹಿಗಳ ಹೊಸ ಕಂತುಗಳೇ ಪ್ರಸಾರವಾಗುತ್ತಿವೆ. ಹೊಸ ಎಪಿಸೋಡುಗಳ ಚಿತ್ರೀಕರಣ ನಿಂತಿರುವುದರಿಂದ ಮತ್ತು ಕ್ರಮೇಣ ಸ್ಟಾಕ್ ಖಾಲಿಯಾಗುತ್ತಿರುವುದರಿಂದ ಮುಂದಿನ ವಾರದಿಂದ ಹಳೆಯ ಎಪಿಸೋಡುಗಳು ರಿಪೀಟ್ ಆಗುವುದು ಅನಿವಾರ್ಯವಾಗಿದೆ.
ಧಾರಾವಾಹಿಗಳಲ್ಲಿ ಹೆಚ್ಚು ದಿನದ ಎಪಿಸೋಡುಗಳ ಸ್ಟಾಕ್ ಇರುವುದಿಲ್ಲ. ಆಗಾಗ ಕಥೆ ಮತ್ತು ಟ್ರ್ಯಾಕ್ ಬದಲಾಗುವುದರಿಂದ, ಹೆಚ್ಚೆಂದರೆ 10 ದಿನಗಳ ಎಪಿಸೋಡುಗಳ ಬ್ಯಾಂಕಿಂಗ್ ಇಟ್ಟುಕೊಳ್ಳಲಾಗುತ್ತದೆ. ಕೆಲವೊಂದು ತಂಡಗಳು ಮಾತ್ರ ಹೆಚ್ಚು ಕಂತುಗಳನ್ನು ಪ್ಲಾನ್ ಮಾಡಿಟ್ಟುಕೊಂಡಿರುತ್ತವೆ. ಮಿಕ್ಕಂತೆ ಚಿತ್ರೀಕರಣ ನಿರಂತರವಾಗಿ ನಡೆಯುತ್ತಿರುತ್ತದರಿಂದ ಸಮಸ್ಯೆಯಾಗುವುದಿಲ್ಲ. ಆದರೆ, ಈ ಬಾರಿ ಹಾಗಲ್ಲ. ಕರೊನಾ ಎಫೆಕ್ಟ್‍ನಿಂದ ಎಲ್ಲದಕ್ಕೂ ಸಮಸ್ಯೆಯಾಗಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಯಾವುದೇ ಚಾನಲ್‍ನ ಬಳಿ ಹೆಚ್ಚು ಬ್ಯಾಂಕಿಂಗ್ ಇಲ್ಲ. ಹೀಗಿದ್ದರೂ, ಕರೊನಾ ಉಪಟಳ ಹೆಚ್ಚಾಗುತ್ತಿರುವುದರಿಂದ, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಆಜ್ಞೆಯ ಮೇರಿಗೆ ಮಾರ್ಚ್ 23ರಿಂದಲೇ ಎಲ್ಲಾ ಧಾರಾವಹಿಗಳ ಚಿತ್ರೀಕರಣ ನಿಲ್ಲಿಸಲಾಗಿತ್ತು. ಹೊಸ ಎಪಿಸೋಡುಗಳ ಚಿತ್ರೀಕರಣ ನಿಂತಿದ್ದರಿಂದ ಮತ್ತು ಹೆಚ್ಚು ಸ್ಟಾಕ್ ಇಲ್ಲದಿದ್ದರಿಂದ, ಹಳೆಯ ಎಪಿಸೋಡುಗಳನ್ನು ರಿಪೀಟ್ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಕನ್ನಡದ ಎಲ್ಲಾ ಪ್ರಮುಖ ಚಾನಲ್‍ನವರು ಆತಂಕಗೊಂಡಿದ್ದರು.
ಆ ಆತಂಕ ಇದೀಗ ನಿಜವಾಗಿದೆ. ಕರೊನಾ ವೈರಸ್ ಹರಡುವುದನ್ನು ತಡೆಗಟ್ಟುವುದಕ್ಕೆ ಕೇಂದ್ರ ಸರ್ಕಾರವು ಮಾರ್ಚ್ 25ರಿಂದ ಏಪ್ರಿಲ್ 14ರವರೆಗೆ ದೇಶವ್ಯಾಪಿ ಲಾಕ್‍ಡೌನ್ ಘೋಷಿಸಿರುವುದರಿಂದ, ಹೊಸ ಎಪಿಸೋಡ್‍ಗಳ ಚಿತ್ರೀಕರಣ ಸಾಧ್ಯವಾಗದೆ, ಮುಂದಿನ ವಾರದಿಂದ ಹಳೆಯ ಎಪಿಸೋಡುಗಳೇ ರಿಪೀಟ್ ಆಗುವ ಸಾಧ್ಯತೆ ಇದೆ. ಇದು ಬರೀ ಧಾರಾವಾಹಿಗಳ ಕಥೆಯಷ್ಟೇ ಅಲ್ಲ, ರಿಯಾಲಿಟಿ ಶೋಗಳನ್ನು ಸಹ ಮರುಪ್ರಸಾರ ಮಾಡುವ ಸಾಧ್ಯತೆ ಹೆಚ್ಚಿದೆ. ಏಪ್ರಿಲ್ 15ರ ನಂತರ ಪರಿಸ್ಥಿತಿ ತಿಳಿಯಾದ ಪಕ್ಷದಲ್ಲಿ ಮತ್ತೆ ಚಿತ್ರೀಕರಣ ಪ್ರಾರಂಭವಾಗಲಿದೆ. ಆ ನಂತರವಷ್ಟೇ ಹೊಸ ಎಪಿಸೋಡುಗಳನ್ನು ನೋಡಬಹುದು. ಅಲ್ಲಿಯವರೆಗೂ ಹಳೆಯ ಕಂತುಗಳನ್ನೇ ನೋಡದೆ ಪ್ರೇಕ್ಷಕರಿಗೆ ಬೇರೆ ದಾರಿ ಇಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
